ETV Bharat / crime

ಮದುವೆಯಾಗಲು ತಯಾರಿ ನಡೆಸಿದ್ದ ಹೆಡ್​ಕಾನ್ಸ್​ಟೇಬಲ್ ಗನ್​ ಮಿಸ್​ಫೈರ್​ನಿಂದ ಮೃತ - ಮದುವೆಯಾಗಲು ತಯಾರಿ ನಡೆಸಿದ್ದ ಹೆಡ್​ಕಾನ್ಸ್​ಟೇಬಲ್ ಗನ್​ ಮಿಸ್​ಫೈರ್​ನಿಂದ ಮೃತ

ವಾರಂಗಲ್ ಜಿಲ್ಲೆಯ ಗವಿಚಾರ್ಲ ನಿವಾಸಿಯಾದ ಹೆಡ್​ ಕಾನ್ಸ್​ಟೇಬಲ್ ಒಬ್ಬರು ಗನ್ ಮಿಸ್​ಫೈರ್ ಆಗಿ ಸಾವನ್ನಪ್ಪಿರು ಘಟನೆ ತೆಲಂಗಾಣದ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯ ಕಚನಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Low-intensity bomb blast in manipur, head constable died in gun misfire in telangana
ಮದುವೆಯಾಗಲು ತಯಾರಿ ನಡೆಸಿದ್ದ ಹೆಡ್​ಕಾನ್ಸ್​ಟೇಬಲ್ ಗನ್​ ಮಿಸ್​ಫೈರ್​ನಿಂದ ಮೃತ
author img

By

Published : Feb 12, 2022, 10:57 AM IST

ಭದ್ರಾದ್ರಿ, ತೆಲಂಗಾಣ: ಗನ್ ಮಿಸ್‌ಫೈರ್‌ ಆಗಿ ಹೆಡ್‌ಕಾನ್ಸ್‌ಟೇಬಲ್ ಮೃತಪಟ್ಟಿರುವ ಘಟನೆ ತೆಲಂಗಾಣದ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯ ಕಚನಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಸ್ತ್ರಾಸ್ತ್ರಗಳನ್ನು ಪರಿಶೀಲಿಸುತ್ತಿರುವಾಗ ಈ ಘಟನೆ ನಡೆದಿದೆ ಎಂದು ಭದ್ರಾದ್ರಿ ಪೊಲೀಸರು ತಿಳಿಸಿದ್ದಾರೆ.

ವಾರಂಗಲ್ ಜಿಲ್ಲೆಯ ಗವಿಚಾರ್ಲ ನಿವಾಸಿ ಸಂತೋಷ್ ಮೃತಪಟ್ಟ ಹೆಡ್​ಕಾನ್ಸ್​​ಟೇಬಲ್ ಆಗಿದ್ದು, ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೂರು ದಿನಗಳ ಹಿಂದೆಯಷ್ಟೇ ಸಂತೋಷ್ ವಿವಾಹಕ್ಕೆ ಹುಡುಗಿಯನ್ನು ಆಯ್ಕೆ ಮಾಡಲಾಗಿತ್ತು. ಶೀಘ್ರದಲ್ಲೇ ವಿವಾಹ ನೆರವೇರಿಸಲು ಕುಟುಂಬ ತೀರ್ಮಾನಿಸಿತ್ತು ಎಂದು ತಿಳಿದುಬಂದಿದೆ.

ಬಾಂಬ್ ಸ್ಫೋಟ( ಮಣಿಪುರ): ಮತ್ತೊಂದು ಘಟನೆಯಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಕಾರ್ಯಕರ್ತನ ನಿವಾಸದ ಮುಂದೆ ಕಡಿಮೆ ತೀವ್ರತೆಯ ಬಾಂಬ್ ಸ್ಫೋಟಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾತ್ರಿ 8 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಈ ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಇಂಫಾಲ್ ಪೂರ್ವ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಹಾರಬಮ್ ಪ್ರದೀಪ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ: 9 ವರ್ಷದ ಬಾಲಕಿ ಸೇರಿ ನಾಲ್ವರ ದುರ್ಮರಣ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.