ETV Bharat / crime

ಜಾಮೀನಿನ ಮೇಲೆ ಹೊರಬಂದು ಅತ್ಯಾಚಾರ ಸಂತ್ರಸ್ತೆಯನ್ನ ಕೊಂದ ಆರೋಪಿ - Sirohi crime news

ರಾಜಸ್ಥಾನದ ಸಿರೋಹಿ ಜಿಲ್ಲೆಯ ಗ್ರಾಮವೊಂದರಲ್ಲಿ ಜಾಮೀನಿನ ಮೇಲೆ ಹೊರಬಂದ ಅತ್ಯಾಚಾರ ಆರೋಪಿಯು ಸಂತ್ರಸ್ತೆಯನ್ನ ಕೊಲೆ ಮಾಡಿ ಮತ್ತೆ ಜೈಲು ಪಾಲಾಗಿದ್ದಾನೆ.

Out on bail, rape accused stabs victim to death in Rajasthan village
ಜಾಮೀನಿನ ಮೇಲೆ ಹೊರಬಂದು ಅತ್ಯಾಚಾರ ಸಂತ್ರಸ್ತೆಯನ್ನ ಕೊಂದ ಆರೋಪಿ
author img

By

Published : Jun 14, 2021, 12:33 PM IST

ಸಿರೋಹಿ (ರಾಜಸ್ಥಾನ): ಅತ್ಯಾಚಾರ ಆರೋಪದಡಿ ಬಂಧನವಾಗಿ, ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯು ಸಂತ್ರಸ್ತೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ನಿನ್ನೆ ರಾತ್ರಿ ಮಹಿಳೆಯ ರೀತಿ ಮಾರುವೇಷದಲ್ಲಿ ಮನೆಗೆ ಬಂದು ಕೃತ್ಯ ಎಸಗಿದ್ದಾನೆ.

ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವ ಸಂತ್ರಸ್ತೆಗೆ ಇಬ್ಬರು ಮಕ್ಕಳಿದ್ದು, 2017ರಲ್ಲಿ ಪತಿಯನ್ನು ಕಳೆದುಕೊಂಡಿದ್ದರು. ಒಂಟಿ ಮಹಿಳೆ ಹಿಂದೆ ಬಿದ್ದ ಅದೇ ಗ್ರಾಮದ ವ್ಯಕ್ತಿ ಆಕೆ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದ. ಈ ಸಂಬಂಧ ಮಹಿಳೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸ್ವಲ್ಪ ದಿನ ಆತ ಸುಮ್ಮನಿದ್ದ. 2020ರಲ್ಲಿ ಮತ್ತೊಮ್ಮೆ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ಯೋಧನಿಂದ ಅತ್ಯಾಚಾರ: ಪೊಲೀಸರಿಗೆ ಮಹಿಳೆಯಿಂದ ದೂರು

ಇತ್ತೀಚೆಗಷ್ಟೇ ಬೇಲ್​ ಮೇಲೆ ಹೊರಬಂದಿದ್ದ ಆರೋಪಿ, ನಿನ್ನೆ ರಾತ್ರಿ ಮಹಿಳೆಯಂತೆ ಮಾರುವೇಷ ಧರಿಸಿ ಸಂತ್ರಸ್ತೆ ಮನೆಗೆ ನುಗ್ಗಿ ಮಲಗಿದ್ದ ಸಂತ್ರಸ್ತೆ ಹಾಗೂ ಆಕೆಯ ಸಹೋದರಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇಬ್ಬರನ್ನೂ ಶೀಘ್ರವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ಮೃತಪಟ್ಟಿದ್ದು, ಸಹೋದರಿಗೆ ಚಿಕಿತ್ಸೆ ಮುಂದುವರೆದಿದೆ. ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕೊರೊನಾ ವಾರಿಯರ್​ ಆಗಿ ಸೇವೆ ಸಲ್ಲಿಸಿದ್ದ ಸಂತ್ರಸ್ತೆ ಸಾವಿಗೆ ನ್ಯಾಯಕೊಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪೊಲೀಸ್​ ಠಾಣೆ ಮುಂದೆ ಕುಳಿತು ಆಗ್ರಹಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.