ETV Bharat / crime

ಕುಸ್ತಿಪಟು ಮರ್ಡರ್​ ಕೇಸ್​: ಸುಶೀಲ್​ ಕುಮಾರ್​ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ - Judicial custody of accused Sushil Kumar extended

ಕೊಲೆ ಪ್ರಕರಣದ ಆರೋಪಿ ಕುಸ್ತಿಪಟು ಸುಶೀಲ್ ​ಕುಮಾರ್​ ನ್ಯಾಯಾಂಗ ಬಂಧನ ಅವಧಿಯನ್ನು ಜೂನ್​​ 25ರವರೆಗೆ ದೆಹಲಿಯ ರೋಹಿಣಿ ನ್ಯಾಯಾಲಯ ವಿಸ್ತರಿಸಿದೆ.

Olympic medallist wrestler Sushil Kumar
ಸುಶೀಲ್​ ಕುಮಾರ್​
author img

By

Published : Jun 11, 2021, 3:44 PM IST

ನವದೆಹಲಿ: ಯುವ ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ​ಕುಮಾರ್ ಹಾಗೂ ಮತ್ತೊಬ್ಬ ಆರೋಪಿಯಾಗಿರುವ ಅವರ ಸ್ನೇಹಿತ ಅಜಯ್ ಕುಮಾರ್ ನ್ಯಾಯಾಂಗ ಬಂಧನ ಅವಧಿಯನ್ನು ಜೂನ್​​ 25ರವರೆಗೆ ವಿಸ್ತರಿಸಿ ದೆಹಲಿಯ ರೋಹಿಣಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಕೊಲೆ ಪ್ರಕರಣ ಸಂಬಂಧ ದೆಹಲಿ ನ್ಯಾಯಾಲಯವು ಸುಶೀಲ್ ​ಕುಮಾರ್, ಅಜಯ್ ಕುಮಾರ್ ಸೇರಿದಂತೆ ಆರು ಮಂದಿ ಆರೋಪಿಗಳಿಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿತ್ತು. ಜೂನ್​ 2ರಂದು​ ಸುಶೀಲ್ ಮತ್ತು ಅಜಯ್​​ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಈ ಅವಧಿ ಇಂದಿಗೆ ಮುಕ್ತಾಯವಾಗಿದ್ದರಿಂದ ಸುಶೀಲ್ ​ಕುಮಾರ್​ರನ್ನು ಪೊಲೀಸ್​ ಕಸ್ಟಡಿಗೆ ನೀಡುವಂತೆ ದೆಹಲಿ ಪೊಲೀಸರು ಬೇಡಿಕೆಯಿಟ್ಟಿದ್ದರು. ದೆಹಲಿ ಪೊಲೀಸರ ಮನವಿಯನ್ನು ತಿರಿಸ್ಕರಿಸಿದ ಕೋರ್ಟ್​ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿದೆ.

ಇದನ್ನೂ ಓದಿ: CCTV VIDEO: ಕುಸ್ತಿಪಟು ಸಾಗರ್​ ರಾಣಾ ಮೇಲೆ ಸುಶೀಲ್ ಕುಮಾರ್​ ಹಲ್ಲೆ ವಿಡಿಯೋ ವೈರಲ್​​

ಪ್ರಕರಣ ಹಿನ್ನೆಲೆ

ಮೇ 4ರಂದು ದೆಹಲಿಯ ಛತ್ರಸಾಲ ಸ್ಟೇಡಿಯಂನಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಕುಸ್ತಿಪಟು ಸಾಗರ್ ರಾಣಾ ಧಂಕರ್ ಹಲ್ಲೆಗೊಳಗಾಗಿ ಮೃತಪಟ್ಟಿದ್ದರು. ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬರುತ್ತಿದ್ದಂತೆಯೇ ಸುಶೀಲ್ ​ಕುಮಾರ್ ಪರಾರಿಯಾಗಿದ್ದರು. ಬಳಿಕ ಇವರನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.