ಶಿವಮೊಗ್ಗ : ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿ 300 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಓದಿ: ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದ ಮಹಿಳೆಯನ್ನು ರಕ್ಷಿಸಿದ ರೈಲ್ವೆ ಪೊಲೀಸರು
ಸುನೀಲ್ ಅಲಿಯಾಸ್ ಬೆಕ್ಕು (26) ಎಂಬಾತನನ್ನು ಬಂಧಿಸಿ ಆತನಿಂದ 300 ಗ್ರಾಂ ಗಾಂಜಾ ಹಾಗೂ 470 ರೂ. ನಗದು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗದ ಮಲವಗೊಪ್ಪದಲ್ಲಿ ಬೈಕ್ ನಲ್ಲಿ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಡಿವೈಎಸ್ಪಿ ಪ್ರಶಾಂತ್ ಜಿ ಮುನ್ನೋಳಿ, ತುಂಗಾ ನಗರ ಪಿ.ಐ ದೀಪಕ್, ಪಿಎಸ್ಐ ತಿರುಮಲೇಶ್ ಹಾಗೂ ಸಿಬ್ಬಂದಿ ಹೆಚ್.ಸಿ ಅರುಣ್ ಕುಮಾರ್, ಸೈಯದ್ ಇಮ್ರಾನ್ ಮತ್ತು ಲಂಕೇಶ್ ಅವರುಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.