ತೂತುಕುಡಿ (ತಮಿಳುನಾಡು): ಕ್ಷುಲ್ಲಕ ಕಾರಣಕ್ಕೆ ತಮಿಳುನಾಡಿನ ತೂತುಕುಡಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಹಂತಕನ ಪತ್ತೆಗೆ 10 ಸದಸ್ಯರ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ.
ಶ್ರೀ ವೈಕುಂಠಂ ಪೊಲೀಸ್ ಠಾಣೆಯ ಬಾಲು ಕೊಲೆಯಾದ ಸಬ್ ಇನ್ಸ್ಪೆಕ್ಟರ್ ಆಗಿದ್ದಾರೆ. ಬಾಲು ತಡರಾತ್ರಿ ಗಸ್ತು ತಿರುಗುತ್ತಿದ್ದಾಗ ಅವರ ಮೇಲೆ ಮುರುಗವೇಲ್ ಎಂಬ ವ್ಯಕ್ತಿ ಸರಕು ಸಾಗಣೆ ಟ್ರಕ್ ಹರಿಸಿ ಹತ್ಯೆ ಮಾಡಿದ್ದಾನೆ.
![Sub Inspector brutally killed in Thoothukudi](https://etvbharatimages.akamaized.net/etvbharat/prod-images/tn-tut-01-police-sub-inspector-murder-photo-script-7204870_01022021082900_0102f_1612148340_503_0102newsroom_1612149766_567.jpg)
ಇದನ್ನೂ ಓದಿ: ಆಟವಾಡುತ್ತಿದ್ದಾಗ ಸ್ಫೋಟಗೊಂಡ ಬಾಂಬ್... ಮೂವರು ಮಕ್ಕಳಿಗೆ ಗಾಯ!
ಮುರುಗವೇಲ್ ಕುಡಿದುಕೊಂಡು ಬೀದಿಗಳಲ್ಲಿ ಅನುಚಿತವಾಗಿ ವರ್ತಿಸಿರುವುದನ್ನು ಕಂಡ ಸಬ್ ಇನ್ಸ್ಪೆಕ್ಟರ್ ಬಾಲು, ಆತನಿಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಕೋಪಗೊಂಡ ಮುರುಗವೇಲ್ ಕೃತ್ಯ ಎಸಗಿ ಪರಾರಿಯಾಗಿದ್ದಾನೆ. ಈತನನ್ನು ಬಂಧಿಸಲು ಎಸ್‌ಪಿ ಜಯಕುಮಾರ್ ನೇತೃತ್ವದಲ್ಲಿ 10 ಸದಸ್ಯರ ವಿಶೇಷ ತಂಡವನ್ನು ರಚಿಸಲಾಗಿದ್ದು, ತನಿಖೆ ಮುಂದುವರೆದಿದೆ.