ETV Bharat / crime

ಫೇಸ್​ಬುಕ್ ಅಕೌಂಟ್ ಹ್ಯಾಕ್: ಹಣಕ್ಕೆ ಬೇಡಿಕೆ ಇಟ್ಟ ಖದೀಮರು

ಇತ್ತೀಚಿನ ದಿನಗಳಲ್ಲಿ ಪೊಲೀಸರು, ರಾಜಕಾರಣಿಗಳು, ಪತ್ರಕರ್ತರ ಫೇಸ್​ಬುಕ್ ಅಕೌಂಟ್ ಹ್ಯಾಕ್ ಆಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಪುಂಜಾಲಕಟ್ಟೆ ವರದಿಗಾರರೊಬ್ಬರ ಫೇಸ್​ಬುಕ್ ಅಕೌಂಟ್ ಅನ್ನು ಹ್ಯಾಕ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

Facebook Account Hack
Facebook Account Hack
author img

By

Published : Jan 24, 2021, 7:23 AM IST

ಬಂಟ್ವಾಳ: ಪತ್ರಿಕಾ ವರದಿಗಾರರೊಬ್ಬರ ಫೇಸ್​ಬುಕ್ ಅಕೌಂಟ್ ಅನ್ನು ಹ್ಯಾಕ್ ಮಾಡಿ ಅವರ ಫ್ರೆಂಡ್​ ಲಿಸ್ಟ್​ನಲ್ಲಿರುವವರಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಪುಂಜಾಲಕಟ್ಟೆಯ ಪತ್ರಕರ್ತ ರತ್ನದೇವ್ ಪುಂಜಾಲಕಟ್ಟೆ ಅವರ ಫೇಸ್​ಬುಕ್ ಖಾತೆಯಿಂದ ಅವರ ಫ್ರೆಂಡ್​ ಲಿಸ್ಟ್​ನಲ್ಲಿರುವವರಿಗೆ ನನಗೆ ಅರ್ಜೆಂಟ್ ಆಗಿ ಹಣ ಬೇಕು, ನಾಳೆ ಮರಳಿಸುತ್ತೇನೆ. ನಿಮ್ಮಲ್ಲಿ ಗೂಗಲ್​ ಪೇ ಅಥವಾ ಫೋನ್ ಪೇ ಇದ್ದರೆ ಹಣ ಕಳುಹಿಸಿ, ನನ್ನ ಸ್ನೇಹಿತನ ನಂಬರ್ ನೀಡುತ್ತೇನೆ ಎಂದು ಹ್ಯಾಕರ್​ಗಳು ಸಂದೇಶ ಕಳುಹಿಸಿದ್ದಾರೆ.

ಫೇಸ್​ಬುಕ್ ಅಕೌಂಟ್ ಹ್ಯಾಕ್ ಆದ ಮಾಹಿತಿ ಲಭ್ಯವಾದ ಹಿನ್ನೆಲೆ ಕೂಡಲೇ ಅಲರ್ಟ್ ಆದ ರತ್ನದೇವ್, ಸ್ನೇಹಿತರ ಸಹಾಯದಿಂದ ಎಲ್ಲರಿಗೂ ಜಾಗೃತಿ ಸಂದೇಶ ರವಾನಿಸಿದ್ದಾರೆ. ಈ ಕುರಿತು ಪೊಲೀಸ್​ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.