ETV Bharat / crime

ಹುಣಸೋಡು ಸ್ಫೋಟ ಪ್ರಕರಣ : ಐವರಿಗೆ ಷರತ್ತು ಬದ್ಧ ಜಾಮೀನು - Shimoga District Chief Court

ಈ ಪ್ರಕರಣದಲ್ಲಿ ಕ್ರಷರ್ ನಡೆಸುತ್ತಿದ್ದ ಸುಧಾಕರ್‌ರನ್ನು A-1 ಹಾಗೂ ಜಾಗದ ಮಾಲೀಕರನ್ನು A-2 A-3 ಹಾಗೂ ನರಸಿಂಹರನ್ನು A-4 ಆಗಿಸಿ ಎಫ್ಐಆರ್ ದಾಖಲು ಮಾಡಲಾಗಿತ್ತು. ನಂತರ ನಡೆದ ಪೊಲೀಸರ ತನಿಖೆ ಹಾಗೂ ಜಾರ್ಜ್‌ಶೀಟ್‌ನಲ್ಲಿ ನರಸಿಂಹನನ್ನು A-15 ಹಾಗೂ ಜಾಗದ ಮಾಲೀಕರನ್ನು A-13,14,12,11ರನ್ನಾಗಿ ಮಾಡಲಾಗಿತ್ತು..

hunasoodu-blast-case-
ಹುಣಸೋಡು ಸ್ಪೋಟ ಪ್ರಕರಣ
author img

By

Published : Jun 11, 2021, 1:34 PM IST

ಶಿವಮೊಗ್ಗ : ಹುಣಸೋಡು ಬಳಿ ಕ್ವಾರಿಯಲ್ಲಿ ಜನವರಿ 22ರಂದು ಸಂಭವಿಸಿದ ಭಾರಿ ಸ್ಫೋಟದಿಂದಾಗಿ ಆರು ಮಂದಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರಿಗೆ ಷರತ್ತು ಬದ್ದ ಜಾಮೀನು ಲಭ್ಯವಾಗಿದೆ. ನರಸಿಂಹ, ಮುಮ್ತಾಜ್ ಅಹಮದ್, ರಶೀದ್, ಜಾಗದ ಮಾಲೀಕರಾದ ಶಂಕರಗೌಡ ಕುಲಕರ್ಣಿ ಹಾಗೂ ಅವಿನಾಶ್ ಕುಲಕರ್ಣಿ ಸೇರಿ ಐವರಿಗೆ ಶಿವಮೊಗ್ಗ ಜಿಲ್ಲಾ ಮುಖ್ಯ ನ್ಯಾಯಾಲಯದ ನ್ಯಾಯಾಧೀಶರಾದ ಮುಸ್ತಾಫ್ ಹುಸೇನ್‌ರವರು, ಷರತ್ತು ಬದ್ದ ಜಾಮೀನು ಮಂಜೂರು ಮಾಡಿದ್ದಾರೆ. ಉಳಿದ ಐವರು ಆರೋಪಿಗಳಿಗೆ ಇನ್ನೂ ಜಾಮೀನು ಮಂಜೂರಾಗಿಲ್ಲ.

ಹುಣಸೋಡು ಸ್ಪೋಟ ಪ್ರಕರಣದ ಆರೋಪಿಗಳಿಗೆ ಜಾಮೀನು..

