ETV Bharat / crime

ಕಲ್ಲಿದ್ದಲು ಬೂದಿ ಉತ್ಖನನ ವೇಳೆ ಹೊಂಡ ಕುಸಿದು ಮೂವರ ದುರ್ಮರಣ - ಇಬ್ಬರು ಗಂಭೀರವಾಗಿ ಗಾಯ

ಹೊಂಡದೊಳಗೆ ಸಿಲುಕಿದ ಐವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Three died when pit collapsed during coal ash excavation
ಕಲ್ಲಿದ್ದಲು ಬೂದಿ ಉತ್ಖನನ ವೇಳೆ ಹೊಂಡ ಕುಸಿದು ಮೂವರ ದುರ್ಮರಣ
author img

By

Published : Jan 31, 2023, 5:08 PM IST

ರಾಯ್‌ಪುರ: ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಪಕ್ಕದ ಕೈಗಾರಿಕಾ ಪ್ರದೇಶವಾದ ಸಿಲ್ತಾರಾದಲ್ಲಿ ಕಲ್ಲಿದ್ದಲು ಬೂದಿ ತೆಗೆಯುತ್ತಿದ್ದ ವೇಳೆ ಹೊಂಡ ಕುಸಿದು ಭಾರೀ ಅವಘಡವೊಂದು ಸಂಭವಿಸಿದ್ದು, ಅವಘಡದಲ್ಲಿ ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷ ಸಾವನ್ನಪ್ಪಿದ್ದಾರೆ. ಅಪ್ರಾಪ್ತೆ ಸೇರಿದಂತೆ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದ್ದು, ನಂತರ ಕಲ್ಲಿದ್ದಲು ಬೂದಿಯಲ್ಲಿ ಹೂತುಹೋಗಿದ್ದ ಜನರನ್ನು ಹೊರತೆಗೆದಿದ್ದಾರೆ. ಅವರಲ್ಲಿ ಗಂಭೀರವಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಲ್ಲಿದ್ದಲು ಬೂದಿ ಉತ್ಖನನದ ವೇಳೆ ಅವಘಡ: ರಾಜಧಾನಿ ರಾಯ್‌ಪುರ ಜಿಲ್ಲೆಯ ಕೈಗಾರಿಕಾ ಪ್ರದೇಶವಾದ ಸಿಲ್ತಾರಾ ಚೌಕಿಯಲ್ಲಿ ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಐದು ಜನರ ಗುಂಪೊಂದು ತೆರೆದ ಪ್ರದೇಶದಲ್ಲಿ ಇಂಡಸ್ಟ್ರಿಗಳಿಂದ ಎಸೆದ ಹಾರು ಬೂದಿಯನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿತ್ತು. ಕಂಪನಿಯು ತೆಗೆದ ಅವಶೇಷಗಳಿಂದ ಅಕ್ಕಪಕ್ಕದ ಗ್ರಾಮಸ್ಥರು ಬೂದಿ ತೆಗೆಯುತ್ತಾರೆ. ಈ ಹಾರು ಬೂದಿಯಲ್ಲಿ ಕಲ್ಲಿದ್ದಲಿನ ಅಂಶವೂ ಇರುತ್ತದೆ. ಈ ಪ್ರದೇಶದಿಂದ ಹೀಗೆ ತೆಗೆದ ಹಾರುಬೂದಿಯಿಂದ, ಕಲ್ಲಿದ್ದಲನ್ನು ಫಿಲ್ಟರ್​ ಮಾಡಿಕೊಳ್ಳುತ್ತಾರೆ. ಹೀಗೆ ಫಿಲ್ಟರ್​ ಮಾಡಿಕೊಂಡ ಕಲ್ಲಿದ್ದಲನ್ನು ಅಡುಗೆ ಉದ್ದೇಶಗಳಿಗಾಗಿ ಬಳಸುತ್ತಾರೆ. ಇದು ಅವರ ನಿತ್ಯದ ಕೆಲಸವಾಗಿತ್ತು.

ಮೂಲಗಳ ಪ್ರಕಾರ, ಇವರು ಇದೇ ರೀತಿ ಇಲ್ಲಿಂದ ಹಾರುಬೂದಿಯನ್ನು ಅಗೆಯುತ್ತಿದ್ದ ಕಾರಣ ಹೊಂಡ ಸುರಂಗದ ಆಕಾರವನ್ನು ಪಡೆದಿತ್ತು. ಇವರು ಹಾರು ಬೂದಿಯನ್ನು ಅಗೆಯುತ್ತಾ ಒಳೊಗೊಳಗೆ ಹೋಗಿದ್ದಾರೆ. ಈ ವೇಳೆ ಏಕಾಏಕಿ ಹೊಂಡ ಕುಸಿದು ಬಿದ್ದು, ಈವರೂ ಅದರೊಳಗೆ ಸಿಕ್ಕಿಬಿದ್ದಿದ್ದಾರೆ. ಮಾಹಿತಿ ಪಡೆದ ತಕ್ಷಣ ರಕ್ಷಣಾ ತಂಡದೊಂದಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಹೊಂಡದೊಳಗೆ ಸಿಲುಕಿದ ಎಲ್ಲರನ್ನೂ ಹೊರತೆಗೆದಿದ್ದಾರೆ. ಆದರೆ ಅದರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಗೊಂಡವರಲ್ಲಿ 15 ವರ್ಷದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ.

ಅಧಿಕಾರಿಗಳು ಹೇಳುವುದೇನು: ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಎಲ್ಲಾ ಸಂತ್ರಸ್ತರು ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಹೊರವಲಯದಲ್ಲಿರುವ ಸಕಾರದ ನಿವಾಸಿಗಳಾಗಿದ್ದಾರೆ. ಸಾವನ್ನಪ್ಪಿದವರನ್ನು ಮೊಹರ್ ಬಾಯಿ ಮನ್ಹರೆ, ಪುನೀತ್ ಕುಮಾರ್ ಮನ್ಹಾರೆ ಮತ್ತು ಪಾಚೋ ಗೆಹ್ರೆ ಎಂದು ಗುರುತಿಸಲಾಗಿದೆ ಎಂದು ಧರ್ಶಿವಾನ್ ಪೊಲೀಸ್ ಠಾಣೆ ಪ್ರಭಾರಿ ಶಿವೇಂದ್ರ ಸಿಂಗ್ ರಜಪೂತ್ ತಿಳಿಸಿದ್ದಾರೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಛತ್ತೀಸ್​ಗಢದಲ್ಲಿ ಇನ್ನೊಂದು ಅವಘಡ: ಛತ್ತೀಸ್​ಗಡದ ಪೆಂಡ್ರಾದಲ್ಲಿ ಇಂದು ವಿದ್ಯುತ್ ಸ್ಪರ್ಶದಿಂದ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಯುವಕನ ತಾಯಿ ಮತ್ತು ಚಿಕ್ಕಮ್ಮ ಕೂಡ ವಿದ್ಯುತ್ ಸ್ಪರ್ಶಿಸಿದ್ದಾರೆ. ಮನೆಯ ಅಂಗಳದಲ್ಲಿ ಬಟ್ಟೆ ಒಣಗಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಇದನ್ನೂ ಓದಿ: ಗುಜರಿ ಅಂಗಡಿಗೆ ಆಕಸ್ಮಿಕ ಬೆಂಕಿ : ಲಕ್ಷಾಂತರ ರೂ ಮೌಲ್ಯದ ಸಾಮಗ್ರಿ ಭಸ್ಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.