ನೆಲ್ಲೂರು (ಆಂಧ್ರಪ್ರದೇಶ): ಕೊಳದಲ್ಲಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.
ನೆಲ್ಲೂರು ಜಿಲ್ಲೆಯ ವೆಂಕಟಾಚಲಂ ಮಂಡಲದ ಚೆಮುದುಗುಂಟ ಎಂಬಲ್ಲಿರುವ ಕೊಳದಲ್ಲಿ ಬಟ್ಟೆಗಳನ್ನು ನೋಡಿದ ಸ್ಥಳೀಯರು ನಿನ್ನೆ ರಾತ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ ಮೂವರ ಮೃತದೇಹಗಳು ಕೊಳದಲ್ಲಿ ತೇಲುತ್ತಿದ್ದವು. ಈ ವೇಳೆ ಸ್ಥಳೀಯರ ಸಹಾಯದಿಂದ ಪೊಲೀಸರು ಶವಗಳನ್ನು ಹೊರ ತೆಗೆದಿದ್ದಾರೆ.
ಇದನ್ನೂ ಓದಿ: ವಿರುಧುನಗರ್ ಪಟಾಕಿ ದುರಂತ: ಸಾವಿನ ಸಂಖ್ಯೆ 20ಕ್ಕೆ ಏರಿಕೆ
ಮೃತರನ್ನು ಬುಜಾಬುಜನೆಲ್ಲೂರು ನಿವಾಸಿಗಳಾದ 13 ವರ್ಷದ ಅಲೀಮ್, ಸಾಯಿ ಹಾಗೂ ರಾಜೇಶ್ ಎಂದು ಗುರುತಿಸಲಾಗಿದೆ.