ಚೆನ್ನೈ(ತಮಿಳುನಾಡು) : ಕೊಡಂಬಾಕ್ಕಂನ ಮನೆಯೊಂದರಲ್ಲಿ ಬಚ್ಚಿಟ್ಟಿದ್ದ 1,000 ವರ್ಷಗಳಷ್ಟು ಹಳೆಯದಾದ ವಿಗ್ರಹವನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ವಿಗ್ರಹ ಕಳ್ಳಸಾಗಣೆ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಬಹಳ ದಿನಗಳಿಂದ ಬೀಗ ಹಾಕಿದ್ದ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ. ಮನೆಯ ಮಾಲೀಕ ಜಿ ಮಸಿಲಾಮಣಿ ಎಂಬ ವಿಗ್ರಹ ತಯಾರಕನನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ತಂಜಾವೂರು ಜಿಲ್ಲೆಯ ಕುಂಭಕೋಣಂ ಸ್ವಾಮಿಮಲೈ ಬಳಿ ಮಾಸಿಲಾಮಣಿ ತಲೆಮರೆಸಿಕೊಂಡಿರುವುದನ್ನು ಪೊಲೀಸರು ಪತ್ತೆ ಹಚ್ಚಿ ಅಲ್ಲಿಗೆ ತೆರಳಿ ಸೂಕ್ತ ದಾಖಲೆಗಳೊಂದಿಗೆ ದಾಳಿ ಮಾಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಜಿ ಮಾಸಿಲಾಮಣಿ ಎಂಬುವರಿಗೆ ಸೇರಿದ ಜಾಗದಲ್ಲಿ 1,000 ವರ್ಷಗಳಷ್ಟು ಹಳೆಯದಾದ 200 ಕೆಜಿ ಪಂಚ ಲೋಹದ ಶಕ್ತಿ ದೇವತೆಯ ಪ್ರತಿಮೆ, ನಿಂತಿರುವ ಬುದ್ಧನ ಲೋಹದ ಪ್ರತಿಮೆ, ಕುಳಿತಿರುವ ಜೈನ ತೀರ್ಥಂಕರರ ಲೋಹದ ಪ್ರತಿಮೆ, ಆಂಡಾಲ್ ಲೋಹದ ಪ್ರತಿಮೆ, ವಿಷ್ಣು ಲೋಹದ ಪ್ರತಿಮೆಗಳು ಮತ್ತು ನೂರಾರು ವರ್ಷಗಳಷ್ಟು ಹಳೆಯದಾದ ನಟರಾಜನ ವಿಗ್ರಹ, ದೇವಿ ಶಿವಕಾಮಿ ಮತ್ತು ರಮಣ ಮಹರ್ಷಿ ವಿಗ್ರಹಗಳು ದೊರೆತಿವೆ.
ಇದನ್ನೂ ಓದಿ : ಭಾರತದ ಗಡಿಯೊಳಗೆ ಬಂದಿದ್ದ ಇಬ್ಬರು ಪಾಕಿಸ್ತಾನ ಪ್ರಜೆಗಳ ಬಂಧನ