ETV Bharat / crime

ಹಾಸನದಲ್ಲಿ ಬರ್ಬರ ಕೊಲೆ: ರೌಡಿಶೀಟರ್​ ತಲೆ ಎರಡು ಹೋಳು ಮಾಡಿ ದುಷ್ಕರ್ಮಿಗಳು ಪರಾರಿ!

ಹಾಸನದಲ್ಲಿ ನೆತ್ತರು ಹರಿದಿದೆ. ರೌಡಿಶೀಟರ್​​ಯೋರ್ವನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಮೂರು ವಾರಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ಈತ ಇಂದು ಹೆಣವಾಗಿ ಬಿದ್ದಿದ್ದಾನೆ.

ರೌಡಿಶೀಟರ್​​ ಬರ್ಬರ ಹತ್ಯೆ
ರೌಡಿಶೀಟರ್​​ ಬರ್ಬರ ಹತ್ಯೆ
author img

By

Published : May 23, 2021, 6:14 PM IST

Updated : May 23, 2021, 7:01 PM IST

ಹಾಸನ: ನಗರದಲ್ಲಿ ಲಾಕ್​ಡೌನ್​ ನಡುವೆ​ ಮಾರಕಾಸ್ತ್ರಗಳು ಸದ್ದು ಮಾಡಿವೆ. ಬೈಕಿನಲ್ಲಿ ತೆರಳುತ್ತಿದ್ದ ರೌಡಿಶೀಟರ್ ಓರ್ವನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ನಗರದ ವಲ್ಲಭಭಾಯಿ ರಸ್ತೆಯ ಹೂವಿನ ವ್ಯಾಪಾರಿ ಭರತ್ ಕೊಲೆಯಾದ ರೌಡಿಶೀಟರ್​​​​. ಸಂತೆಪೇಟೆಯ 80 ಅಡಿ ರಸ್ತೆಯ ಮಧ್ಯೆ ಈ ಘಟನೆ ನಡೆದಿದೆ. ಬಿಡಿ ಹೂಗಳನ್ನು ತೆಗೆದುಕೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಎರಡು ಬೈಕ್​​ಗಳಲ್ಲಿ ಬಂದ 4 ಜನ ದುಷ್ಕರ್ಮಿಗಳು ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.

ಹಾಸನದಲ್ಲಿ ಬರ್ಬರ ಕೊಲೆ

ರೌಡಿಶೀಟರ್​​ ಭರತ್​​ ಕೊಲೆ ಪ್ರಕರಣ ಹಾಗೂ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಿದ್ದ. ಮೂರು ವಾರಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ. ಹಳೆಯ ದ್ವೇಷದ ಹಿನ್ನೆಲೆ ಇಂದು ಬರ್ಬರವಾಗಿ ಹತ್ಯೆಗೀಡಾಗಿದ್ದಾನೆ. ತಲೆಯನ್ನು ಎರಡು ಭಾಗ ಮಾಡಿರುವ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಆರೋಪಿಗಳ ಬಂಧನಕ್ಕೆ ಈಗಾಗಲೇ ವಿಶೇಷ ತಂಡ ರಚಿಸಿರುವ ಪೊಲೀಸ್​​ ಇಲಾಖೆ, ಕೆಲವು ಸುಳಿವುಗಳ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ. ಒಂದೆರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Last Updated : May 23, 2021, 7:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.