ETV Bharat / crime

ಅಯೋಧ್ಯಾ ಫ್ಲೈಓವರ್‌ನಲ್ಲಿ ನಿಂತಿದ್ದ ಬಸ್​ಗೆ ಟ್ರಕ್​ ಡಿಕ್ಕಿ: ಆರು ಮಂದಿ ಸಾವು - ಉತ್ತರ ಪ್ರದೇಶ ಭೀಕರ ರಸ್ತೆ ಅಪಘಾತ

ಮಧ್ಯಪ್ರದೇಶದ ಬಳಿಕ ಉತ್ತರ ಪ್ರದೇಶದಲ್ಲೊಂದು ಭೀಕರ ರಸ್ತೆ ಅಪಘಾತ ನಡೆದಿದ್ದು, ಆರು ಮಂದಿ ಬಲಿಯಾಗಿದ್ದಾರೆ.

six died in Ayodhya road accident
ಅಯೋಧ್ಯೆ ಫ್ಲೈಓವರ್‌ನಲ್ಲಿ ನಿಂತಿದ್ದ ಬಸ್​ಗೆ ಟ್ರಕ್​ ಡಿಕ್ಕಿ
author img

By

Published : Mar 23, 2021, 8:58 AM IST

ಅಯೋಧ್ಯಾ (ಉತ್ತರ ಪ್ರದೇಶ): ಬಸ್​ ಹಾಗೂ ಟ್ರಕ್​ ನಡುವೆ ಡಿಕ್ಕಿಯಾಗಿ ಆರು ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯ ಫ್ಲೈಓವರ್‌ನಲ್ಲಿ ನಡೆದಿದೆ.

ಇಂದು ನಸುಕಿನ ಜಾವ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಮೊದಲು ಎರಡು ಬಸ್​ಗಳು ಒಂದಕ್ಕೊಂದು ತಾಗಿದ್ದು, ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿರಲಿಲ್ಲ. ಒಬ್ಬ ಚಾಲಕ ಕೆಳಗಿಳಿದು ಬಸ್​ಗೆ ಏನಾದರೂ ಹಾನಿಯಾಗಿದೆಯಾ ಎಂದು ನೋಡುತ್ತಿರುವ ವೇಳೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್​ವೊಂದು​ ಬಸ್​ಗೆ ಗುದ್ದಿ, ದುರಂತ ಸಂಭವಿಸಿದೆ.

ಇದನ್ನೂಓದಿ: ಬೆಳ್ಳಂಬೆಳಗ್ಗೆ ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: 13 ಮಂದಿ ದುರ್ಮರಣ

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂದು ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಬಸ್-ಆಟೋ ಡಿಕ್ಕಿಯಾಗಿ 13 ಜನರು ಅಸುನೀಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.