ಪೆನ್ಸಿಲ್ವೇನಿಯಾ : ಹೆದ್ದಾರಿಯಲ್ಲಿ ಹಿಮಪಾತ ಹಾಗೂ ದಟ್ಟ ಮಂಜಿನಿಂದಾಗಿ 50ಕ್ಕೂ ಹೆಚ್ಚು ವಾಹನಗಳ ಸರಣಿ ಅಪಘಾತವಾಗಿರುವ ಘಟನೆ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ನಡೆದಿದೆ. ದುರಂತದಲ್ಲಿ ಮೂವರು ಸಾವನ್ನಪ್ಪಿದರೆ, ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-
What happened today in Pennsylvania can only be described as “Carpocalypse” #Carpocalypse #PA pic.twitter.com/PeWtOJUq4z
— Rob Gill 🇨🇦❤️🇺🇦 (@vote4robgill) March 28, 2022 " class="align-text-top noRightClick twitterSection" data="
">What happened today in Pennsylvania can only be described as “Carpocalypse” #Carpocalypse #PA pic.twitter.com/PeWtOJUq4z
— Rob Gill 🇨🇦❤️🇺🇦 (@vote4robgill) March 28, 2022What happened today in Pennsylvania can only be described as “Carpocalypse” #Carpocalypse #PA pic.twitter.com/PeWtOJUq4z
— Rob Gill 🇨🇦❤️🇺🇦 (@vote4robgill) March 28, 2022
ಅಪಘಾತದ ವೇಳೆ ಕೆಲ ವಾಹನಗಳು ಸುಟ್ಟುಹೋಗಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎನ್ನಲಾಗಿದೆ. ಫಿಲಡೆಲ್ಫಿಯಾದಿಂದ ವಾಯವ್ಯಕ್ಕೆ 100 ಮೈಲುಗಳಷ್ಟು ದೂರದಲ್ಲಿರುವ ಮೈನರ್ಸ್‌ವಿಲ್ಲೆ ಬಳಿ ಸೋಮವಾರ ಬೆಳಗ್ಗೆ 10:30ರ ಸಮಯದಲ್ಲಿ ಘಟನೆ ನಡೆದಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೌಂಟಿಯ ತುರ್ತು ನಿರ್ವಹಣಾ ಕಚೇರಿಯ ಜಾನ್ ಬ್ಲಿಕ್ಲೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅಪಘಾತದ ದೃಶ್ಯಗಳಲ್ಲಿ ಮೊದಲು ಕಪ್ಪು ಬಣ್ಣದ ಕಾರು ಹೆದ್ದಾರಿ ಪಕ್ಕದ ನಾಮಫಲಕದ ಕಂಬಕ್ಕೆ ಡಿಕ್ಕಿ ಹೊಡೆಯುತ್ತದೆ. ಇದಾದ ಕೆಲವೇ ಕ್ಷಣಗಳಲ್ಲಿ ಅಪಘಾತವಾಗಿ ನಿಂತಿದ್ದ ಟ್ರಕ್‌ಗೆ ವೇಗವಾಗಿ ಬಂದ ಮತ್ತೊಂದು ಟ್ರಕ್ ಡಿಕ್ಕಿ ಹೊಡೆದು ಸುಮಾರು 180 ಡಿಗ್ರಿಗಳಷ್ಟು ತಿರುಗಿಸುತ್ತದೆ. ಇದಾದ ಬಳಿಕ ನೀಲಿ ಬಣ್ಣದ ಟ್ರಕ್, ನಂತರ ಕಾರು ಹೀಗೆ ಹತ್ತಾರು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ. ಬಳಿಕ ಕೆಲ ಟ್ರಕ್‌ಗಳು ಸುಟ್ಟು ಕರಕಲಾಗಿವೆ.
ಇದನ್ನೂ ಓದಿ: ಪುಟಿನ್ ವಿರುದ್ಧ ನೈತಿಕ ಆಕ್ರೋಶ ಹೊರಹಾಕಿದ್ದೇನೆ ಅಷ್ಟೇ: ಬೈಡನ್