ವಿಶಾಖಪಟ್ಟಣಂ(ಆಂಧ್ರಪ್ರದೇಶ): ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 1 ಕೋಟಿ 50 ಲಕ್ಷ ಮೌಲ್ಯದ ಬರೋಬ್ಬರಿ 3 ಟನ್ ಕ್ಯಾನಬೀಸ್ ಹಾಗೂ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಲಾರಿ ಚಾಲಕ, ಉತ್ತರ ಪ್ರದೇಶದ ಮೂಲದ ಮೊಹಮ್ಮದ್ ಲಾಯಕ್(32), ತಜೀಲ್ ಅಲಮ್ (30) ಎಂಬುವರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಮಿನುಮುಲೂರು ನಿಂದ ದೆಹಲಿಗೆ ಕಂಟೈನರ್ ಮೂಲಕ ಮಾದಕವಸ್ತು ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ವಿಶಾಖಪಟ್ಟಣಂ ವಿಶೇಷ ಪಡೆ, ಟಾಸ್ಕ್ ಫೋರ್ಸ್ ಮತ್ತು ಪರವಡ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ: ಮಂಗಳೂರು: Air India ನಿವೃತ್ತ ಮ್ಯಾನೇಜರ್ 14ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ
ಉತ್ತರ ಪ್ರದೇಶದ ಅಮರೋಹರ್ ಜಿಲ್ಲೆಯ ಜ್ಯೋತಿಬಾಪುಲೆ ನಗರದ ವ್ಯಕ್ತಿಯೊರ್ವ ಲಾರಿ ಚಾಲಕ ಮೊಹಮ್ಮದ್ ನಾಯಕ್ ಹಾಗೂ ಕ್ಲೀನರ್ ತಜೀಬ್ ಅಲಮ್‌ಗೆ ತಲಾ 10 ಸಾವಿರ ರೂಪಾಯಿ ಕೊಡುವುದಾಗಿ ಹೇಳಿ ಅವರಿಂದ ಆಧಾರ್‌ಗಳನ್ನು ಪಡೆದಿದ್ದಾನೆ.
ಬಳಿಕ ಅವರನ್ನು ಕಾರಿನ ಮೂಲಕ ದೆಹಲಿಗೆ ಕಳುಹಿಸಿ, ಮೇ 30 ರಂದು ವಿಮಾನದಲ್ಲಿ ವಿಶಾಖಪಟ್ಟಣಂಗೆ ಕಳುಹಿಸಿಕೊಟ್ಟಿದ್ದಾನೆ. ಅಲ್ಲಿಂದ ಲಾರಿ ಯಾರ್ಡ್ ತೆರಳಿ ಅಲ್ಲೇ 1 ವಾರ ತಂಗಿದ್ದು, ಜೂನ್ 7 ರಂದು ಅಪರಿಚಿತ ವ್ಯಕ್ತಿ ಉತ್ತರ ಪ್ರದೇಶ ನೋಂದಾಯಿತ ಲಾರಿಯನ್ನು ತಮಗೆ ನೀಡಿ ಮಿನಿಮುಲೂರು ಕರೆತಂದು ಅಲ್ಲಿ ಕ್ಯಾನಬೀಸ್ ತುಂಬಿ ಕಳುಹಿಸಿದ್ದಾರೆ ಎಂದು ಬಂಧಿತರು ವಿಚಾರಣೆ ಬಾಯ್ಬಿಟ್ಟಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾದಕವಸ್ತುಗಳ ಸರಬರಾಜು ಮಾಡ್ತಿದ್ದವರು ಜಾಡು ಹಿಡಿಯಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.