ಓದಿ: ಶಿವಮೊಗ್ಗ ಸ್ಫೋಟ ಪ್ರಕರಣ: ಸರ್ಕಾರಕ್ಕೆ ತನಿಖಾ ವರದಿ ಕೇಳಿದ ಹೈಕೋರ್ಟ್

ಈ ಪ್ರಕರಣದಲ್ಲಿ ಅಂದೇ ಕ್ರಷರ್ ನಡೆಸುತ್ತಿದ್ದ ಸುಧಾಕರ್,‌ ಮ್ಯಾನೇಜರ್ ನರಸಿಂಹ, ಮುಮ್ತಾಜ್‌ರನ್ನು ಮೊದಲು ಬಂಧಿಸಲಾಗಿತ್ತು. ನಂತರ ಜಾಗದ ಮಾಲೀಕ ಶಂಕರಗೌಡ ಕುಲಕರ್ಣಿ ಇವರ ಪುತ್ರ ಅವಿನಾಶ್ ಕುಲಕರ್ಣಿ ಬಂಧನವಾಗಿತ್ತು. ನಂತರ ಸ್ಪೋಟಕಗಳನ್ನು ಸರಬರಾಜು ಮಾಡಿದ ಆಂಧ್ರದ ಅನಂತಪುರಂನ ಸಾಯಿ ಎಂಟರಪ್ರೈಸಸ್ ಮಾಲೀಕರಾದ ಶ್ರೀರಾಮುಲು ಇವರ ಪುತ್ರ ಮಂಜುನಾಥ್ ಸಾಯಿ, ಪೃಥ್ವಿನಾಥ್ ಸಾಯಿ ಹಾಗೂ ವಿಜಯ್‌ರನ್ನು ಬಂಧಿಸಲಾಗಿತ್ತು.

ಈ ಪ್ರಕರಣದಲ್ಲಿ ಕ್ರಷರ್ ನಡೆಸುತ್ತಿದ್ದ ಸುಧಾಕರ್‌ರನ್ನು A-1 ಹಾಗೂ ಜಾಗದ ಮಾಲೀಕರನ್ನು A-2 A-3 ಹಾಗೂ ನರಸಿಂಹರನ್ನು A-4 ಆಗಿಸಿ ಎಫ್ಐಆರ್ ದಾಖಲು ಮಾಡಲಾಗಿತ್ತು. ನಂತರ ನಡೆದ ಪೊಲೀಸರ ತನಿಖೆ ಹಾಗೂ ಜಾರ್ಜ್‌ಶೀಟ್‌ನಲ್ಲಿ ನರಸಿಂಹನನ್ನು A-15 ಹಾಗೂ ಜಾಗದ ಮಾಲೀಕರನ್ನು A-13,14,12,11ರನ್ನಾಗಿ ಮಾಡಲಾಗಿತ್ತು. ಇದರಿಂದಾಗಿ ಇವರಿಗೆಲ್ಲಾ ಜಾಮೀನು ಮಂಜೂರು ಮಾಡಲಾಗಿದೆ.

ಪ್ರಕರಣದ ಹಿನ್ನೆಲೆ : ಜಿಲ್ಲೆಯಲ್ಲಿ ಜನವರಿ 22ರ ಗುರುವಾರ ರಾತ್ರಿ ನಡೆದ ನಿಗೂಢ ಶಬ್ದದಿಂದಾಗಿ, ಇಡೀ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ಜನರಲ್ಲೂ ಆತಂಕ ಮನೆ ಮಾಡಿತ್ತು. ನಿಗೂಢ ಶಬ್ಧ, ಭೂಕಂಪನಾ ಎಂದು ಜನರು ಮಾತನಾಡಿಕೊಳ್ಳುವ ವೇಳೆಯಲ್ಲಿಯೇ ಶಿವಮೊಗ್ಗ ಸಮೀಪದ ಹುಣಸೋಡು ಗ್ರಾಮದ ಬಳಿ ಇರುವ ಕ್ರಷರ್‌ನಲ್ಲಿ ಒಂದು ಲಾರಿ ಲೋಡ್ ಜಿಲೆಟಿನ್ ಕಡ್ಡಿಗಳು ಒಮ್ಮೆಲೆ ಸ್ಫೋಟಗೊಂಡಿದ್ದು ಎಂಬುದು ತಿಳಿಯಿತು. ಘಟನೆಯಲ್ಲಿ ಆರು ಕಾರ್ಮಿಕರು ಮೃತಪಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.