ಬೆಂಗಳೂರು: ಹೆಚ್ಚು ಪ್ರಚಾರಕ್ಕೋಸ್ಕರ ಹಲವರು ಲೈವ್ ಸ್ಟ್ರೀಮಿಂಗ್ ಆ್ಯಪ್ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಬೇಕಾದಂತೆ ಚಿತ್ರೀಕರಿಸಿ ವಿಡಿಯೋಗಳನ್ನು ಹಾಕಿಕೊಳ್ಳುವುದು ಹೆಚ್ಚುತ್ತಿದೆ. ಇದನ್ನೆ ಮೇಕಪ್ ಮ್ಯಾನ್ ಒಬ್ಬ ದುರುಪಯೋಗಪಡಿಸಿಕೊಂಡು ನಟಿಗೆ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ನಟಿಯ ಅರೆಬರೆ ವಿಡಿಯೋ ಇಟ್ಟುಕೊಂಡು 30 ಲಕ್ಷಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪಿ ಮೇಕಪ್ ಮ್ಯಾನ್ ಈಗ ಅಂದರ್ ಆಗಿದ್ದಾನೆ.
ಹೆಚ್ಚು ಪ್ರಚಾರಕ್ಕೋಸ್ಕರ ಹಲವರು ಲೈವ್ ಸ್ಟ್ರೀಮಿಂಗ್ ಆ್ಯಪ್ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಬೇಕಾದಂತೆ ಚಿತ್ರೀಕರಿಸಿ ವಿಡಿಯೋಗಳನ್ನು ಹಾಕಿಕೊಳ್ಳುವುದು ಹೆಚ್ಚುತ್ತಿದೆ. ಇದನ್ನೆ ಮೇಕಪ್ ಮ್ಯಾನ್ ಒಬ್ಬ ದುರುಪಯೋಗಪಡಿಸಿಕೊಂಡಿದ್ದಾನೆ. ಕನ್ನಡದ ಖ್ಯಾತ ನಟನ ಜೊತೆ ಸಿನಿಮಾದಲ್ಲಿ ನಾಯಕಿಯಾಗಿ ತೆರೆ ಹಂಚಿಕೊಂಡಿರುವ ನಟಿಯೊಬ್ಬರು ಆ್ಯಪ್ನಲ್ಲಿ ತಮ್ಮ ಖಾತೆ ತೆರೆದು ಅರೆನಗ್ನ ವಿಡಿಯೋಗಳನ್ನು ಹಂಚಿಕೊಂಡಿದ್ದರು ಎನ್ನಲಾಗ್ತಿದೆ.
ಈ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಆರೋಪಿ, ನಟಿಗೆ ಅದರ ತುಣುಕು ಹಾಗೂ ಫೋಟೋಗಳನ್ನು ಕಳುಹಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದನು. ಹಣ ಕೊಡದೇ ಹೋದರೆ, ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ವಾಟ್ಸ್ಯಾಪ್ ಮೂಲಕ ಬ್ಲ್ಯಾಕ್ಮೇಲ್ ಮಾಡುತ್ತಿದ್ದನಂತೆ. ಈ ಸಂಬಂಧ ಆ ನಟಿಯು ಈಶಾನ್ಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ನಟಿ ನೀಡಿದ ದೂರಿನ ಮೇರೆಗೆ ಮಹಾಂತೇಶ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ವೃತ್ತಿಯಲ್ಲಿ ಮೇಕಪ್ ಮ್ಯಾನ್ ಆಗಿದ್ದು, ದೂರು ನೀಡಿರುವ ನಟಿಯ ಬಳಿ ಹಲವು ವರ್ಷಗಳಿಂದ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದನು. ಅಷ್ಟೇ ಅಲ್ಲ, ಅವರ ಹತ್ತಿರದ ಸಂಬಂಧಿಯೂ ಹೌದು. ಈ ಸಲುಗೆಯಿಂದಲೇ ನಟಿಯ ಬಗ್ಗೆ ಈತನಿಗೆ ತುಂಬಾ ಮಾಹಿತಿ ಇತ್ತು.
ಆರೋಪಿ, ನಟಿ ಲೈವ್ ಸ್ಟ್ರೀಮಿಂಗ್ ಆ್ಯಪ್ನಲ್ಲಿ ಖಾತೆ ಹೊಂದಿರುವ ವಿಷಯ ಹಾಗೂ ಈ ಖಾತೆಯ ಬಗ್ಗೆ ಮನೆಯವರಿಗೆ ಮಾಹಿತಿ ಇಲ್ಲ ಅನ್ನೋದನ್ನೂ ತಿಳಿದುಕೊಂಡಿದ್ದನು. ಜೊತೆಗೆ ಆಕೆಯ ಖಾತೆಯ ಹೆಸರನ್ನು ತಿಳಿದುಕೊಂಡು ಅದರಲ್ಲಿ ಬರುವ ಆಕೆಯ ಅರೆ ನಗ್ನ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದನು. ನಂತರ ಅವುಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಲು ಹೊಸ ನಂಬರ್ ಖರೀದಿಸಿದ್ದನು. ನಂತರ ವಾಟ್ಸ್ಯಾಪ್ ಮೂಲಕ ವಿಡಿಯೋ ಹಾಗೂ ಅರೆನಗ್ನ ಫೋಟೋ ಕಳುಹಿಸಿ 30 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಹೊಸ ನಂಬರ್ನಿಂದ ಬಂದ ಮೆಸೇಜ್ ಹಾಗೂ ವಿಡಿಯೋ ನೋಡಿ ಗಾಬರಿಗೊಂಡ ನಟಿ ಪೊಲೀಸರ ಮೊರೆ ಹೋಗಿದ್ದರು.
ದೂರು ನೀಡಿದ ಕೂಡಲೇ ಪ್ರಕರಣದ ತನಿಖೆ ಆರಂಭಿಸಿದ ಸೆನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಜೊತೆಗೆ ಆರೋಪಿಯ ಮೊಬೈಲ್ ಹಾಗೂ ಸಿಮ್ ಕಾರ್ಡ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯ ಬಂಧನದ ನಂತರ ಆತ ತಮ್ಮ ಸಂಬಂಧಿಯಾಗಿದ್ದ ಮೇಕಪ್ ಮ್ಯಾನ್ ಎನ್ನುವುದು ನಟಿಗೆ ಗೊತ್ತಾಗಿದೆ.
ಇದನ್ನೂ ಓದಿ: ಚಳ್ಳಕೆರೆ ಠಾಣೆ ಸಿಪಿಐ ವಿರುದ್ಧ ರೇಪ್ ಕೇಸ್, ಸಸ್ಪೆಂಡ್; ಉಲ್ಟಾ ಹೊಡೆದ ಯುವತಿ!