ಬೆಂಗಳೂರು: ಬಾರ್ ಡ್ಯಾನ್ಸರ್ ಅನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಆರ್.ಟಿ. ನಗರದ ನೃಪತುಂಗ ಲೇಔಟ್ನಲ್ಲಿ ನಡೆದಿದೆ.
ಓದಿ: ಪತಿ ಜತೆ ಕಿತ್ತಾಡಿ 8 ವರ್ಷದ ಪುತ್ರಿ ಕತ್ತುಕೊಯ್ದ 'ಮಹಾ'ತಾಯಿ ಸೋಂಕು ನಿವಾರಕ ಸೇವನೆ
ಹತ್ಯೆಯಾಗಿರುವ ಝರಾ ಮೂಲತಃ ಮುಂಬೈದವಳಾಗಿದ್ದು, ತನ್ನ ಸಹೋದರಿ ಆಲಿಯಾ ಜೊತೆ ಬೆಂಗಳೂರಿಗೆ ಬಂದು ನೆಲೆಸಿದ್ದಳು. ಕಳೆದ 7 ತಿಂಗಳ ಹಿಂದೆ ಮೃತಳ ಸಹೋದರಿ ಮದುವೆಯಾಗಿ ಪತಿಯೊಂದಿಗೆ ಜಾಲಹಳ್ಳಿಯಲ್ಲಿ ಬಂದು ನೆಲೆಸಿದ್ದಳು. ಬಾರ್ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಝರಾ, ಆರ್.ಟಿ ನಗರದ ಮನೆಯೊಂದರಲ್ಲಿ ಸ್ನೇಹಿತೆಯೊಬ್ಬಳ ಜೊತೆ ವಾಸವಿದ್ದಳು.
ನಿನ್ನೆ ಸಂಜೆ ಝರಾಳ, ಮದುವೆಯಾಗೋ ಹುಡುಗ ಕರೆ ಮಾಡಿದಾಗ, ಆಕೆ ಕರೆ ಸ್ವೀಕರಿಸಿರಲಿಲ್ಲ. ಬಳಿಕ ಝರಾಳ ತಂಗಿ ಆಲಿಯಾ ಪತಿ ದಿಶಾನ್, ಝರಾ ಮನೆಗೆ ಬಂದು ರೂಂ ಮೇಟ್ ಜೊತೆ ನಡೆಯುತ್ತಿದ್ದ ಜಗಳ ಬಿಡಿಸಿ ಮನೆಗೆ ಹೋಗಿದ್ದಾರೆ. ದಿಶಾನ್ ಬಂದು ಹೋದ ಬಳಿಕ ನಿನ್ನೆ ರಾತ್ರಿಯೇ ಝರಾ ಕೊಲೆಯಾಗಿದ್ದು, ಈ ಕಾರಣಕ್ಕೆ ಝರಾಳ ಸಹೋದರಿಯ ಗಂಡ ದಿಶಾನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನೊಂದು ವಾರದ ಅವಧಿಯಲ್ಲಿ ಝರಾಳ ಸಹೋದರ ಹಾಗೂ ಸಹೋದರಿ ಆಲಿಯಾಳ ಹುಟ್ಟುಹಬ್ಬವಿತ್ತು, ಆ ಬಗ್ಗೆ ಸರ್ಪ್ರೈಸ್ ಪ್ಲಾನ್ ನಡೆಯುತ್ತಿತ್ತು. ಈ ಮಧ್ಯೆ ಝರಾಳ ಕೊಲೆಯಾಗಿದೆ ಎಂದು ಮೃತಳ ತಂಗಿ ಆಲಿಯಾ ತಿಳಿಸಿದ್ದಾಳೆ.
ಘಟನೆ ಸಂಬಂಧ ಆರ್.ಟಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಈಗಾಗಲೇ ಹಲವರ ಹೇಳಿಕೆ ಪಡೆದಿರುವ ಆರ್.ಟಿ ನಗರ ಪೊಲೀಸರು ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.