ETV Bharat / crime

ಪತ್ನಿ, ಪುತ್ರಿಗೆ ವಿಷ ಉಣಿಸಿ ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ - Hyderabad techie ends life with wife, daughter in sanga reddy district telanagana

ಪತ್ನಿ ಹಾಗೂ ಪುತ್ರಿ ವಿಷ ಕುಡಿಸಿ ಹತ್ಯೆ ಮಾಡಿದ ಬಳಿಕ ಮೃತದೇಹಗಳ ಮೇಲೆ ಬಟ್ಟೆ ಹೊದಿಸಿ ಹಣೆಗೆ ದೊಡ್ಡಾಗಿ ಕುಂಕುಮ ಇಟ್ಟ ಬಳಿಕ ಶ್ರೀಕಾಂತ್‌ ಗೌಡ ತನ್ನ ಹಣೆಗೂ ಕುಂಕುಮ ಇಟ್ಟುಕೊಂಡ ನಂತರ ಮತ್ತೊಂದು ಕೊಠಡಿಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ..

Hyderabad techie ends life with wife, daughter in sanga reddy district telanagana
ತೆಲಂಗಾಣ: ಪತ್ನಿ, ಪುತ್ರಿಗೆ ವಿಷ ಉಣಿಸಿ ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ..!
author img

By

Published : Jan 21, 2022, 6:39 PM IST

Updated : Jan 21, 2022, 7:15 PM IST

ಹೈದರಾಬಾದ್‌ : ಪತ್ನಿ, ಪುತ್ರಿಗೆ ವಿಷ ಉಣಿಸಿ ಕೊಂದ ಬಳಿಕ ಟೆಕ್ಕಿಯೊರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆ ಅಮೀನ್‌ಪುರ್‌ ಪಟ್ಟಣದ ಬೀರಂಗೂಡ್‌ನಲ್ಲಿ ನಡೆದಿದೆ.

ಶ್ರೀಕಾಂತ್‌ ಗೌಡ (42), ಪತ್ನಿ ಅನಾಮಿಕ(40) ಹಾಗೂ ಪುತ್ರಿ ಶ್ರೀಸ್ನಿಗ್ಧ(7) ಮೃತ ದುರ್ದೈವಿಗಳು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತ ಶ್ರೀಕಾಂತ್‌ ಗೌಡ ಟಿಸಿಎಸ್‌ನ ಉದ್ಯೋಗಿದ್ದು, ಪತ್ನಿ ಕಾರ್ಪೊರೇಷನ್‌ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.

ಇಬ್ಬರು ಪ್ರೀತಿಸಿ ಹಿರಿಯರನ್ನು ಒಪ್ಪಿಸಿ ಮದುವೆಯಾಗಿದ್ದರು. ಸ್ವಂತ ಮನೆಯಲ್ಲಿ ಚೆನ್ನಾಗಿ ಜೀವನ ನಡೆಸುತ್ತಿದ್ದ ಇವರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಏಳು ವರ್ಷದ ಮಗಳಿದ್ದಳು. ಆದರೆ, ಬರ ಸಿಡಿಲು ಎಂಬಂತೆ ಇದಕ್ಕಿದ್ದಂತೆ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ.

ಮನೆ ಕೆಲಸದಾಕೆಯನ್ನು ಎರಡು ದಿನಗಳ ಮೊದಲೇ ಕೆಲಸಕ್ಕೆ ಬರಬೇಡ ಎಂದು ಹೇಳಿದ್ದರಂತೆ. 7 ವರ್ಷಗಳ ಹಿಂದೆ ಬೀರಂಗೂಡ್‌ನ ವಂದನಪುರಿ ಕಾಲೋನಿಯಲ್ಲಿ ಮನೆ ಖರೀದಿಸಿ ಇಲ್ಲೇ ವಾಸವಾಗಿದ್ದರು. ಮನೆಯ ಒಂದು ಕೊಠಡಿಯಲ್ಲಿ ಶ್ರೀಕಾಂತ್‌ ಗೌಡ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಪತ್ನಿ ಹಾಗೂ ಪುತ್ರಿಯ ಮೃತದೇಹಗಳ ಬಾಯಿಯಲ್ಲಿ ನೊರೆ, ಮೂಗಿನಲ್ಲಿ ರಕ್ತ ಬಂದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಪತ್ನಿ ಹಾಗೂ ಪುತ್ರಿ ವಿಷ ಕುಡಿಸಿ ಹತ್ಯೆ ಮಾಡಿದ ಬಳಿಕ ಮೃತದೇಹಗಳ ಮೇಲೆ ಬಟ್ಟೆ ಹೊದಿಸಿ ಹಣೆಗೆ ದೊಡ್ಡಾಗಿ ಕುಂಕುಮ ಇಟ್ಟ ಬಳಿಕ ಶ್ರೀಕಾಂತ್‌ ಗೌಡ ತನ್ನ ಹಣೆಗೂ ಕುಂಕುಮ ಇಟ್ಟುಕೊಂಡ ನಂತರ ಮತ್ತೊಂದು ಕೊಠಡಿಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ಹೇಗೆ?: ಅನಾಮಿಕ ಅವರ ತಂದೆ ಶ್ರೀರಾಮಚಂದ್ರಮೂರ್ತಿ ಎರಡು ದಿನಗಳಿಂದ ಸತತವಾಗಿ ತನ್ನ ಮಗಳಿಗೆ ಫೋನ್‌ ಕರೆ ಮಾಡಿದ್ದಾರೆ. ಆದರೆ, ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದಾಗಿ ನಿನ್ನೆ ಮಗಳ ಮನೆ ಬಳಿ ಬಂದು ನೋಡಿದಾಗ ಮನೆಯ ಒಳಗಡೆಯಿಂದ ಲಾಕ್‌ ಮಾಡಲಾಗಿತ್ತು.

ಕಿಟಕಿಯಿಂದ ನೋಡಿದಾಗ ಅಳಿಯ ಶ್ರೀಕಾಂತ್‌ಗೌಡ ನೇಣಿಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ ಎಂದು ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 21, 2022, 7:15 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.