ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಬು.ಕೊಪ್ಪ ಗ್ರಾಮದಲ್ಲಿ ಮೂವರು ಅಕ್ರಮವಾಗಿ ತಮ್ಮ ಹೊಲದಲ್ಲಿ ಬೆಳೆದಿದ್ದ ಗಾಂಜಾ ಬೆಳೆಯನ್ನು ಗುಡಗೇರಿ ಪೊಲೀಸ್ ಠಾಣಾ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಬೆಳೆಯನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಮಾಲತೇಶ್ ನಿಂಗಪ್ಪ ಕಿತ್ತೂರ ಎಂಬುವವರ ಹೊಲದಲ್ಲಿ 31 ಕೆಜಿ ಗಾಂಜಾ ಬೆಳೆ, ರುದ್ರಪ್ಪ ಅಡಿವೆಪ್ಪ ಪೂಜಾರ ಹೊಲದಲ್ಲಿ 20 ಕೆಜಿ ಗಾಂಜಾ ಬೆಳೆ, ನಿಂಗಪ್ಪ ಕುಬೇರಪ್ಪ ಕರಿಕೆಣ್ಣನವರ ಹೊಲದಲ್ಲಿ 8 ಕೆಜಿ 30 ಗ್ರಾಂ ಗಾಂಜಾ ಬೆಳೆ ವಶಪಡಿಸಿಕೊಳ್ಳಲಾಗಿದೆ.
ಗುಡಗೇರಿ ಪಿಎಸ್ಐ ಸವಿತಾ ಮುನ್ಯಾಳ ನೇತೃತ್ವದಲ್ಲಿ ಎಎಸ್ಐ ಮಠಪತಿ ಪಾಯಣ್ಣನವರ, ಎಂ.ಸಿ.ಸಾಲಿಮಠ, ಸಿಬ್ಬಂದಿ ಸದ್ದಾಂ ತಲ್ಲೂರು, ಎಸ್.ಎಮ್.ಹಳ್ಳದ, ಬಸನಗೌಡ ಪಾಟೀಲ್, ಗಾಯತ್ರಿ ಜೋಗಿಹಳ್ಳಿ ಭಾಗಿಯಾಗಿದ್ದರು. ಪ್ರಕರಣದ ಬಳಿಕ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: 20 ರೂ.ಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ.. ಹಂತಕರ ಹೆಡೆಮುರಿ ಕಟ್ಟಿದ ಖಾಕಿ