ETV Bharat / crime

ವಾರ್ಡರ್‌ಗೆ ಹೆದರಿ ಮೊಬೈಲ್‌ ನುಂಗಿದ ಕೈದಿ ; ಶಸ್ತ್ರಚಿಕಿತ್ಸೆ ಇಲ್ಲದೆ ಹೊರ ತೆಗೆದ ವೈದ್ಯರು

ಕೈದಿಗಳ ಬಳಿ ಮೊಬೈಲ್‌ ಹಾಗೂ ಇತರೆ ವಸ್ತುಗಳು ಇರುವ ಬಗ್ಗೆ ಅನುಮಾನದ ಮೇರೆಗೆ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ವಾರ್ಡರ್‌ಗಳ ಕಣ್ಣು ಈ ಕೈದಿಯ ಮೇಲೆ ಬಿದ್ದಿದ್ದು, ಏನನ್ನೋ ಮುಚ್ಚಿಡಲು ಯತ್ನಿಸುತ್ತಿದ್ದನಂತೆ..

mobile recovered from stomach of inmate of tihar in delhi
ವಾರ್ಡರ್‌ಗೆ ಹೆದರಿ ಮೊಬೈಲ್‌ ನುಂಗಿದ ಕೈದಿ; 10 ದಿನಗಳ ಬಳಿಕ ಶಸ್ತ್ರಚಿಕಿತ್ಸೆ ಇಲ್ಲದೆ ಹೊರ ತೆಗೆದ ವೈದ್ಯರು
author img

By

Published : Jan 18, 2022, 1:07 PM IST

ನವದೆಹಲಿ : ವಾರ್ಡರ್ ತಪಾಸಣೆಗೆ ಬರ್ತಾರೆಂದು ಹೆದರಿ ಇತರ ಕೈದಿಗಳ ಮುಂದೆಯೇ ಕೈದಿಯೊಬ್ಬ ಮೊಬೈಲ್ ನುಂಗಿರುವ ಘಟನೆ ತಿಹಾರ್‌ ಜೈಲಿನಲ್ಲಿ ನಡೆದಿದೆ. 10 ದಿನಗಳ ಬಳಿಕ ಶಸ್ತ್ರ ಚಿಕಿತ್ಸೆ ಮೂಲಕ ಮೊಬೈಲ್‌ ಅನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಘಟನೆಯಿಂದ ಒಂದು ಕ್ಷಣ ಅಚ್ಚರಿಗೊಂಡ ಇತರೆ ಕೈದಿಗಳು ಕೂಡಲೇ ಮೊಬೈಲ್‌ ನುಂಗಿದ ಕೈದಿಯನ್ನು ಜೈಲಿನಲ್ಲಿರುವ ಆಸ್ಪತ್ರೆಗೆ ಸೇರಿದ್ದರು. ಕೈದಿಯ ಸ್ಥಿತಿ ಗಂಭೀರವಾದ ಹಿನ್ನೆಲೆ ತಕ್ಷಣ ಆತನನ್ನು ದೀನದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಎಕ್ಸ್-ರೇ ನಂತರ ಹೊಟ್ಟೆಯಲ್ಲಿ ಮೊಬೈಲ್‌ ಇರುವುದು ದೃಢಪಟ್ಟಿತ್ತು.

ನಿರಂತರ ಪರಿಶ್ರಮದಿಂದ 10 ದಿನಗಳ ನಂತರ ಹೊಟ್ಟೆಯಲ್ಲಿದ್ದ ಮೊಬೈಲ್ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ತಿಹಾರ್ ಜೈಲು ಡಿಜಿ ಸಂದೀಪ್ ಗೋಯಲ್, ಮೊಬೈಲ್ ನುಂಗಿದ ಕೈದಿಯನ್ನು ಘಟನೆಯ ನಂತರ ಡಿಡಿಯುನಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿ ದಾಖಲಿಸಲಾಯಿತು.

ಶಸ್ತ್ರಚಿಕಿತ್ಸೆ ಇಲ್ಲದೆ ಮೊಬೈಲ್ ಹೊರ ತೆಗೆಯುವ ಪ್ರಯತ್ನವನ್ನು ವೈದ್ಯರು ಮಾಡಿದ್ದರು. ಶಸ್ತ್ರ ಚಿಕಿತ್ಸೆ ನಡೆಸದೆ ಜ.15ರಂದು ವೈದ್ಯರು ಮೊಬೈಲ್ ಅನ್ನು ಹೊಟ್ಟೆಯಿಂದ ಹೊರ ತೆಗೆದಿದ್ದು, ಈಗ ಕೈದಿಯ ಆರೋಗ್ಯ ಸ್ಥಿತಿ ಚೆನ್ನಾಗಿದೆ. ಮತ್ತೆ ಆತನನ್ನು ಜೈಲಿಗೆ ಕಳುಹಿಸಲಾಗಿದೆ.

ಕೈದಿ ಮೊಬೈಲ್‌ ನುಂಗಲು ಕಾರಣ ಇದು..

ಕೈದಿಗಳ ಬಳಿ ಮೊಬೈಲ್‌ ಹಾಗೂ ಇತರೆ ವಸ್ತುಗಳು ಇರುವ ಬಗ್ಗೆ ಅನುಮಾನದ ಮೇರೆಗೆ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ವಾರ್ಡರ್‌ಗಳ ಕಣ್ಣು ಈ ಕೈದಿಯ ಮೇಲೆ ಬಿದ್ದಿದ್ದು, ಏನನ್ನೋ ಮುಚ್ಚಿಡಲು ಯತ್ನಿಸುತ್ತಿದ್ದನಂತೆ.

ವಾರ್ಡರ್ ಈ ಕೈದಿ ಬಳಿ ಬರುವಷ್ಟರಲ್ಲಿ ಆತ ಮೊಬೈಲ್ ನುಂಗಿ ಬಿಟ್ಟಿದ್ದಾನೆ. ಜೈಲು ಆಡಳಿತ ಕಟ್ಟುನಿಟ್ಟಿನ ಕ್ರಮಗಳ ಹೊರತಾಗಿಯೂ ಕೈದಿಗೆ ಮೊಬೈಲ್‌ ಬಳಕೆಗೆ ಅವಕಾಶ ಕೊಟ್ಟವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಜೈಲು ಅಧಿಕಾರಿಗಳ ಲೋಪದಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎನ್ನಲಾಗಿದೆ.

ಇದನ್ನೂ ಓದಿ: ಜೈಲು ಅಧಿಕಾರಿಗಳಿಗೆ ಹೆದರಿ ಮೊಬೈಲ್​ ಫೋನ್​​ ನುಂಗಿದ ಕೈದಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.