ETV Bharat / crime

ನೆರೆಮನೆ ಮಹಿಳೆಗೆ ಕಿರುಕುಳ, ಜೀವ ಬೆದರಿಕೆ: ತೆಲಂಗಾಣ ಪೊಲೀಸ್​ ಕಾನ್ಸ್​ಟೇಬಲ್​ ಬಂಧನ - ಲೈಂಗಿಕ ಕಿರುಕುಳ ಯತ್ನ

ನ. 14ರಂದು ಈತ ಮತ್ತೆ ಆಕೆಯ ಮನೆಗೆ ನುಗ್ಗಿ, ಲೈಂಗಿಕ ಕಿರುಕುಳ ನೀಡುವ ಪ್ರಯತ್ನ ನಡೆಸಿದ್ದು, ಮಹಿಳೆ ವಿರೋಧಿಸಿದ್ದಾಳೆ. ಈ ಸಂಬಂಧ ಮಹಿಳೆ ಮತ್ತೆ ಪೊಲೀಸ್​ ಠಾಣೆಯಲ್ಲಿ ಕಾನ್ಸ್​ಟೇಬಲ್​ ವಿರುದ್ಧ ದೂರು ನೀಡಿದ್ದಾಳೆ.

ನೆರೆಮನೆ ಮಹಿಳೆಗೆ ಕಿರುಕುಳ, ಬೆದರಿಕೆ: ತೆಲಂಗಾಣ ಪೊಲೀಸ್​ ಕಾನ್ಸ್​ಟೇಬಲ್​ ಬಂಧನ
harassment-threat-to-neighbor-woman-telangana-police-constable-arrested
author img

By

Published : Nov 17, 2022, 1:20 PM IST

ಹೈದ್ರಾಬಾದ್​: ಮಹಿಳೆಗೆ ಬೆದರಿಕೆ ಮತ್ತು ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಆರೋಪದ ಮೇಲೆ ಪೊಲೀಸ್​ ಕಾನ್ಸ್​ಟೇಬಲ್​ ಓರ್ವರನ್ನು ಬಂಧಿಸಲಾಗಿದೆ. ಹೈದ್ರಾಬಾದ್​ ಪೊಲೀಸ್​ ಸ್ಪೆಷಲ್​ ಬ್ರಾಂಚ್​ನಲ್ಲಿ ಕೆಲಸ ಮಾಡುತ್ತಿದ್ದ ಕಾನ್ಸ್​ಟೇಬಲ್​ ತಮ್ಮ ನೆರೆಮನೆ ಮಹಿಳೆಗೆ ಕಿರುಕುಳ ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ರಾಜಧಾನಿಯ ಸೈದಾಬಾದ್​ ನಗರದಲ್ಲಿ ಕಳೆದ ಎಂಟು ವರ್ಷಗಳಿಂದ ಇವರಿಬ್ಬರು ಅಕ್ಕಪಕ್ಕದ ಮನೆಯಲ್ಲಿ ವಾಸ ಮಾಡುತ್ತಿದ್ದರು. ಈ ವೇಳೆ ಇವರ ಸಂಬಂಧ ಅಕ್ರಮಕ್ಕೆ ತಿರುಗಿತ್ತು.

ಇದರ ನಡುವೆ 2021ರ ಫೆಬ್ರವರಿಯಲ್ಲಿ ಮಹಿಳೆ ಕಾನ್ಸ್​ಟೇಬಲ್​ ವಿರುದ್ಧ ಭಾರತೀಯ ದಂಡ ಸಂಹಿತೆ ಅಡಿ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ಇಲಾಖೆಯಿಂದ ಕಾನ್ಸ್​ಟೇಬಲ್​ನನ್ನು ಅಮಾನತು ಮಾಡಲಾಗಿತ್ತು. ಆರು ತಿಂಗಳ ಬಳಿಕ ಮತ್ತೆ ಆತ ಕರ್ತವ್ಯಕ್ಕೆ ಮರಳಿದ ಎಂದು ಮೀರ್​ಪಿಟ್​ ಪೊಲೀಸ್​ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ಆಗಸ್ಟ್​ನಲ್ಲಿ ಕಾನ್ಸ್​ಟೇಬಲ್​ ಮಹಿಳೆ ಮನೆಗೆ ಹೋಗಿ, ಆಕೆಯ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿದ್ದ. ಈ ಸಂಬಂಧ ಮಹಿಳೆ ದೂರು ನೀಡಿದ್ದರು. ನ. 14ರಂದು ಈತ ಮತ್ತೆ ಆಕೆಯ ಮನೆಗೆ ನುಗ್ಗಿ, ಲೈಂಗಿಕ ಕಿರುಕುಳ ನೀಡುವ ಪ್ರಯತ್ನ ನಡೆಸಿದ್ದು, ಮಹಿಳೆ ವಿರೋಧಿಸಿದ್ದಾಳೆ. ಈ ಸಂಬಂಧ ಮಹಿಳೆ ಮತ್ತೆ ಪೊಲೀಸ್​ ಠಾಣೆಯಲ್ಲಿ ಕಾನ್ಸ್​ಟೇಬಲ್​ ವಿರುದ್ಧ ದೂರು ನೀಡಿದ್ದಾಳೆ.

ಇದನ್ನೂ ಓದಿ: ಮಹಿಳಾ ಸೇನಾಧಿಕಾರಿಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ: ಹಣ ದೋಚಿ ದುಷ್ಕರ್ಮಿಗಳು ಪರಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.