ಕಾನ್ಪುರ: ತಾಯಿ ಹಾಗೂ ಮಗಳು ಬೆಂಕಿಯಲ್ಲಿ ಸುಟ್ಟು ಸತ್ತುಹೋದ ಪ್ರಕರಣದಲ್ಲಿ ಎಸ್‌ಡಿಎಂ ಮೇಥಾ ಜನೇಶ್ವರ್ ಪ್ರಸಾದ್, ರೂರಾ ಪೊಲೀಸ್ ಠಾಣೆ ಪ್ರಭಾರಿ ದಿನೇಶ್ ಕುಮಾರ್ ಗೌತಮ್, ಮದೌಲಿ ಗ್ರಾಮದ ಲೆಖ್‌ಪಾಲ್ ಅಶೋಕ್ ಸಿಂಗ್,ರೂರಾ ನಿವಾಸಿ ಜೆಸಿವಿ ಚಾಲಕ ದೀಪಕ್ ಸೇರಿದಂತೆ ಹಲವರ ವಿರುದ್ಧ ಸಂತ್ರಸ್ತೆಯ ತಂದೆ ಸೋಮವಾರ ರಾತ್ರಿ ಎಫ್‌ಐಆರ್ ದಾಖಲಿಸಿದ್ದಾರೆ. 302, 307, 436, 429, 323 ಮತ್ತು 34 ರ ಅಡಿ ಹೆಸರಿಸಲಾದ 11 ಮತ್ತು 12 ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ, ಸಂತ್ರಸ್ತ ಕುಟುಂಬದವರು ತಮ್ಮ ಬೇಡಿಕೆಗಳ ಕುರಿತು ಆಡಳಿತಕ್ಕೆ ಪತ್ರ ಸಲ್ಲಿಸಿದ್ದಾರೆ. ಕುಟುಂಬಕ್ಕೆ 5 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
-
#kanpurdehatpolice#UPPolice pic.twitter.com/ZXM2U7bQwY
— Kanpur Dehat Police (@kanpurdehatpol) February 14, 2023 " class="align-text-top noRightClick twitterSection" data="
">#kanpurdehatpolice#UPPolice pic.twitter.com/ZXM2U7bQwY
— Kanpur Dehat Police (@kanpurdehatpol) February 14, 2023#kanpurdehatpolice#UPPolice pic.twitter.com/ZXM2U7bQwY
— Kanpur Dehat Police (@kanpurdehatpol) February 14, 2023
ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತವು ದೇವಸ್ಥಾನವೊಂದನ್ನು ಕೆಡವಲು ಯತ್ನಿಸಿತ್ತು. ಈ ಸಂದರ್ಭದಲ್ಲಿ ದೇವಸ್ಥಾನದ ಹತ್ತಿರದಲ್ಲೇ ಇದ್ದ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿತ್ತು. ಇದರಲ್ಲಿ ತಾಯಿ ಮತ್ತು ಮಗಳು ಸಜೀವ ದಹನವಾಗಿದ್ದರು. ಜಿಲ್ಲಾಡಳಿತ ಮತ್ತು ತಹಸಿಲ್ ಆಡಳಿತ ತಂಡದವರು ಮನೆಗೆ ಬೆಂಕಿ ಹಚ್ಚಿ ತಾಯಿ ಮಗಳನ್ನು ಕೊಂದಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಜಿಲ್ಲಾಡಳಿತವು ಬಡ ಕುಟುಂಬವನ್ನು ಬೆದರಿಸಿದೆ ಎಂದು ಆರೋಪಿಸಲಾಗಿದೆ.
ಜಿಲ್ಲಾಡಳಿತದ ಮೇಲೆಯೇ ಬಂದ ಆರೋಪ: ಈ ಘಟನೆಯು ಕಾನ್ಪುರ ಜಿಲ್ಲೆಯ ರೂರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಅಕ್ಬರ್‌ಪುರ ತಹಸಿಲ್ ಆಡಳಿತ ಸೇರಿದಂತೆ ಜಿಲ್ಲಾಡಳಿತದ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ. ಜಿಲ್ಲಾಡಳಿತದ ಸಹಕಾರದೊಂದಿಗೆ ಅಕ್ರಮ ಒತ್ತುವರಿ ತೆರವಿಗೆ ತಹಸಿಲ್ ಆಡಳಿತ ಮುಂದಾಗಿತ್ತು. ಆಗ ಸಂತ್ರಸ್ತೆಯ ಕುಟುಂಬ ಸದಸ್ಯರೊಂದಿಗೆ ವಾಗ್ವಾದ ನಡೆದಿತ್ತು.
