ETV Bharat / crime

ಪೋಷಕರೊಂದಿಗೆ ಪಿಕ್ನಿಕ್​ಗೆ ಹೋದ ಮಕ್ಕಳು ಪೆನ್ನಾ ನದಿಯಲ್ಲಿ ಮುಳುಗಿ ನೀರುಪಾಲು - ಆಂಧ್ರಪ್ರದೇಶ

ಆಂಧ್ರಪ್ರದೇಶದ ಪೆನ್ನಾ ನದಿಯಲ್ಲಿ ಮುಳುಗಿ ಓರ್ವ ಬಾಲಕಿ, ಓರ್ವ ಬಾಲಕ ಹಾಗೂ ಒಬ್ಬ ಯುವಕ ಸಾವನ್ನಪ್ಪಿದ್ದು, ಮತ್ತೊಬ್ಬ ಯುವಕನಿಗಾಗಿ ಶೋಧ-ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

Three teenagers drown in Penna River in AP, one missing
ಪೋಷಕರೊಂದಿಗೆ ಪಿಕ್ನಿಕ್​ಗೆ ಹೋದ ಮಕ್ಕಳು ನೀರುಪಾಲು
author img

By

Published : Jun 25, 2021, 2:08 PM IST

ಕಡಪ (ಆಂಧ್ರಪ್ರದೇಶ): ಸಂತೋಷವಾಗಿ ಕಾಲ ಕಳೆಯಲೆಂದು ಪಿಕ್ನಿಕ್​ಗೆ ತೆರಳಿದ್ದ ಎರಡು ಕುಟುಂಬಗಳು ಇದೀಗ ತಮ್ಮ ಮಕ್ಕಳನ್ನು ಕಳೆದುಕೊಂಡಿವೆ. ಆಂಧ್ರಪ್ರದೇಶದ ಪೆನ್ನಾ ನದಿಯಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದು, ಓರ್ವ ನಾಪತ್ತೆಯಾಗಿದ್ದಾನೆ.

ಮೃತರನ್ನು ಜಾವೇರಿಯಾ (12), ಅನುಸ್ ಖಾನ್ (15) ಹಾಗೂ ಅಬ್ದುಲ್ ರಶೀದ್ (18) ಎಂದು ಗುರುತಿಸಲಾಗಿದೆ. ಅಬ್ದುಲ್ ವಾಲಿದ್ ಖಾನ್ (19) ಕಾಣೆಯಾದ ಯುವಕ. ಕಡಪ ಮೂಲದ ಎರಡು ಕುಟುಂಬಗಳು ಪಿಕ್ನಿಕ್​ಗೆಂದು ಬಂದು ಪೆನ್ನಾ ನದಿ ತೀರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಜಾವೇರಿಯಾ ನದಿ ನೀರಿಗೆ ಕಾಲಿಟ್ಟಿದ್ದು, ಅವಳ ಹಿಂದೆಯೇ ಮೂವರು ಹೋಗಿದ್ದಾರೆ. ಆದರೆ ಇದು ಪೋಷಕರ ಗಮನಕ್ಕೆ ಬಂದಿರಲಿಲ್ಲ. ಕೆಲವೇ ನಿಮಿಷಗಳಲ್ಲಿ ನಾಲ್ವರೂ ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ: ರೇಖಾ ಕದಿರೇಶ್​ ಕೊಲೆ ಪ್ರಕರಣ: ಆರೋಪಿಗಳಿಗೆ ಗುಂಡೇಟು, ಬಂಧನ

ಸ್ಥಳಕ್ಕೆ ಪೊಲೀಸರು ಹಾಗೂ ಈಜುಗಾರರನ್ನು ಕುಟುಂಬಸ್ಥರು ಕರೆಯಿಸಿಕೊಂಡಿದ್ದು, ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಮೂವರು ಶವವಾಗಿ ಪತ್ತೆಯಾಗಿದ್ದರೆ ಅಬ್ದುಲ್ ವಾಲಿದ್ ಇನ್ನೂ ಸಿಕ್ಕಿಲ್ಲ. ಆತನಿಗಾಗಿ ಶೋಧ-ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮಾತ್ರ ಮುಗಿಲು ಮುಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.