ETV Bharat / crime

ವರ್ಗಾವಣೆ ವಿಚಾರ.. ನ್ಯಾಯಾಧೀಶರಿಗೆ ಚಾಕುವಿನಿಂದ ಇರಿದ ಕಚೇರಿ ಸಹಾಯಕ ಸಿಬ್ಬಂದಿ! - ತಮಿಳುನಾಡಿನಲ್ಲಿ ನ್ಯಾಯಾಧೀಶರಿಗೆ ಚಾಕು ಇರಿತ

ತನ್ನ ವರ್ಗಾವಣೆ ಪ್ರಸ್ತಾವನೆಯನ್ನು ನಿರಾಕರಿಸಿದ್ದಕ್ಕೆ ಕಚೇರಿಯ ಸಿಬ್ಬಂದಿಯೊಬ್ಬ ನ್ಯಾಯಾಧೀಶರಿಗೆ ಚಾಕುವಿನಿಂದ ಇರಿದಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.

Office assistant stabs judge in Tamil Nadu, arrested
ತಮಿಳುನಾಡಿನ ಸೇಲಂನಲ್ಲಿ ನ್ಯಾಯಧೀಶಕರಿಗೆ ಚಾಕುವಿನಿಂದ ಇರಿದ ಕಚೇರಿ ಸಹಾಯಕ ಸಿಬ್ಬಂದಿ
author img

By

Published : Mar 2, 2022, 11:33 AM IST

ಚೆನ್ನೈ (ತಮಿಳುನಾಡು): ಕೋರ್ಟ್ ಕಚೇರಿಯ ಸಹಾಯಕ ಸಿಬ್ಬಂದಿಯೊಬ್ಬ ನ್ಯಾಯಾಧೀಶರಿಗೆ ಚಾಕುವಿನಿಂದ ಇರಿದಿರುವ ಘಟನೆ ಸೇಲಂನಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು 37 ವರ್ಷದ ಪ್ರಕಾಶ್ ಎಂದು ಗುರುತಿಸಲಾಗಿದೆ.

ಪ್ರಕಾಶ್ ಬೇರೆ ಊರಿನಿಂದ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದಕ್ಕಾಗಿ ಅಸಮಾಧಾನಗೊಂಡು ಮ್ಯಾಜಿಸ್ಟ್ರೇಟ್‌ಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಸಿಬ್ಬಂದಿ ನ್ಯಾಯಾಧೀಶರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತನ್ನ ವರ್ಗಾವಣೆ ಪ್ರಸ್ತಾವನೆಯನ್ನು ನಿರಾಕರಿಸಿದ್ದಕ್ಕೆ ನ್ಯಾಯಾಧೀಶ ಪೊನ್ಪಾಂಡಿಗೆ ಚಾಕುವಿನಿಂದ ಇರಿದಿರುವುದಾಗಿ ತನಿಖೆಯ ವೇಳೆ ಪ್ರಕಾಶ್ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ವುಡ್​ ಕಾಂಪ್ಲೆಕ್ಸ್​​ ಬಳಿ ನಿಲ್ಲಿಸಿದ್ದ ಖಾಸಗಿ ಬಸ್​​​ಗಳಿಗೆ ಬೆಂಕಿ.. ಧಗಧಗನೇ ಹೊತ್ತಿ ಉರಿದ 8 ವಾಹನಗಳು​​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.