ETV Bharat / crime

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯ್ದೆಯಡಿ ಇಬ್ಬರ ಬಂಧನ - ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಬಂಧಿತರನ್ನು ಶಿರಸಿ ಮೂಲದ ರವಿ ಪಟಗಾರ (35) ಹಾಗೂ ಇಲ್ಲಿನ ಶಿರಾಲಿ ಗುಡಿಹಿತ್ತಲ್ ನಿವಾಸಿ ಶಿವರಾಜು ನಾಯ್ಕ (22) ಎಂದು ಗುರುತಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

arrested two peoples under Poxo Act
ಪೋಕ್ಸೋ ಕಾಯ್ದೆಯಡಿ ಇಬ್ಬರ ಬಂಧನ
author img

By

Published : Mar 7, 2021, 4:58 PM IST

ಭಟ್ಕಳ: ತಾಲೂಕಿನ ಶಿರಾಲಿ ಚಿತ್ರಾಪುರದಲ್ಲಿ 14 ವರ್ಷದ ಶಾಲಾ ಬಾಲಕಿಯೋರ್ವಳನ್ನು ಪುಸಲಾಯಿಸಿ, ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.

ಓದಿ: ಜಾರಕಿಹೊಳಿ ಸಹೋದರರಿಂದ ಸಂಜೆ ತುರ್ತು ಸುದ್ದಿಗೋಷ್ಠಿ

ಶಿರಸಿ ಮೂಲದ ರವಿ ಪಟಗಾರ (35) ಹಾಗೂ ಇಲ್ಲಿನ ಶಿರಾಲಿ ಗುಡಿಹಿತ್ತಲ್ ನಿವಾಸಿ ಶಿವರಾಜು ನಾಯ್ಕ (22) ಎಂದು ಗುರುತಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಾಲಕಿಯ ತಾಯಿ ರವಿ ಪಟಗಾರ ಎಂಬಾತನ ಮೇಲೆ ದೂರು ನೀಡಿದ್ದರು. ಆದರೆ ಪೊಲೀಸ್ ವಿಚಾರಣೆಯ ವೇಳೆ ಶಿವರಾಜು ನಾಯ್ಕನ ಹೆಸರೂ ಬೆಳಕಿಗೆ ಬಂದಿತ್ತು.

9ನೇ ತರಗತಿ ಓದುತ್ತಿದ್ದ ಪಕ್ಕದ ಸಿಗಂಧೂರು ಮೂಲದ ಸಂತ್ರಸ್ತ ಶಾಲಾ ಬಾಲಕಿಯು ಈ ಹಿಂದೆ ತನ್ನ ತಾಯಿಯೊಂದಿಗೆ ಚಿತ್ರಾಪುರದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಳು. ನಂತರ ಮುರುಡೇಶ್ವರ ತೆರ್ನಮಕ್ಕಿಯಲ್ಲಿ ಇನ್ನೊಂದು ಮನೆಯನ್ನು ಬಾಡಿಗೆಗೆ ಪಡೆದು ನೆಲೆಸಿದ್ದರು. ಸಂತ್ರಸ್ತ ಬಾಲಕಿಯು ತನ್ನ ಗೆಳತಿಯ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದು, ಆರೋಪಿಗಳೊಂದಿಗಿನ ಪರಿಚಯ ಸ್ನೇಹಕ್ಕೆ ತಿರುಗಿ ಆಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಸದ್ಯ ಸಂತ್ರಸ್ತ ಬಾಲಕಿಯು ಕಾರವಾರ ಸಾಂತ್ವನ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.