ETV Bharat / crime

ಕೊಲೆ ಆರೋಪಿ ಕುಸ್ತಿಪಟು ಸುಶೀಲ್​ ಜೊತೆ ಪೊಲೀಸರ ಸೆಲ್ಫಿ.. ತನಿಖೆಗೆ ಆದೇಶ

ಮಂಡೋಲಿ ಜೈಲಿನಿಂದ ಕೊಲೆ ಆರೋಪಿಯಾಗಿರುವ ಕುಸ್ತಿಪಟು ಸುಶೀಲ್ ​ಕುಮಾರ್​ರನ್ನು ತಿಹಾರ್ ಜೈಲಿಗೆ ಕರೆದೊಯ್ಯುತ್ತಿದ್ದಾಗ ಆತನೊಂದಿಗೆ ಜೊತೆ ದೆಹಲಿ ಪೊಲೀಸರು ತೆಗೆದುಕೊಂಡಿದ್ದಾರೆ ಎನ್ನಲಾದ ಸೆಲ್ಫಿ ವೈರಲ್​ ಆಗಿದೆ.

investigation orders against Policeman taking selfie with Sushil
ಆರೋಪಿ ಕುಸ್ತಿಪಟು ಸುಶೀಲ್​ ಜೊತೆ ಪೊಲೀಸರ ಸೆಲ್ಫಿ
author img

By

Published : Jun 26, 2021, 12:06 PM IST

ನವದೆಹಲಿ: ಯುವ ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ​ಕುಮಾರ್ ಜೊತೆ ದೆಹಲಿ ಪೊಲೀಸರು ಕ್ಲಿಕ್ಕಿಸಿಕೊಂಡಿದ್ದಾರೆ ಎನ್ನಲಾದ ಸೆಲ್ಫಿ ಇದೀಗ ವೈರಲ್​ ಆಗಿದ್ದು, ಈ ಸಂಬಂಧ ತನಿಖೆ ನಡೆಸಲು ಆದೇಶಿಸಲಾಗಿದೆ.

ದೆಹಲಿ ವಿಶೇಷ ಘಟಕ ಹಾಗೂ 3ನೇ ಬೆಟಾಲಿಯನ್​ನ ದೆಹಲಿ ಸಶಸ್ತ್ರ ಪೊಲೀಸರು ನಿನ್ನೆ ಬೆಳಗ್ಗೆ ಮಂಡೋಲಿ ಜೈಲಿನಿಂದ ಸುಶೀಲ್ ​ಕುಮಾರ್​ರನ್ನು ತಿಹಾರ್ ಜೈಲಿಗೆ ಕರೆದೊಯ್ಯುತ್ತಿದ್ದಾಗ ಸೆಲ್ಫಿ ತೆಗೆದುಕೊಂಡಿದ್ದಾರೆ. ಅಲ್ಲದೇ ಈ ಫೋಟೋಗಳನ್ನು ಅಧಿಕೃತ ವಾಟ್ಸಾಪ್ ಗುಂಪುಗಳಲ್ಲಿ ಮತ್ತು ಅವರ ಸಂಬಂಧಿಕರೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾಗ್ತಿದೆ. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ವೈರಲ್​ ಆಗುತ್ತಿದ್ದಂತೆಯೇ ದೆಹಲಿಯ ಹಿರಿಯ ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

investigation orders against Policeman taking selfie with Sushil
ಆರೋಪಿ ಕುಸ್ತಿಪಟು ಸುಶೀಲ್​ ಜೊತೆ ಫೋಟೋಗೆ ಪೋಸ್​ ಕೊಟ್ಟ ಪೊಲೀಸರು

ಇದನ್ನೂ ಓದಿ: ಕುಸ್ತಿಪಟು ಕೊಲೆ ಕೇಸ್ : ಸುಶೀಲ್‌ಕುಮಾರ್‌ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಮೇ 4ರಂದು ದೆಹಲಿಯ ಛತ್ರಸಾಲ ಸ್ಟೇಡಿಯಂನಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಕುಸ್ತಿಪಟು ಸಾಗರ್ ರಾಣಾ ಧಂಕರ್ ಹಲ್ಲೆಗೊಳಗಾಗಿ ಮೃತಪಟ್ಟಿದ್ದರು. ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬರುತ್ತಿದ್ದಂತೆಯೇ ಸುಶೀಲ್ ​ಕುಮಾರ್ ಪರಾರಿಯಾಗಿದ್ದರು. ಬಳಿಕ ಇವರನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದರು. ನಿನ್ನೆ ದೆಹಲಿ ನ್ಯಾಯಾಲಯವು ಸುಶೀಲ್​ರ ನ್ಯಾಯಾಂಗ ಬಂಧನವನ್ನು ಮತ್ತೆ 14 ದಿನಗಳ ಕಾಲ ವಿಸ್ತರಣೆ ಮಾಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.