ETV Bharat / crime

ಕಿಯಾ ಶೋ ರೂಂಗೆ ನುಗ್ಗಿ ಸೆಕ್ಯೂರಿಟಿಗೆ ಬೆದರಿಸಿ ಕಾರು ಕಳ್ಳತನ, ಇಬ್ಬರು ವಿದೇಶಿ ಪ್ರಜೆಗಳ ಬಂಧನ - ಯಲಹಂಕ ಬಳಿಯ ಕಿಯಾ ಶೋ‌ ರೂಂ

ಕಳೆದ‌ ಫೆ. 24 ರಂದು ಸಂಜೆ ಕಿಯಾ ಶೋ ರೂಂಗೆ ಬಂದ ಇಬ್ಬರು ಆರೋಪಿಗಳು ಕುಡಿಯುವ ನೀರು ಕೇಳುವ ಸೋಗಿನಲ್ಲಿ ಸೆಕ್ಯೂರಿಟಿ ಗಾರ್ಡ್ ಗಳನ್ನು ಮಾತನಾಡಿಸಿದ್ದಾರೆ. ನೋಡನೋಡುತ್ತಿದ್ದಂತೆ ಮಾರಕಾಸ್ತ್ರಗಳಿಂದ ಭದ್ರತಾ ಸಿಬ್ಬಂದಿಯನ್ನು ಬೆದರಿಸಿ ಕಿಯಾ ಕಂಪನಿಯ ಎರಡು ಸ್ವೇಲಾಸ್ ಕಾರುಗಳನ್ನು ಕದ್ದು‌ ಪರಾರಿಯಾಗಿದ್ದರು.

kia-showroom-car-theft
ಇಬ್ಬರು ವಿದೇಶಿ ಪ್ರಜೆಗಳ ಬಂಧನ
author img

By

Published : Jun 2, 2021, 10:26 PM IST

ಬೆಂಗಳೂರು: ಕಾರ್ ಶೋ ರೂಂಗೆ ನುಗ್ಗಿ ಸೆಕ್ಯೂರಿಟಿ ಗಾರ್ಡ್ ಬೆದರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಕಾರನ್ನು ಕಳ್ಳತನ ಮಾಡಿದ್ದ ಆಫ್ರಿಕಾ ಮೂಲದ ಇಬ್ಬರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಬ್ಬರು ವಿದೇಶಿ ಪ್ರಜೆಗಳ ಬಂಧನ

ಓದಿ: ಲಾಕ್​ಡೌನ್ ಮುಂದುವರಿಕೆ ಕುರಿತು ಜೂನ್ 5ಕ್ಕೆ ನಿರ್ಧಾರ..!

ಯಲಹಂಕ ಬಳಿಯ ಕಿಯಾ ಶೋ‌ ರೂಂ ಸೆಕ್ಯೂರಿಟಿ ಗಾರ್ಡ್ ಇಸ್ರೇಲ್ ಎಂಬುವರು ನೀಡಿದ ದೂರಿನ ಮೇರೆಗೆ, ಲಿಬಿಯಾ ದೇಶದ ಶಫಿ ಇಡೇನ್ ಹಾಗೂ ನೈಜೀರಿಯಾ ದೇಶದ ಜಾನ್ ನೇರೋ ಬಂಧಿತ ವಿದೇಶಿ‌ ಆರೋಪಿಗಳಾಗಿದ್ದಾರೆ. ಬಂಧಿತರಿಂದ 65 ಲಕ್ಷ ರೂ. ಮೌಲ್ಯದ ಮೂರು ಕಾರುಗಳು ಹಾಗೂ ನಾಲ್ಕು ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ.

ಕಳೆದ‌ ಫೆ. 24 ರಂದು ಸಂಜೆ ಕಿಯಾ ಶೋ ರೂಂಗೆ ಬಂದ ಇಬ್ಬರು ಆರೋಪಿಗಳು ಕುಡಿಯುವ ನೀರು ಕೇಳುವ ಸೋಗಿನಲ್ಲಿ ಸೆಕ್ಯೂರಿಟಿ ಗಾರ್ಡ್ ರನ್ನು ಮಾತನಾಡಿಸಿದ್ದಾರೆ. ನೋಡನೋಡುತ್ತಿದ್ದಂತೆ ಮಾರಕಾಸ್ತ್ರಗಳಿಂದ ಭದ್ರತಾ ಸಿಬ್ಬಂದಿಯನ್ನು ಬೆದರಿಸಿ ಕಿಯಾ ಕಂಪನಿಯ ಎರಡು ಸ್ವೇಲಾಸ್ ಕಾರುಗಳನ್ನು ಕದ್ದು‌ ಪರಾರಿಯಾಗಿದ್ದರು. ಈ ಸಂಬಂಧ ಯಲಹಂಕ‌ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು.

