ETV Bharat / crime

80ರ ಅಜ್ಜಿಯ ಕಾಲು​ ಕಟ್​ ಮಾಡಿ ಬೆಳ್ಳಿ ಕಾಲುಂಗರ ದರೋಡೆ ಮಾಡಿದ ದುಷ್ಕರ್ಮಿಗಳು! - ವೃದ್ಧೆಯ ಕಾಲನ್ನೇ ದರೋಡೆ ಮಾಡಿರುವ ಅತ್ಯಂತ ಭಯಾನಕ ಘಟನೆ

80 ವರ್ಷದ ವೃದ್ಧೆ ನಿನ್ನೆ ರಾತ್ರಿ ಮನೆಯಲ್ಲಿ ಒಬ್ಬರೇ ಮಲಗಿದ್ದರು. ದರೋಡೆ ಮಾಡುವ ಉದ್ದೇಶದಿಂದ ಮನೆಗೆ ನುಗ್ಗಿದ ರಾಕ್ಷಸರು ಮೊದಲು ವೃದ್ಧೆಯನ್ನು ಉಸಿರುಗಟ್ಟಿಸಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯದಿಂದ ಭೀತಿಗೊಳಗಾದ ಅಜ್ಜಿ ಮೂರ್ಛೆ ಹೋಗಿದ್ದಾರೆ. ಈ ವೇಳೆ ದರೋಡೆಕೋರರು ವೃದ್ಧೆಯ ಕಾಲು ಕತ್ತರಿಸಿ ಬೆಳ್ಳಿಯ ಉಂಗುರ ದೋಚಿ ಪರಾರಿಯಾಗಿದ್ದಾರೆ

Bundi crime with old woman
Bundi crime with old woman
author img

By

Published : Sep 2, 2022, 9:20 PM IST

Updated : Sep 2, 2022, 9:43 PM IST

ಬುಂದಿ( ರಾಜಸ್ಥಾನ): ಇಲ್ಲಿ ಕಿರೋ ಕಾ ಜೋಪ್ರಾ ಗ್ರಾಮದಲ್ಲಿ ವೃದ್ಧೆಯ ಕಾಲನ್ನೇ ದರೋಡೆ ಮಾಡಿರುವ ಅತ್ಯಂತ ಭಯಾನಕ ಘಟನೆ ನಡೆದಿದೆ. 80 ವರ್ಷದ ವೃದ್ಧೆಯೊಬ್ಬಳೊಂದಿಗೆ ದುಷ್ಕರ್ಮಿಗಳು ಅಮಾನುಷ ಕೃತ್ಯ ನಡೆಸಿದ್ದು, ಗ್ರಾಮಸ್ಥರಲ್ಲಿ ನಡುಕವನ್ನುಂಟು ಮಾಡಿದೆ.

ಈ ಘಟನೆ ನಡೆದ ವೇಳೆ ಮನೆಯಲ್ಲಿ ವೃದ್ಧೆ ಒಬ್ಬರೇ ಇದ್ದರು. ಮಹಿಳೆ ಒಂಟಿಯಾಗಿರುವುದನ್ನು ನೋಡಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಬೆಳ್ಳಿಯ ಉಂಗುರಗಳನ್ನು ದೋಚಲು ಅಜ್ಜಿಯ ಕಾಲುಗಳನ್ನು ಕತ್ತರಿಸಿ ಹಾಕಿದ್ದಾರೆ. ಘಟನೆ ಬಳಿಕ ಅಜ್ಜಿಯ ಕಾಲು ಕತ್ತರಿಸುವುದನ್ನು ಕಂಡು ಪುತ್ರ ವೃದ್ದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರಕರಣದ ವಿವರ: 80 ವರ್ಷದ ವೃದ್ಧೆ ನಿನ್ನೆ ರಾತ್ರಿ ಮನೆಯಲ್ಲಿ ಒಬ್ಬರೇ ಮಲಗಿದ್ದರು. ದರೋಡೆ ಮಾಡುವ ಉದ್ದೇಶದಿಂದ ಮನೆಗೆ ನುಗ್ಗಿದ ರಾಕ್ಷಸರು ಮೊದಲು ವೃದ್ಧೆಯನ್ನು ಉಸಿರುಗಟ್ಟಿಸಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯದಿಂದ ವೃದ್ಧೆ ಭೀತಿಗೊಳಗಾಗಿ ಮೂರ್ಛೆ ಹೋಗಿದ್ದಾರೆ. ಈ ವೇಳೆ ದರೋಡೆಕೋರರು ವೃದ್ಧೆಯ ಒಂದು ಕಾಲನ್ನು ಕತ್ತರಿಸಿ ಬೆಳ್ಳಿಯ ಉಂಗುರಗಳನ್ನು ದೋಚಿ ಪರಾರಿಯಾಗಿದ್ದಾರೆ.

ಮನೆಗೆ ಬಂದ ಪುತ್ರ ತನ್ನ ತಾಯಿ ರಕ್ತದ ಮಡುವಿನಲ್ಲಿ ಇರುವುದುನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ. ವೃದ್ಧೆಯ ಪುತ್ರ ನೀಡಿದ ದೂರು ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ದರೋಡೆಕೋರರಿಗಾಗಿ ಬಲೆ ಬೀಸಿದ್ದಾರೆ.

ಘಟನೆಯಿಂದ ಗ್ರಾಮಕ್ಕೆ ಗ್ರಾಮವೆ ತಲ್ಲಣ: ನೈನ್ವಾದಲ್ಲಿ 80 ವರ್ಷದ ವೃದ್ಧೆ ಮೇಲೆ ನಡೆದ ಅಮಾನುಷ ಹಲ್ಲೆ ಘಟನೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಮಾಜಿ ಸಚಿವ ಪ್ರಭುಲಾಲ್ ಸೈನಿ ಈ ದುಷ್ಕೃತ್ಯವನ್ನು ಖಂಡಿಸಿದ್ದಾರೆ. ಘಟನೆಯ ನಂತರ ಆ ಭಾಗದ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಮತ್ತೊಂದು ಕಡೆ ತೀವ್ರ ಭಯವನ್ನು ಸೃಷ್ಟಿಸಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಬೇಕು ಎಂಬ ಒತ್ತಾಯ ಬಲವಾಗಿ ಕೇಳಿ ಬರುತ್ತಿದೆ.

ಮತ್ತೊಂದೆಡೆ, ನೈನ್ವಾನದಲ್ಲಿ ವೃದ್ಧೆಯ ಕಾಲು ಕತ್ತರಿಸಿದ ಘಟನೆಗೆ ಸಂಬಂಧಪಟ್ಟಂತೆ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಕಿಸಾನ್ ಮಹಾಪಂಚಾಯತ್‌ನ ರಾಷ್ಟ್ರೀಯ ಅಧ್ಯಕ್ಷ ರಾಂಪಾಲ್ ಜಾಟ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಅವರನ್ನು ಒತ್ತಾಯಿಸಿದ್ದಾರೆ.

ಇದನ್ನು ಓದಿ:9 ವರ್ಷದ ಬಾಲಕಿ ಮೇಲೆ ವೃದ್ಧರಿಂದ ಅತ್ಯಾಚಾರ.. ಇಬ್ಬರ ಬಂಧನ, ಇನ್ನೊಬ್ಬನಿಗಾಗಿ ಹುಡುಕಾಟ

Last Updated : Sep 2, 2022, 9:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.