ವಿಜಯನಗರಂ (ಆಂಧ್ರಪ್ರದೇಶ): ಎರಡು ಆರ್‌ಟಿಸಿ ಬಸ್ಗಳು ಹಾಗೂ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ನಡೆದಿದೆ.
ಅಪಘಾತದಲ್ಲಿ ಎರಡೂ ಬಸ್‌ಗಳಲ್ಲಿನ 25 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆಯ ಬದಿಯಲ್ಲಿ ಕಸ ಸುಡಲಾಗಿದ್ದು, ದಟ್ಟವಾದ ಹೊಗೆ ಆವರಿಸಿಕೊಂಡಿದ್ದರಿಂದ ವಾಹನಗಳು ಕಾಣಿಸದೇ ಈ ದುರಂತ ಸಂಭವಿಸಿದೆ. ಮೊದಲು ಒಂದು ಬಸ್ ಹಾಗೂ ಲಾರಿ ಮುಖಾಮುಖಿಯಾಗಿದ್ದು, ಹಿಂದಿನಿಂದ ಮತ್ತೊಂದು ಬಸ್ ಬಂದು ಅಪಘಾತಕ್ಕೊಳಗಾಗಿದ್ದ ಬಸ್ಗೆ ಗುದ್ದಿದೆ.
ಇದನ್ನೂ ಓದಿ: ಹಿಟ್ ಅಂಡ್ ರನ್: ಹೋಳಿ ಹಬ್ಬದಂದೇ ಭೀಕರ ರಸ್ತೆ ಅಪಘಾತ, ನಾಲ್ವರ ಸಾವು!
ಸ್ಥಳಕ್ಕೆ ಪೊಲೀಸರು ಹಾಗೂ ಆರ್‌ಟಿಸಿ ಅಧಿಕಾರಿಗಳು ದೌಡಾಯಿಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.