ರಾಜ್‌ಕೋಟ್(ಗುಜರಾತ್): ರಾಜ್‌ಕೋಟ್ ಜಿಲ್ಲೆಯ ಉಪ್ಲೇಟ ಪಟ್ಟಣದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಅಕ್ಕನ ಗಂಡ ಮೂರು ಬಾರಿ ಗರ್ಭಪಾತ ಮಾಡಿಸಿದ್ದರೆ ಇನ್ನೊಂದೆಡೆ ಮದುವೆಗೂ ಮುನ್ನ ಆಕೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವರನೂ ಸಹ ಹಲವು ಬಾರಿ ಸಂಬಂಧ ಬೆಳೆಸಿ ಆಕೆಯನ್ನು ತಾಯಿಯಾಗಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಅಪ್ರಾಪ್ತೆ ಮೇಲೆ ಮಾವನೇ ಅತ್ಯಾಚಾರವೆಸಗಿದ ಮತ್ತು ಗರ್ಭಪಾತ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಲೇಟ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಇದರಲ್ಲಿ ನಿಶ್ಚಿತ ವರ ಕೂಡ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಗರ್ಭಿಣಿಯಾಗಿಸಿದ್ದು, ಬಳಿಕ ಆಕೆ ಮಗುವಿಗೆ ಜನ್ಮ ನೀಡಿದ್ದು, ಆ ನವಜಾತ ಶಿಶು ಮೃತಪಟ್ಟಿದೆ. ಆ ಶಿಶುವನ್ನು ಹೂತು ಹಾಕಿರುವ ಪ್ರಕರಣ ಕುರಿತಾಗಿ ಅಪ್ರಾಪ್ತೆಯ ಭಾವಿಪತಿ ರಾಜ್‌ಕೋಟ್ ಮೂಲದ ವರ ಇಮ್ರಾನ್ ವಿರುದ್ಧ ಉಪ್ಲೇಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಕ್ಕನ ಗಂಡನಿಂದಲೂ ಅತ್ಯಾಚಾರ: ಸಂತ್ರಸ್ತೆ ಅಪ್ರಾಪ್ತೆಯ ಅಕ್ಕನನ್ನು ಉಪ್ಲೇಟಾ ಪಟ್ಟಣದ ವ್ಯಕ್ತಿಯೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಹೀಗಾಗಿ ಬಾಲಕಿ ಕೂಡ ತನ್ನ ಅಕ್ಕನೊಂದಿಗೆ ವಾಸಿಸುತ್ತಿದ್ದಳು. ಇದರ ನಡುವೆ ಅಕ್ಕ ಮನೆಯಲ್ಲಿ ಇಲ್ಲದಿದ್ದಾಗ ಅಪ್ರಾಪ್ತೆಯನ್ನು ಪುಸಲಾಯಿಸಿ, ಮಾವನು ನಾಲ್ಕು ವರ್ಷಗಳ ಕಾಲ ಅತ್ಯಾಚಾರ ಎಸಗಿದ್ದಾನೆ. ಇದರ ಮಧ್ಯೆ ಮೂರು ಬಾರಿ ಗರ್ಭಿಣಿ ಆಗಿದ್ದ ಬಾಲಕಿಗೆ ಗರ್ಭಪಾತ ಮಾಡಿಸಿರುವ ಮಾಹಿತಿಯೂ ಬೆಳಕಿಗೆ ಬಂದಿದೆ.
ನಿಶ್ಚಿತ ವರನಿಂದಲೂ ದೈಹಿಕ ಸಂಬಂಧ : 2019ರಲ್ಲಿ ಅಪ್ರಾಪ್ತೆಯ ನಿಶ್ಚಿತಾರ್ಥವೂ ರಾಜ್‌ಕೋಟ್ ಮೂಲದ ಇಮ್ರಾನ್ ಯೂನುಸ್ಭಾಯ್ ಸಂಜತ್ ಎಂಬಾತನ ಜತೆಗೆ ನಡೆದಿತ್ತು. ಬಹಳ ದಿನದ ಬಳಿಕ ಬಾಲಕಿ ತನ್ನ ಭಾವಿಪತಿ ಇಮ್ರಾನ್ ಜತೆಗೆ ಭೇಟಿಯಾಗಲು ಒಂದು ದಿನ ಇರಲು ರಾಜ್ ಕೋಟ್ ಗೆ ಬಂದಿದ್ದಳು. ಅಪ್ರಾಪ್ತೆ ದೇಹದ ಸೌಂದರ್ಯವು ಇಮ್ರಾನ್ಅನ್ನು ಆಕರ್ಷಿಸಿದೆ. ಆಗ ಆತ ತನ್ನ ಕಾಮತೃಷೆ ತೀರಿಸಿಕೊಳ್ಳಲು ಇಮ್ರಾನ್ ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿರುವ ವಿಷಯವೂ ಮುನ್ನೆಲೆಗೆ ಬಂದಿದೆ. 2020 ರಲ್ಲಿ ಮತ್ತೆ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ.
