ETV Bharat / crime

ಬಿಸಿಯೂಟ ಸೇವಿಸಿ 5 ವರ್ಷದ ಬಾಲಕಿ ಸಾವು ಆರೋಪ: ಪ್ರಾಂಶುಪಾಲ ಅಮಾನತು

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಜೈದೋಪುರದ ಪ್ರಾಥಮಿಕ ಶಾಲೆಯಲ್ಲಿ 5 ವರ್ಷದ ಬಾಲಕಿ ಮೃತಪಟ್ಟಿದ್ದು, ಪ್ರಾಂಶುಪಾಲರನ್ನು ಸ್ಪೆಂಡ್​ ಮಾಡಲಾಗಿದೆ.

Principal suspended in UP after 5 yr old dies
ಪ್ರಾಂಶುಪಾಲ ಅಮಾನತು
author img

By

Published : Mar 5, 2021, 12:28 PM IST

ಬಲ್ಲಿಯಾ (ಉತ್ತರ ಪ್ರದೇಶ): ಬಿಸಿಯೂಟ ಸೇವಿಸಿದ ಬಳಿಕ ಐದು ವರ್ಷದ ಬಾಲಕಿ ಸಾವನ್ನಪ್ಪಿರುವ ಆರೋಪದ ಮೇಲೆ ಶಾಲಾ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ.

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಜೈದೋಪುರದ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಘಟನೆ ನಡೆದಿದೆ. ತಮ್ಮ ಮಗಳು ಮಧ್ಯಾಹ್ನ ಶಾಲೆಯ ಬಿಸಿಯೂಟದಲ್ಲಿ ನೀಡಿದ ಕಿಚಡಿ ತಿಂದ ಬಳಿಕ ಪ್ರಜ್ಞೆ ತಪ್ಪಿ ಬಿದ್ದು ಮೃತಪಟ್ಟಿದ್ದಾಳೆ ಎಂದು ಪೋಷಕರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ತನ್ನಿಬ್ಬರು ಪುಟ್ಟ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ

ಇತ್ತ ಜಿಲ್ಲಾಧಿಕಾರಿ ಅದಿತಿ ಸಿಂಗ್, ಬಾಲಕಿ ಮನೆಯಿಂದ ಯಾವುದೋ ಹಣ್ಣನ್ನು ತಂದು ಶಾಲೆಯಲ್ಲಿ ತಿಂದಿದ್ದು, ಅದರ ಬೀಜಗಳು ಗಂಟಲಲ್ಲಿ ಸಿಲುಕಿ ಸಾವನ್ನಪ್ಪಿದ್ದಾಳೆ. ಕಿಚಡಿ ತಿಂದಿದ್ದ ಇತರ ವಿದ್ಯಾರ್ಥಿಗಳಿಗೆ ಏನೂ ಆಗಿಲ್ಲ ಎಂದು ಹೇಳಿದ್ದಾರೆ.

ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು ಸ್ಥಳೀಯರ ಒತ್ತಾಯದ ಮೇರೆಗೆ ಪ್ರಾಂಶುಪಾಲರನ್ನು ಸಸ್ಪೆಂಡ್​ ಮಾಡಿದ್ದು, ಕಿಚಡಿಯ ಸ್ಯಾಂಪಲ್​ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.