ETV Bharat / crime

ನಿರ್ಜಲ ಏಕಾದಶಿ ದಿನ ವಿಷವಾದ ಜೋಳದ 'ಹಿಟ್ಟು': ರಾಜಸ್ಥಾನದಲ್ಲಿ 35ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ನಿರ್ಜಲ ಏಕಾದಶಿ ಪ್ರಯುಕ್ತ ಜೋಳದ ಹಿಟ್ಟಿನಿಂದ ತಯಾರಿಸಿದ್ದ ಭಕ್ಷ್ಯವನ್ನು ಸವಿದಿದ್ದ 35ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದು, ಹಿಟ್ಟು ವಿಷಪೂರಿತವಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ವೈದ್ಯರು ತಿಳಿಸಿದ್ದಾರೆ.

udaipur
35ಕ್ಕೂ ಅಧಿಕ ಮಂದಿ ಅಸ್ವಸ್ಥ
author img

By

Published : Jun 22, 2021, 6:57 AM IST

ಉದಯಪುರ (ರಾಜಸ್ಥಾನ): ನಿರ್ಜಲ ಏಕಾದಶಿ ಪ್ರಯುಕ್ತ ಜೋಳದ ಹಿಟ್ಟಿನಿಂದ ತಯಾರಿಸಿದ್ದ ಭಕ್ಷ್ಯವನ್ನು ಸವಿದಿದ್ದ 35ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿರುವ ಘಟನೆ ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ನಡೆದಿದೆ. ಅಸ್ವಸ್ಥರನ್ನು ತಡರಾತ್ರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಏಕಾದಶಿ ಎಂದು ಉಪವಾಸ ಮಾಡಿದವರು ಉಪವಾಸ ಮುಗಿದ ಬಳಿಕ ಜೋಳದ ಹಿಟ್ಟಿನಿಂದ ತಯಾರಿಸುವ ತಿನಿಸು ತಿನ್ನುವುದು ಅಲ್ಲಿನ ಜನರ ಸಂಪ್ರದಾಯವಾಗಿದೆ. ನಿನ್ನೆ ಸಂಜೆ ಉದಯಪುರ ನಗರದ ಹತಿಪೋಲ್, ಜಗದೀಶ್ ಚೌಕ್ ಸೇರಿದಂತೆ ಇತರ ಪ್ರದೇಶಗಳ ಜನರು ತಮ್ಮ ತಮ್ಮ ಮನೆಗಳಲ್ಲಿ ಭಕ್ಷ್ಯ ಸೇವಿಸುತ್ತಿದ್ದಂತೆಯೇ ಹೊಟ್ಟೆ ನೋವು, ವಾಂತಿ, ಅತಿಸಾರ ಮತ್ತು ತಲೆತಿರುಗುವಿಕೆ ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಒಬ್ಬರಾದ ಮೇಲೊಬ್ಬರು ಮಹಾರಾಣ ಭೂಪಾಲ್ (ಎಂಬಿ) ಸರ್ಕಾರಿ ಆಸ್ಪತ್ರೆಗೆ ಧಾವಿಸಿದ್ದು, ವೈದ್ಯರು ಕಂಗಾಲಾಗಿದ್ದಾರೆ.

ಹಿಟ್ಟಿನಲ್ಲೇ ದೋಷವಿತ್ತೇ?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂಬಿ ಆಸ್ಪತ್ರೆ ವೈದ್ಯರು, ಉದಯಪುರ ನಗರದ ವಿವಿಧ ಸ್ಥಳಗಳಿಂದ ಬಂದಿರುವ ಎಲ್ಲಾ ರೋಗಿಗಳು ಜೋಳದ ಹಿಟ್ಟಿನಿಂದ ಮಾಡಿದ ತಿನಿಸು ತಿಂದಿರುವುದನ್ನು ನೋಡಿದರೆ ಇದು ಹಿಟ್ಟಿನ ದೋಷ ಎಂದೆನಿಸುತ್ತದೆ. ಹಿಟ್ಟು ವಿಷಪೂರಿತವಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ಕೈಗೊಂಡಿರುವ ಉದಯಪುರದ ಆಹಾರ ನಿರೀಕ್ಷಕರು, ಇಷ್ಟು ದೊಡ್ಡ ಪ್ರದೇಶದಲ್ಲಿ ಎಲ್ಲಾ ಜನರು ಹೋಗಿ ಯಾವುದೋ ಒಂದೇ ಅಂಗಡಿಯಿಂದ ಹಿಟ್ಟು ಖರೀದಿಸಿರುವ ಸಾಧ್ಯತೆಯಿಲ್ಲ. ಆದರೆ ಈ ಜನರು ಯಾವ್ಯಾವ ಅಂಗಡಿಗಳಿಂದ ಹಿಟ್ಟಿ ಖರೀದಿಸಿದ್ದಾರೆಂದು ಪತ್ತೆ ಮಾಡಿ, ಆ ಅಂಗಡಿಗಳಿಗೆ ಹಿಟ್ಟು ಪೂರೈಸಿದವರನ್ನು ಪತ್ತೆ ಮಾಡಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.