ಹರಿದ್ವಾರ(ಉತ್ತರಾಖಂಡ್): ತನ್ನ ಗೆಳತಿಯನ್ನು ಖುಷಿಪಡಿಸಲು ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ಹರಿದ್ವಾರದಲ್ಲಿ ತಮಗೆ ಸರ್ಕಾರಿ ಸೌಲಭ್ಯಗಳು ಬೇಕೆಂದು ಬೇಡಿಕೆ ಇಟ್ಟಿದ್ದ ನಕಲಿ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ಸಾಗರ್ ವಾಘ್ಮರೆ(28) ಬಂಧಿತ ಆರೋಪಿ.
ಕಳೆದ ಎರಡು ದಿನಗಳ ಹಿಂದೆ ಈತ ಮುಂಬೈನ ಥಾಣೆಯಿಂದ ಹರಿದ್ವಾರಕ್ಕೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತಾನು 2018ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ನಗರದ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿಕೊಡಬೇಕು ಹಾಗೂ ಭದ್ರತಾ ಸಿಬ್ಬಂದಿ ನೀಡಬೇಕೆಂದು ಪೊಲೀಸರಿಗೆ ಒತ್ತಾಯಿಸಿದ್ದಾನೆ. ಇದೇ ಮಾಹಿತಿಯನ್ನು ಜಿಲ್ಲಾ ಎಸ್‌ಎಸ್‌ಪಿ ಯೋಗೇಂದ್ರ ರಾವತ್ ತಮ್ಮ ಮೇಲಾಧಿಕಾರಿಗಳಾದ ಸಿಒ ಅಭಯ್ ಪ್ರತಾಪ್‌ಗೆ ತಿಳಿಸಿದ್ದಾರೆ.
ಮಾಹಿತಿ ಪಡೆದ ಕೂಡಲೇ ಅಧಿಕಾರಿಗಳು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತಂಡವನ್ನು ರಚಿಸಿ ತನಿಖೆ ನಡೆಸಿದಾಗ 2018ರ ಬ್ಯಾಚ್‌ನಲ್ಲಿ ಸಾಗರ್ ವಾಘ್ಮರೆ ಎಂಬ ಯಾವುದೇ ಹೆಸರಿನವರು ಐಪಿಎಸ್ ಅಧಿಕಾರಿಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿಕೊಂಡಿದ್ದಾರೆ.
ಅದೇ ವೇಳೆಗೆ ಆರೋಪಿಯನ್ನು ನಗರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ತಾನು ಐಪಿಎಸ್ ಅಧಿಕಾರಿ ಅಲ್ಲ, ಬದಲಾಗಿ ಯುಪಿಎಸ್‌ಸಿ ಆಕಾಂಕ್ಷಿ ಎಂದು ತಿಳಿಸಿದ್ದಾನೆ. ವಿವಿಧ ಸೆಕ್ಷನ್‌ಗಳ ಅಡಿ ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇಂದು ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ. ಇಂತಹದ್ದೇ ಪ್ರಕರಣದಲ್ಲಿ ಪ್ರಯಾಗ್‌ರಾಜ್ ವಿಭಾಗದ ಎಸ್‌ಟಿಎಫ್ ಅಧಿಕಾರಿಗಳನ್ನು ನಕಲಿ ಅಧಿಕಾರಿಯನ್ನು ಬಂಧಿಸಿದ್ದರು.