ETV Bharat / crime

ಗಂಟಲೊಳಗೆ ಚಾಕೊಲೇಟ್​ ಸಿಲುಕಿ ಬಾಲಕಿ ಸಾವು.. ಮಗಳ ಕಳೆದುಕೊಂಡು ತಾಯಿ ರೋದನ - ಮನ ಕಲಕುವಂತಿದ್ದ ತಾಯಿಯ ರೋದನ

ಒಂದೂವರೆ ವರ್ಷದ ಮಗುವೊಂದರ ಗಂಟಲಲ್ಲಿ ಚಾಕೊಲೇಟ್ ಸಿಲುಕಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಸತಾರಾದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಸತಾರಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

MH death kid due to jelly chocolate stuck in his throat in Satara
ಗಂಟಲೊಳಗೆ ಚಾಕೊಲೇಟ್​ ಸಿಲುಕಿ ಬಾಲಕಿ ಸಾವು.. ಮಗಳ ಕಳೆದುಕೊಂಡ ತಾಯಿಯ ರೋದನ
author img

By

Published : Dec 27, 2022, 9:13 AM IST

ಸತಾರಾ( ಮಹಾರಾಷ್ಟ್ರ): ಸತಾರಾದಲ್ಲಿ ಒಂದೂವರೆ ವರ್ಷದ ಮಗುವೊಂದರ ಗಂಟಲೊಳಗೆ ಚಾಕೊಲೇಟ್ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತಪಟ್ಟಿರುವ ಮಗುವನ್ನು ಶಾರ್ವರಿ ಸುಧೀರ್ ಜಾಧವ್ ಎಂದು ಗುರುತಿಸಲಾಗಿದೆ. ಮಗು ಚಾಕೊಲೇಟ್​ ನುಂಗಿ ಒದ್ದಾಡುತ್ತಿರುವುದನ್ನು ಕಂಡ ತಾಯಿ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಜೀವಕ್ಕೆ ಕುತ್ತು ತಂದ ಚಾಕೊಲೇಟ್: ಪುಟ್ಟ ಶಾರ್ವರಿಗೆ ನೆರೆಮನೆಯ ಹುಡುಗಿ ಜೆಲ್ಲಿ ಚಾಕೊಲೇಟ್ ಕೊಟ್ಟಿದ್ದಳು. ಆ ಚಾಕೊಲೇಟ್​ ಅನ್ನು ಸಂತಸದಿಂದ ಬಾಯಲ್ಲಿ ಇಟ್ಟುಕೊಂಡಿದ್ದಳು. ಆ ಚಾಕೊಲೇಟ್​​ ಇದ್ದಕ್ಕಿದ್ದಂತೆ ಆಕೆಯ ಗಂಟಲೊಳಗೆ ಸಿಲುಕಿಕೊಂಡಿದೆ. ಚಾಕೊಲೇಟ್ ಗಂಟಲಿಗೆ ಸಿಕ್ಕಿ ಕೆಮ್ಮಲು ಆರಂಭಿಸಿದ್ದಾಳೆ. ತಕ್ಷಣವೇ ಅವಳು ಪ್ರಜ್ಞೆ ಸಹ ಕಳೆದುಕೊಂಡಿದ್ದಾಳೆ. ಇದನ್ನು ಗಮನಿಸಿದ ಆಕೆಯ ತಾಯಿ ಅಕ್ಕಪಕ್ಕದ ಮನೆಯವರಿಗೆ ಕರೆ ಮಾಡಿ ಕೂಡಲೇ ಶಾರ್ವರಿಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮನ ಕಲಕುವಂತಿದ್ದ ತಾಯಿಯ ರೋದನ: ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಶಾರ್ವರಿಯನ್ನ ತಪಾಸಣೆ ನಡೆಸಿ, ಮೃತಪಟ್ಟಿದ್ದಾಳೆ ಎಂದು ಘೊಷಿಸಿದ್ದಾರೆ. ಡಾಕ್ಟರ್​ ಹೀಗೆ ಹೇಳುತ್ತಿದ್ದಂತೆ ತಾಯಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಮಗಳನ್ನು ಕಳೆದುಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ದುಃಖ ಕಟ್ಟೆಯೊಡೆದು ರೋದಿಸಿದ್ದಾರೆ.

ಮತ್ತೊಂದು ಕಡೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಸಾಲುಂಖೆ ಅವರು ಸತಾರಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಇದನ್ನು ಓದಿ: ಮಗಳ ವಿಡಿಯೋ ವೈರಲ್‌ ವಿಚಾರ: ಗುಜರಾತ್‌ನಲ್ಲಿ ಬಿಎಸ್‌ಎಫ್ ಯೋಧನ ಭೀಕರ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.