ಗೊಂಡಾ (ಉತ್ತರ ಪ್ರದೇಶ): ಕೊಳದಲ್ಲಿ ಸ್ನಾನ ಮಾಡಲು ಹೋದ ಒಂದೇ ಕುಟುಂಬಕ್ಕೆ ಸೇರಿದ ಐವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ.
ನಾಲ್ವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಬಾಲಕ ಮೃತಪಟ್ಟಿದ್ದು, ಇವರೆಲ್ಲರೂ ಗೊಂಡಾದ ರಸೂಲ್‌ಪುರ್‌ಖಾನ್ ಗ್ರಾಮದಲ್ಲಿ ವಾಸವಾಗಿರುವ ಅರವಿಂದ್, ಸುರೇಂದ್ರ ಮತ್ತು ವೀರೇಂದ್ರ ಎಂಬ ಸಹೋದರರ ಮಕ್ಕಳಾಗಿದ್ದಾರೆ. ಮೃತ ಮಕ್ಕಳನ್ನು ಚಂಚಲ (8), ಶಿವಕಾಂತ್ (6), ರಾಗಿಣಿ (8), ಪ್ರಕಾಶಿನಿ (10), ಮುಸ್ಕಾನ್ (12) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಮದುವೆ ನಂತರವೂ ಮುಂದುವರೆದ ಪ್ರೀತಿ... ಪ್ರೇಮಿ ಜೊತೆ ನವವಿವಾಹಿತೆ ಆತ್ಮಹತ್ಯೆ!
ಮೊದಲು ಕೊಳಕ್ಕೆ ಇಳಿದ ಬಾಲಕ ಶಿವಕಾಂತ್ ಮುಳುಗಿದ್ದು, ಅವನನ್ನು ರಕ್ಷಿಸಲು ಹೋಗಿ ಉಳಿದ ಮಕ್ಕಳೂ ನೀರುಪಾಲಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.