ETV Bharat / crime

ಕ್ಷುಲ್ಲಕ ಕಾರಣಕ್ಕೆ ತಂದೆಯ ಕೈ ಬೆರಳು ಮತ್ತು ಖಾಸಗಿ ಅಂಗ ಕತ್ತರಿಸಿದ ಮಗ - ಆರೋಪಿ ಆರ್ಪಿತ್​

ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಗನಿಂದ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ - ಘಟನೆ ಬಳಿಕ ತಲೆಮರಿಸಿಕೊಂಡ ಆರೋಪಿ - ತಂದೆಗೆ ಚಿಕಿತ್ಸೆ ಕೊಡಿಸಿದವರ ಮೇಲೆ ಕೊಲೆ ಬೆದರಿಕೆ.

ಕ್ಷುಲ್ಲಕ ಕಾರಣಕ್ಕೆ ತಂದೆಯ ಕೈ ಬೆರಳು ಮತ್ತು ಖಾಸಗಿ ಅಂಗವನ್ನು ಕತ್ತರಿಸಿದ ಮಗ

author img

By

Published : Jan 31, 2023, 10:56 PM IST

ಕಾಶಿಪುರ ( ಉತ್ತರಾಖಂಡ​): ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಜೊತೆಗೂಡಿ ತನ್ನ ತಂದೆಯ ಕೈಬೆರಳು ಹಾಗೂ ಖಾಸಗಿ ಅಂಗವನ್ನು ಕತ್ತರಿಸಿರುವ ಘಟನೆ ಉತ್ತರಾಖಂಡದ ಕಾಶಿಪುರದಲ್ಲಿ ನಡೆದಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ ‘‘ಡಿಸೆಂಬರ್​ 26ರ ಸಂಜೆ ಮಗ ಅರ್ಪಿತ್​ ತನ್ನ ಮೂವರು ಸ್ನೇಹಿತರೊಂದಿಗೆ ತನ್ನ ತಂದೆಯ ಮೇಲೆ ಮರ ಕಡಿಯುವ ಯಂತ್ರದಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಎಡಗೈನ ಬೆರಳುಗಳು ಮತ್ತು ಖಾಸಗಿ ಅಂಗವನ್ನು ಕತ್ತರಿಸಿದ್ದಾನೆ ಎಂದು ಹಲ್ಲೆಗೊಳಗಾದ ವ್ಯಕ್ತಿ ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಗನನ್ನು ಹೊರತು ಪಡಿಸಿ, ಹಲ್ಲೆಗೊಳಗಾದ ವ್ಯಕ್ತಿಯು ಇಬ್ಬರು ಆರೋಪಿಗಳನ್ನು ಗುರತಿಸಿದ್ದಾರೆ. ಇಬ್ಬರು ಆರೋಪಿಗಳು ಕಾಶಿಪುರದ ನಿವಾಸಿಗಳಾಗಿದ್ದು, ರೋಹಿತ್​ ವರ್ಮಾ ಮತ್ತು ರಾಹುಲ್​ ಸೈನಿ ಎಂದು ತಿಳಿದು ಬಂದಿದೆ. ಘಟನೆಯ ನಂತರ ಹಲ್ಲೆಗೊಳಗಾದ ವ್ಯಕ್ತಿಯ ಸಹೋದರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ತಂದೆಗೆ ಚಿಕಿತ್ಸೆ ಕೊಡಿಸಿದ್ದಾರೆ ಎಂದು ತಿಳಿದ ಆರೋಪಿ ಆರ್ಪಿತ್​ ತನ್ನ ಚಿಕ್ಕಪ್ಪ ಮತ್ತು ಮಗನ ಮೇಲೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಮಾತನಾಡಿದ ಕಾಶಿಪುರ ಪೊಲೀಸ್​ ವರಿಷ್ಠಾಧಿಕಾರಿ ಅಭಯ್​ ಸಿಂಗ್​ ‘‘ಹಲ್ಲೆಗೊಳಗಾದ ವ್ಯಕ್ತಿಯು ಘಟನೆ ನಡೆದು ಹಲವು ದಿನಗಳ ನಂತರ ಬಂದು ದೂರು ನೀಡಿದ್ದಾರೆ. ಹಲ್ಲೆಗೊಳಗಾದವರ ಮಗ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ ಮತ್ತು ತಂದೆ ಮತ್ತು ಮಗ ಪ್ರತ್ಯೇಕವಾಗಿ ವಾಸಿಸುತ್ತಿದ್ದು. ಇಬ್ಬರ ನಡುವೆ ಕೆಲವು ವಿಷಯಗಳಿಗೆ ನಿರಂತರವಾಗಿ ಜಗಳವಾಗುತ್ತಲೇ ಇತ್ತು. ಆದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ತನ್ನ ಸ್ನೇಹಿತರೊಂದಿಗೆ ಸೇರಿ ತಂದೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಅಪಾರ್ಟ್‌ಮೆಂಟ್​ನಲ್ಲಿ ಅಗ್ನಿ ದುರಂತ: ನಾಲ್ವರು ಮಕ್ಕಳು ಸೇರಿ 13 ಜನರ ಸಾವು

ಬುದ್ಧಿವಾದ ಹೇಳಿದ್ದಕ್ಕೆ ತಂದೆಯನ್ನೇ ಹತ್ಯೆ ಮಾಡಿದ ಮಗ: ಗುಜರಾತ್​ನ ಸೂರತ್​ನಲ್ಲಿ ಮಗನಿಂದಲೇ ತಂದೆಯ ಹತ್ಯೆ ನಡೆದಿರುವ ಘಟನೆ ಸೋಮವಾರ ನಡೆದಿದೆ. ತಂದೆ ತನ್ನ ಮಗನಿಗೆ ಲೈಟ್​ ಆಫ್​ ಮಾಡು ಎಂದು ಹೇಳಿದ್ದಕ್ಕೆ ಮಗನು ತಂದೆಯ ಜೊತೆ ಗಲಾಟೆ ಮಾಡಿದ್ದ. ಇದಾದ ಬಳಿಕ ಸಿಟ್ಟಿಗೆದ್ದ ಮಗ ತಂದೆಯನ್ನೇ ಕೊಂದಿದ್ದಾನೆ. ಈ ಘಟನೆ ಬಗ್ಗೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಾಹಿತಿಯ ಪ್ರಕಾರ, ಶಂಕರ್​ ಮುಕಬದಿರ್​ ಎಂಬಾತ ಮನೆಯಲ್ಲಿ ದೀಪಗಳನ್ನು ಸ್ವಿಚ್​ ಆಫ್​ ಆನ್​ ಮಾಡುತ್ತಿದ್ದ, ಅಷ್ಟರಲ್ಲಿ ತಂದೆ ದೀಪವನ್ನು ಆನ್​ ಆಫ್​ ಮಾಡಿದ್ದಕ್ಕೆ ಬೈದಿದ್ದಾರೆ. ಇದಕ್ಕೆ ಅಪ್ಪ ಮಗನ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪಗೊಂಡ ಮಗನು ತನ್ನ ತಂದೆಯ ಮೇಲೆ ಮಸಾಲೆ ರುಬ್ಬುವ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಆತನ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಅತ್ಯಾಚಾರ ಪ್ರಕರಣ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.