ಕಾರವಾರ: ಆಟೋ ರಿಕ್ಷಾದಲ್ಲಿ ಕರೆದೊಯ್ದು ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದೆ ಇಬ್ಬರು ಆರೋಪಿಗಳನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಕೋನಳ್ಳಿಯ ನಿವಾಸಿ ಅಖಿಲ್ ಈಶ್ವರ ಅಡಿಗುಂಡಿ (20) ಹಾಗೂ ಹೊನ್ನಾವರ ಕಡತೋಕಾದ ಹೆಬ್ಳೆಕೊಪ್ಪ ನಿವಾಸಿ ಸಮರ್ಥ ಜಟ್ಟಿ ಮುಕ್ರಿ (20) ಬಂಧಿತರು. ದೌರ್ಜನ್ಯ ನಡೆದ ವಿಷಯ ತಿಳಿದ ಕೂಡಲೇ ಪೋಷಕರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪ್ರಕರಣ ಸಂಬಂಧ ಬಾಲಕಿಯ ಹೇಳಿಕೆಯ ಆಧಾರದಲ್ಲಿ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದನ್ನೂ ಓದಿ: ಸಿಬ್ಬಂದಿ ವೇಷದಲ್ಲಿ ಕೊಡಗು ಜಿಲ್ಲಾಸ್ಪತ್ರೆಗೆ ನುಗ್ಗಿದ ಖದೀಮ.. ಬ್ಯಾಗ್, ಬೈಕ್ ಎಗರಿಸಿ ಪರಾರಿ