ETV Bharat / crime

ಮಹಾರಾಷ್ಟ್ರ: ಎಸ್‌ಬಿಐ ಬ್ಯಾಂಕ್‌ ಕಿಟಕಿ ಒಡೆದು 20 ಲಕ್ಷ ರೂ.ಕಳ್ಳತನ - ಬುಲ್ಧಾನ

ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಕೆಲ್ವಾಡ್ ಗ್ರಾಮದಲ್ಲಿರುವ ಎಸ್‌ಬಿಐ ಬ್ಯಾಂಕ್‌ನ ಕಿಟಕಿ ಒಡೆದು 20 ಲಕ್ಷ ರೂಪಾಯಿ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ನಿನ್ನೆ ನಡೆದಿರುವ ಈ ಘಟನೆ ಇಂದು ಬೆಳಕಿಗೆ ಬಂದಿದೆ..

Maharashtra: Burglars break into bank in Buldhana; decamp with Rs 20 lakh cash
ಮಹಾರಾಷ್ಟ್ರ: ಎಸ್‌ಬಿಐ ಬ್ಯಾಂಕ್‌ ಕಿಟಕಿ ಒಡೆದು 20 ಲಕ್ಷ ರೂ.ಕಳ್ಳತನ
author img

By

Published : Oct 30, 2021, 5:19 PM IST

ಬುಲ್ಧಾನ(ಮಹಾರಾಷ್ಟ್ರ): ಅಪರಿಚಿತ ವ್ಯಕ್ತಿಗಳು ಬ್ಯಾಂಕ್‌ಗೆ ನುಗ್ಗಿ 20 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿರುವ ಘಟನೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ನಡೆದಿದೆ.

ಚಿಖಲಿ ತಾಲೂಕಿನ ಕೆಲ್ವಾಡ್ ಗ್ರಾಮದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯಲ್ಲಿ ನಿನ್ನೆ ಈ ಘಟನೆ ನಡೆದಿದೆ. ಆದರೆ, ಇಂದು ಈ ಘಟನೆ ಬೆಳಗ್ಗೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬ್ಯಾಂಕಿನ ಆಸುಪಾಸಿನಲ್ಲಿ ವಾಸಿಸುತ್ತಿದ್ದ ಜನರು ಬ್ಯಾಂಕ್‌ನ ಕಿಟಕಿ ಒಡೆದಿರುವುದನ್ನು ಗಮನಿಸಿ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎಂದು ಚಿಖ್ಲಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್ ಲಾಂಡೆ ಮಾಹಿತಿ ನೀಡಿದ್ದಾರೆ.

ಮನೆಯ ಹಿಂಬದಿಯ ಕಿಟಕಿಯ ಮೇಲಿನ ಗ್ರಿಲ್ ಕಟ್ ಮಾಡಿ ಕಳ್ಳರು 20 ಲಕ್ಷ ರೂ.ನಗದು ದೋಚಿ ಪರಾರಿಯಾಗಿದ್ದಾರೆ. ಕಳ್ಳರ ಸುಳಿವುಗಳಿಗಾಗಿ ಪೊಲೀಸರು ಬ್ಯಾಂಕ್‌ನಿಂದ ಸಿಸಿಟಿವಿ ದೃಶ್ಯ ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.