ಜೈಪುರ: ಏಪ್ರಿಲ್ 30 ರಂದು ರಾಜಸ್ಥಾನದ ಚಿತ್ತೋರ್‌ಗಢದ ನಿಂಬಹೆಡಾದಲ್ಲಿ ಬೊಲೆರೊ ಕಾರಿನಿಂದ 12 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಜೈಪುರದ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಗುರುವಾರ 11 ಉಗ್ರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಮ್ರಾನ್ ಖಾನ್, ಆಕಿಫ್ ಅತೀಕ್ ಅಕಿಬ್, ಅಮೀನ್ ಖಾನ್, ಮೊಹಮ್ಮದ್ ಅಮೀನ್ ಪಟೇಲ್, ಸೈಫುಲ್ಲಾ ಖಾನ್, ಅಲ್ತಮಶ್ ಖಾನ್, ಜುಬೇರ್ ಖಾನ್, ಮಜರ್ ಖಾನ್, ಫಿರೋಜ್ ಖಾನ್, ಮೊಹಮ್ಮದ್ ಯೂನಸ್ ಸಾಕಿ ಮತ್ತು ಇಮ್ರಾನ್ ಕುಂಜ್ಡಾ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಆರಂಭದಲ್ಲಿ ಮಾರ್ಚ್ 31 ರಂದು ನಿಂಬಹೆಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿತ್ತು. ಪ್ರಮುಖ ಸಂಚುಕೋರ ಇಮ್ರಾನ್ ಖಾನ್ ಮತ್ತು ಇತರ ಸಹ ಆರೋಪಿಗಳು ಭಯೋತ್ಪಾದಕ ಗ್ಯಾಂಗ್‌ನ ಸದಸ್ಯರು, ದೇಶಾದ್ಯಂತ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದರು ಎಂದು ಎನ್‌ಐಎ ತನಿಖೆ ವೇಳೆ ತಿಳಿದು ಬಂದಿದೆ.
ಎನ್‌ಐಎಯ ತನಿಖೆಯಲ್ಲಿ ಅವರು ಐಸಿಸ್ ಚಿಂತನೆಗಳಿಂದ ಹಾಗೂ ಅವರ ಕಾರ್ಯಾಚರಣೆ ಹಾಗೂ ಚಟುವಟಿಕೆಗಳಿಂದ ಸ್ಫೂರ್ತಿ ಪಡೆದು ಈ ದಾಳಿಗೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ದೇಶದ ವಿರುದ್ಧ ಸಮರ ಸಾರಲು ಮತ್ತು ದೇಶಾದ್ಯಂತ ಭಯೋತ್ಪಾದಕ ಕೃತ್ಯಗಳನ್ನು ನಿಯೋಜಿಸಲು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಇದನ್ನು ಓದಿ:ದೇಶಾದ್ಯಂತ 93 ಸ್ಥಳಗಳಲ್ಲಿ ಎನ್‌ಐಎ ದಾಳಿ.. 106 ಪಿಎಫ್ಐ ಕಾರ್ಯಕರ್ತರ ಬಂಧನ