ಈ ಸಂದರ್ಭದಲ್ಲಿ ತಹಸಿಲ್ ಆಡಳಿತ ಮನೆಗೆ ಬೆಂಕಿ ಹಚ್ಚಿದೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬೆಂಕಿಯಲ್ಲಿ ತಾಯಿ ಮಗಳು ಸುಟ್ಟು ಕರಕಲಾಗಿದ್ದಾರೆ. ಸಂತ್ರಸ್ತೆಯ ತಂದೆ ಕುಟುಂಬದವರನ್ನು ರಕ್ಷಿಸಲು ಮುಂದಾದಾಗ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಆಡಳಿತಾಧಿಕಾರಿಗಳು ವಾಹನಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಮನೆ ನೆಲಸಮಗೊಳಿಸಿರುವ ಸ್ಥಳೀಯ ಆಡಳಿತ: ಸಂತ್ರಸ್ತ ಕುಟುಂಬದವರು ಜನವರಿ 14 ರಂದು ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ತಮಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರು. ಇದರ ಹೊರತಾಗಿಯೂ ತಹಸಿಲ್ ಆಡಳಿತವು ಅವರ ಮನೆಯನ್ನು ನೆಲಸಮಗೊಳಿಸಿದೆ. 3 ದಿನಗಳಲ್ಲಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದರು.ಈ ಮಧ್ಯೆ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಗ್ರಾಮದಲ್ಲಿ ಯಾವ ರೀತಿಯಲ್ಲಿ ಬುಲ್ಡೋಜರ್ ಓಡುತ್ತದೆ ಎಂಬುದು ವೀಡಿಯೊದಲ್ಲಿ ಕಾಣಿಸುತ್ತದೆ. ಈ ಕಾರ್ಯಾಚರಣೆಯಲ್ಲಿ ಗುಡಿಸಲಿಗೆ ಬೆಂಕಿ ಕಾಣಿಸಿಕೊಂಡು ಗುಡಿಸಲು ಉರಿಯಲಾರಂಭಿಸುತ್ತದೆ.
ತಮಗೆ 5 ಕೋಟಿ ರೂಪಾಯಿ ಪರಿಹಾರ, ಮನೆಯ ಇಬ್ಬರಿಗೆ ಸರ್ಕಾರಿ ಉದ್ಯೋಗ, ಕುಟುಂಬಕ್ಕೆ ಆಜೀವ ಪಿಂಚಣಿ, ಮೃತರ ಪುತ್ರರಿಬ್ಬರಿಗೂ ಸರಕಾರದಿಂದ ವಸತಿ ನೀಡುವಂತೆ ಸಂತ್ರಸ್ತ ಕುಟುಂಬದವರು ಮುಖ್ಯಮಂತ್ರಿ ಯೋಗಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಪ್ರಕರಣದ ಬಗ್ಗೆ ಮಾತನಾಡಿದ ಎಸ್‌ಪಿ ಶಾಸಕ ಅಮಿತಾಬ್ ಬಾಜ್‌ಪೇಯ್, ಅಧಿಕಾರಿಗಳ ಎದುರೇ ತಾಯಿ ಮಗಳು ಸುಟ್ಟು ಕರಕಲಾಗಿದ್ದು, ಅಧಿಕಾರಿಗಳು ಏನೂ ಮಾಡಲಾಗಲಿಲ್ಲ. ಯೋಗಿ ಸರ್ಕಾರದಲ್ಲಿ ಪೊಲೀಸರು ಮತ್ತು ಆಡಳಿತ ಒಟ್ಟಾಗಿ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುತ್ತಿವೆ ಎಂದರು.
ಇದನ್ನೂ ಓದಿ: ತಂದೆ ಮಗಳು ಸಜೀವ ದಹನ: ಮನಕಲಕುವ ದಾರುಣ ಘಟನೆ..!