ETV Bharat / crime

'ಮಿನಿ ಮುಂಬೈ'ನಲ್ಲಿ ಸೆಕ್ಸ್​ ರಾಕೆಟ್​ ಬಯಲು: 10 ಮಂದಿ ಅರೆಸ್ಟ್​ - Madhya Pradesh sex racket

ಮಧ್ಯಪ್ರದೇಶ ಇಂದೋರ್​ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಯುವತಿಯರು ಸೇರಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

indore
'ಮಿನಿ ಮುಂಬೈ'ನಲ್ಲಿ ಸೆಕ್ಸ್​ ರಾಕೆಟ್​ ಬಯಲು
author img

By

Published : Jun 11, 2021, 8:04 PM IST

ಇಂದೋರ್ (ಮಧ್ಯಪ್ರದೇಶ): 'ಮಿನಿ ಮುಂಬೈ' ಎಂದು ಕರೆಯಲ್ಪಡುವ ಮಧ್ಯಪ್ರದೇಶದ ಇಂದೋರ್ ಈಗ ಕೋವಿಡ್​ ಅನ್ಲಾಕ್​​ನತ್ತ ಗಮನ ಹರಿಸುತ್ತಿರುವ ವೇಳೆ ಇಲ್ಲಿ ಅಪರಾಧ ಚಟುವಟಿಕೆಗಳೂ ಹೆಚ್ಚಾಗುತ್ತಿವೆ. ಇದೀಗ ವೇಶ್ಯಾವಾಟಿಕೆ ದಂಧೆಯನ್ನು ಇಂದೋರ್​ ಪೊಲೀಸರು ಬಯಲಿಗೆಳೆದಿದ್ದಾರೆ.

ಇಂದೋರ್‌ನ ಲಾಸುಡಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಹೋಟೆಲ್​​ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರು ಯುವತಿಯರು ಸೇರಿ 10 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಇಬ್ಬರು ಯುವತಿಯರು ಹೈದರಾಬಾದ್ ನಿವಾಸಿಗಳಾಗಿದ್ದು, ಇಂದೋರ್​ಗೆ ಬಂದು ದಂಧೆಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಹೈ ಪ್ರೊಫೈಲ್ ಸೆಕ್ಸ್ ರಾಕೆಟ್​​ ಬಯಲಿಗೆಳೆದ ಸಿಸಿಬಿ ತಂಡ: ಇಬ್ಬರು ನಟಿಯರು ಸೇರಿ ಐವರ ಬಂಧನ

ಕೋವಿಡ್​ ಹೆಚ್ಚಳ ಹಿನ್ನೆಲೆ ಇಂದೋರ್ ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಹೋಟೆಲ್​ಗಳು ತೆರೆಯುವಂತಿಲ್ಲ. ಆದರೆ ಇಲ್ಲಿ ಹೋಟೆಲ್​​ ಅನ್ನು ಇಂತಹ ಚಟುವಟಿಕೆಗೆ ಬಳಸಿಕೊಳ್ಳಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.