ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಾಂಪೋರ್, ಸೋಪೋರ್ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ದಾಳಿ ನಡೆಸಲು ಉಗ್ರರು ಮಸೀದಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
2020ರ ಜೂನ್ 19 ರಂದು ಪಾಂಪೋರ್, 2020ರ ಜುಲೈ 1 ರಂದು ಸೋಪೋರ್ ಮತ್ತು 2021 ರ ಏಪ್ರಿಲ್ 9 ರಂದು ಶೋಪಿಯಾನ್ನಲ್ಲಿ ನಡೆದ ದಾಳಿಗೆ ಭಯೋತ್ಪಾದಕರು ಮಸೀದಿಗಳನ್ನು ದುರುಪಯೋಗ ಮಾಡಿಕೊಂಡಿದ್ದರು. ಸಾರ್ವಜನಿಕರು, ಮಸೀದಿ ಆಡಳಿತ ಹಾಗೂ ಮಾಧ್ಯಮಗಳು ಇಂತಹ ಕೃತ್ಯಗಳನ್ನು ಖಂಡಿಸಬೇಕು ಎಂದು ವಿಜಯ್ ಕುಮಾರ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬಸ್ ನಿಲ್ದಾಣದ ಮುಂದೆ ನಿಂತಿದ್ದವರ ಮೇಲೆ ಹರಿದ ಲಾರಿ : ಬಾಲಕಿ ಸಾವು, ನಾಲ್ವರ ಸ್ಥಿತಿ ಗಂಭೀರ
ಪಾಂಪೋರ್ನಲ್ಲಿ ಮೂವರು, ಶೋಪಿಯಾನ್ನಲ್ಲಿ ಐವರು ಉಗ್ರರನ್ನು ಅಂದು ಹೊಡೆದುರುಳಿಸಲಾಗಿತ್ತು. ಸೋಪೋರ್ನಲ್ಲಿ ಉಗ್ರರ ದಾಳಿಯಲ್ಲಿ ಒಬ್ಬ ಯೋಧ ಹಾಗೂ ಓರ್ವ ನಾಗರಿಕ ಪ್ರಾಣತೆತ್ತಿದ್ದರು. ಈ ಉಗ್ರರೆಲ್ಲರೂ ಮಸೀದಿಗಳಲ್ಲಿ ಅಡಗಿ ಆಶ್ರಯ ಪಡೆದಿದ್ದರು ಎಂದು ಐಜಿಪಿ ಮಾಹಿತಿ ನೀಡಿದ್ದಾರೆ.