ಇಮ್ರಾನ್ ತಕ್ಷಣ ಅಪ್ರಾಪ್ತೆಗೆ 19 ವರ್ಷ ಎಂದು ದಾಖಲಿಸಿ ರಾಜ್‌ಕೋಟ್ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾನೆ. ಇಲ್ಲಿ ಅಪ್ರಾಪ್ತೆ ಮಗುವಿಗೆ ಜನ್ಮ ನೀಡಿದ್ದಾಳೆ, ಆದರೆ ಮಗು ಜನಿಸಿದ ಕೂಡಲೇ ಸಾವನ್ನಪ್ಪಿದೆ. ಹೀಗಾಗಿ ಇಮ್ರಾನ್ ಮತ್ತು ಅಪ್ರಾಪ್ತೆಯ ಸಂಬಂಧಿಕರು ಸೇರಿಕೊಂಡು ಉಪ್ಲೇಟ ಸ್ಮಶಾನದಲ್ಲಿ ಮೃತ ಶಿಶುವನ್ನು ಹೂತು ಹಾಕಿದ್ದಾರೆ.
ಆದರೆ ಅಕ್ಕನ ಗಂಡ ಎಸಗಿದ್ದ ಕೃತ್ಯದ ವಿರುದ್ಧದ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ಆತನು, ಸತ್ತಿರುವ ಮಗುವನ್ನು ಹೂತು ಹಾಕಿರುವ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾನೆ. ಪೋಕ್ಸೊ ನ್ಯಾಯಾಲಯವು ಜೆಟ್‌ಪುರ ಮಂಡಲ್‌ನ ಡಿವೈಎಸ್‌ಪಿ ರೋಹಿತ್‌ಸಿಂಗ್ ದೊಡಿಯಾ ಅವರಿಗೆ ಅಪ್ರಾಪ್ತೆಯ ಭಾವಿಪತಿ ಇಮ್ರಾನ್ ವಿರುದ್ಧ ದೂರು ದಾಖಲಿಸುವಂತೆ ಆದೇಶಿಸಿದೆ. ಐಪಿಸಿ ಸೆಕ್ಷನ್ 376, 363, 366 ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಇಮ್ರಾನ್‌ನನ್ನು ಬಂಧಿಸಲಾಗಿದೆ. ಸರ್ಕಾರದ ಪರ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಕಾರ್ತಿಕ್ ಪಾರೇಖ್ ಅವರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಲಾಗಿದೆ.
ಈ ಪ್ರಕರಣದಲ್ಲಿ ಅಪ್ರಾಪ್ತಳ ಅಕ್ಕನ ಪತಿ ವಿರುದ್ಧವೂ ನ್ಯಾಯಾಲಯದಲ್ಲಿ ಅತ್ಯಾಚಾರ ಪ್ರಕರಣd ವಿಚಾರಣೆ ನಡೆಯುತ್ತಿದೆ. ತನ್ನನ್ನು ತಾನು ಸಮರ್ಥಿಸಿಕೊಳ್ಳಲು 2020ರಲ್ಲಿ ನ್ಯಾಯಾಲಯದಲ್ಲಿ ಆರೋಪಿಯು ನಡೆದ ಘಟನೆಯ ಬಗ್ಗೆ ಬಾಯ್ಬಿಟ್ಟಿದ್ದಾನೆ. ನ್ಯಾಯಾಲಯದ ವಿಚಾರಣೆಯಲ್ಲಿ, ಮೃತ ಮಗುವನ್ನು ಸಮಾಧಿ ಮಾಡಿರುವುದು ಬೆಳಕಿಗೆ ಬಂದಿದ್ದು, ಅಪ್ರಾಪ್ತೆಯ ಭಾವಿಪತಿ ಇಮ್ರಾನನ್ನೂ ಬಂಧಿಸಿ ಪೊಲೀಸರು ರಾಜ್‌ಕೋಟ್‌ಗೆ ಕರೆದೊಯ್ದಿದ್ದಾರೆ. ಅಪ್ತಾಪ್ತೆ ಅತ್ಯಾಚಾರ ಪ್ರಕರಣವನ್ನೂ ಗಂಭೀರವಾಗಿ ತೆಗೆದುಕೊಂಡಿದೆ. ಇಬ್ಬರ ವಿರುದ್ಧವೂ ನ್ಯಾಯಾಲಯವು ಕೂಲಂಕಷವಾಗಿ ವಿಚಾರಣೆಗೊಳಪಡಿಸಿ ತೀರ್ಪನ್ನು ಪ್ರಕಟಿಸಲಿದೆ.