ಜೈಪುರ (ರಾಜಸ್ಥಾನ): ಸಾಮಾಜಿಕ ಜಾಲತಾಣಗಳಲ್ಲಿ ಚಲಿಸುತ್ತಿರುವ ಕಾರಿನಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತಿರುವ ವಿಡಿಯೋವೊಂದು ವೈರಲ್ ಆದ ಬಳಿಕ ರಾಜಸ್ಥಾನದ ಜೈಪುರ ಪೊಲೀಸರು ಪ್ರಕರಣವನ್ನು ಭೇದಿಸುತ್ತಿದ್ದಾರೆ.
ಉತ್ತರ ಪ್ರದೇಶ ಮೂಲದ ಯುವತಿಯೊಬ್ಬಳು 2020ರ ಅಕ್ಟೋಬರ್‌ನಲ್ಲಿ ರಾಜಸ್ಥಾನಕ್ಕೆ ಬಂದು ಹೋಟೆಲ್‌ನಲ್ಲಿ ತಂಗಿದ್ದರು. ಈಕೆಯ ಆಪ್ತ ಸ್ನೇಹಿತನೊಬ್ಬ ಹಣದ ಆಮಿಷವೊಡ್ಡಿ ತನ್ನ ಗೆಳೆಯನೊಬ್ಬನೊಂದಿಗೆ ಸಂಪರ್ಕ ಬೆಳೆಸಲು ಹೇಳಿದ್ದಾನೆ. ಹಣ ಸಂಪಾದಿಸುವ ಉತ್ಸಾಹದಲ್ಲಿದ್ದ ಯುವತಿ ಆತ ಗೊತ್ತುಪಡಿಸಿದ ಸ್ಥಳಕ್ಕೆ ಹೋಗಿದ್ದಾಳೆ. ಆದರೆ, ಅಲ್ಲಿ 10ಕ್ಕೂ ಹೆಚ್ಚು ಮಂದಿಯಿದ್ದು, ಯುವತಿ ಬರುತ್ತಿದ್ದಂತೆಯೇ ಆಕೆಯನ್ನು ಕಾರಿನೊಳಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ.
ಇದನ್ನೂ ಓದಿ: ಸಾಯೋದು ಹೇಗೆಂದು ಆನ್ಲೈನ್ನಲ್ಲಿ ತಿಳಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
ವೈರಲ್ ವಿಡಿಯೋ ಬೆನ್ನಟ್ಟಿದ ಪೊಲೀಸರು ಸಂತ್ರಸ್ತೆ ಹಾಗೂ ಓರ್ವ ಆರೋಪಿಯನ್ನು ಗುರುತಿಸಿದ್ದಾರೆ. 2020ರ ಅಕ್ಟೋಬರ್ 19ರಂದು ಘಟನೆ ನಡೆದಿರುವುದಾಗಿ ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ.
ವಿಡಿಯೋ ತುಣುಕನ್ನು ಸೈಬರ್ ತಜ್ಞರಿಗೆ ಕಳುಹಿಸಿದ್ದು, ಓರ್ವ ಆರೋಪಿಯ ವಿಳಾಸವನ್ನು ಪತ್ತೆಹಚ್ಚಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಜೈಪುರದ ಹೆಚ್ಚುವರಿ ಆಯುಕ್ತ ಅಜಯ್ ಪಾಲ್ ಲಾಂಬಾ ಮಾಹಿತಿ ನೀಡಿದ್ದಾರೆ.