ETV Bharat / crime

ಪ್ರೇಮಸೌಧದಲ್ಲಿ ಬಾಂಬ್​​ ಇಟ್ಟಿರುವುದಾಗಿ ಫೋನ್​ ಕಾಲ್​: ತಾಜ್​​ಮಹಲ್ ಬಂದ್​

ತಾಜ್​​ಮಹಲ್ ಒಳಗೆ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಕರೆ ಮಾಡಿದ್ದು, ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ತಾಜ್​​ಮಹಲ್ ಮುಚ್ಚಿ, ತನಿಖೆ ನಡೆಸುತ್ತಿದ್ದಾರೆ.

Taj Mahal
ತಾಜ್​​ಮಹಲ್
author img

By

Published : Mar 4, 2021, 11:02 AM IST

Updated : Mar 4, 2021, 11:50 AM IST

ಆಗ್ರಾ (ಉತ್ತರ ಪ್ರದೇಶ): ಸ್ಫೋಟಕ ವಸ್ತು ಇಟ್ಟಿರುವ ಸುಳಿವು ಹಿನ್ನೆಲೆ ಉತ್ತರ ಪ್ರದೇಶದ ಆಗ್ರಾದಲ್ಲಿರುವ ಪ್ರೇಮಸೌಧ ತಾಜ್​​ಮಹಲ್ ಅನ್ನು ಮುಚ್ಚಲಾಗಿದೆ.

ಅಪರಿಚಿತ ವ್ಯಕ್ತಿಯೊಬ್ಬ ಯುಪಿ ಪೊಲೀಸ್​ ಕಂಟ್ರೋಲ್​ ರೂಂಗೆ ತಾಜ್​​ಮಹಲ್ ಒಳಗೆ ಬಾಂಬ್ ಇಟ್ಟಿರುವುದಾಗಿ ದೂರವಾಣಿ ಕರೆ ಮಾಡಿ ಬೆದರಿಸಿದ್ದಾನೆ. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸ್ಥಳಕ್ಕೆ ಧಾವಿಸಿದ್ದಾರೆ.

ಇದನ್ನೂ ಓದಿ: ಪತಿ ಕೊಂದ ಪತ್ನಿಗೆ ಜೀವಾವಧಿ ಶಿಕ್ಷೆ: ದಾವಣಗೆರೆ ಜಿಲ್ಲಾ ಕೋರ್ಟ್​​​​ ಮಹತ್ವದ ತೀರ್ಪು

ಪ್ರವಾಸಿಗರಿಗೆ ನಿರ್ಬಂಧ ಹೇರಿ ತಾಜ್​​ಮಹಲ್ ಬಾಗಿಲುಗಳನ್ನು ಮುಚ್ಚಲಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಆಗ್ರಾ ಎಸ್​​​ಪಿ ಶಿವರಾಮ್​ ಯಾದವ್​​, ’’ನಾವು ಕಂಟ್ರೋಲ್​ ರೂಂ ನಂಬರ್​ಗೆ​​ ಬಂದ ಕರೆಯೊಂದನ್ನ ಸ್ವೀಕರಿಸಿದ್ದು, ಮಿಲಿಟರಿ ನೇಮಕಾತಿಯಲ್ಲಿ ಕೆಲ ವ್ಯತ್ಯಾಸಗಳಾಗಿದ್ದು, ಆ ನೇಮಕಾತಿಯಲ್ಲಿ ತಾನು ಆಯ್ಕೆ ಆಗಿಲ್ಲ. ಹೀಗಾಗಿ ತಾಜ್‌ಮಹಲ್‌ನಲ್ಲಿ ಬಾಂಬ್ ಇಡಲಾಗಿದೆ, ಅದು ಶೀಘ್ರದಲ್ಲೇ ಸ್ಫೋಟಗೊಳ್ಳಲಿದೆ ಎಂದು ಹೇಳಿ ಕರೆ ಕಟ್​ ಮಾಡಿದ್ದಾನೆ‘‘ ಎಂದು ಮಾಹಿತಿ ನೀಡಿದ್ದಾರೆ. ಈ ಕರೆ ಹಿನ್ನೆಲೆಯಲ್ಲಿ ತಾಜ್​ಮಹಲ್​ ಸುತ್ತಮುತ್ತ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಇದೇ ವೇಳೆ ಎಸ್​​​​ಪಿ ಸ್ಪಷ್ಟನೆ ನೀಡಿದ್ದಾರೆ.

  • CISF has been alerted. The man's location was traced to Firozabad. Further investigation underway: Shiv Ram Yadav, SP (Protocol), Agra

    — ANI UP (@ANINewsUP) March 4, 2021 " class="align-text-top noRightClick twitterSection" data=" ">

ಲೊಕೇಷನ್​ ಟ್ರೇಸ್

ಫೋನ್ ಕರೆ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಬೆದರಿಕೆ ಕರೆ ಮಾಡಿದ ವ್ಯಕ್ತಿಯಿರುವ ಸ್ಥಳ ಪತ್ತೆ ಮಾಡಲಾಗಿದ್ದು, ಆತ ಫಿರೋಜಾಬಾದ್​ನಲ್ಲಿರುವುದು ತಿಳಿದು ಬಂದಿದೆ ಎಂದು ಯಾದವ್​ ತಿಳಿಸಿದ್ದಾರೆ.

Last Updated : Mar 4, 2021, 11:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.