ನವದೆಹಲಿ: ತಮಿಳುನಾಡಿನಲ್ಲಿ ಅತ್ಯಂತ ಜನಪ್ರಿಯವಾಗಿರುವ ಸರವಣ ಮಳಿಗೆಗಳ ಮೇಲೆ ದಾಳಿ ಮಾಡಿದ್ದ ಪ್ರಕರಣದಲ್ಲಿ ಬರೋಬ್ಬರಿ 1 ಸಾವಿರ ಕೋಟಿ ರೂಪಾಯಿಗಳ ಅವ್ಯವಹಾರ ನಡೆಸಿರುವುದು ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ಬಳಿಕ ಪತ್ತೆಯಾದ ಅಕ್ರಮ ಆಸ್ತಿ ಬಗ್ಗೆ ಮಾಹಿತಿ ನೀಡಿದ ಐಟಿ ಇಲಾಖೆ, ಸೂಪರ್ ಸರವಣ ಸ್ಟೋರ್ಸ್‌ಗೆ ಸಂಬಂಧಿಸಿದ ಅಂಗಡಿ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು. ಚೆನ್ನೈ, ಕೊಯಮತ್ತೂರು, ಮಧುರೈ ಹಾಗೂ ತಿರುನಲ್ವೇಲಿಯಲ್ಲಿ ನಡೆಸಿದ್ದ ಶೋಧ ಕಾರ್ಯದಲ್ಲಿ ಅವ್ಯವಹಾರ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.
ತೆರಿಗೆ ವಂಚಿತ ಹಣದಿಂದ 150 ಕೋಟಿ ಮೌಲ್ಯದ ಉಡುಪು ತಯಾರಿಕೆ ಹಾಗೂ ಚಿನ್ನಾಭರಣ ಘಟಕ ಖರೀದಿಸಿದ್ದಾರೆ. ದಾಳಿ ವೇಳೆ, 10 ಕೋಟಿ ನಗದು ಹಾಗೂ 6 ಕೋಟಿ ರೂ.ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಉದ್ಯೋಗಿಗಳ ಭವಿಷ್ಯ ನಿಧಿ: 22.55 ಕೋಟಿ ಖಾತೆದಾರರಿಗೆ ಶೇ 8.50 ಬಡ್ಡಿ ಜಮೆ