ಸೆರೆಯಾಗಿದ್ದ ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದು ನೋಡಿದಾಗ ಕೃತ್ಯದ ಹಿಂದೆ ನೈಜೀರಿಯಾ ಪ್ರಜೆಗಳ ಕೈವಾಡವಿರುವುದು ಸ್ಪಷ್ಟವಾಗಿತ್ತು. ತನಿಖೆ ವೇಳೆ ಆರೋಪಿಗಳು ಸಂಪಿಗೆಹಳ್ಳಿಯಲ್ಲಿ ವಾಸವಾಗಿರುವುದು ‌‌ಪತ್ತೆಯಾಗಿದೆ. ಅಲ್ಲದೇ ಇವರು ಕೆಜಿ ಹಳ್ಳಿ, ಯಲಹಂಕ ಹಾಗೂ ಸಂಪಿಗೆಹಳ್ಳಿ ಪೊಲೀಸ್ ಠಾಣೆಗಳಲ್ಲಿ ಕಾರು ಹಾಗೂ ಬೈಕ್ ಗಳಲ್ಲಿ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ತಾಂತ್ರಿಕ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕುಡಿತ ಹಾಗೂ ಡ್ರಗ್ಸ್ ಚಟಕ್ಕೆ ದಾಸರಾಗಿದ್ದ ಆರೋಪಿಗಳು:

ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದ ಇಬ್ಬರು ಆರೋಪಿಗಳು, ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದ ದೂರ ಶಿಕ್ಷಣ ವಿಭಾಗದಲ್ಲಿ ಎಂಎ ರಾಜ್ಯಶಾಸ್ತ್ರ ಹಾಗೂ ಬಿಇ ಎಲೆಕ್ಟ್ರಿಕಲ್ ವ್ಯಾಸಂಗ ಮಾಡುತ್ತಿದ್ದು, ಅರ್ಧದಲ್ಲೆ ಶಿಕ್ಷಣ ಮೊಟಕುಗೊಳಿಸಿದ್ದರು. ಅಲ್ಲದೇ ಕುಡಿತ ಹಾಗೂ ಡ್ರಗ್ಸ್ ಚಟಕ್ಕೆ ದಾಸರಾಗಿದ್ದರು. ಐಷಾರಾಮಿ ಜೀವನ ನಡೆಸಲು ಆರೋಪಿಗಳು ಹಣಕ್ಕಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು‌‌ ಎಂದು ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

ಬಂಧನ ಭೀತಿಯಿಂದ ಪೊಲೀಸ್ ಬ್ಯಾರಿಕೇಡ್​​ಗೆ ಗುದ್ದಿದ ಆರೋಪಿಗಳು:

ಕಾರು ಕಳ್ಳತನ ಮಾಡಿ ತಮಿಳುನಾಡಿಗೆ ಪರಾರಿಯಾಗಿದ್ದ ಆರೋಪಿಗಳು ಬಂಧನ ಭೀತಿಯಿಂದ ಮಾರ್ಗ ಮಧ್ಯೆಯ ಚೆಕ್ ಪೋಸ್ಟ್ ಪೊಲೀಸ್ ಬ್ಯಾರಿಕೇಡ್ ಗೆ ಗುದ್ದಿ ಪರಾರಿಯಾಗಿದ್ದರು.‌ ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.‌ ಕಳ್ಳತನ ಮಾಡಿದ ಕಾರನ್ನು ಮಹಾರಾಷ್ಟ್ರದ ಪುಣೆಯಲ್ಲಿ ಕಡಿಮೆ ಬೆಲೆಗೆ ಮಾರಾಟಕ್ಕೆ ಮುಂದಾಗಿದ್ದರು. ಸಿಸಿಟಿವಿ ಹಾಗೂ ಜಿಪಿಎಸ್ ಸಹಾಯದಿಂದ ಇಬ್ಬರನ್ನು ವಿದೇಶಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.