ETV Bharat / crime

ಫೇಸ್​ಬುಕ್ ಗೆಳೆತನ ತಂದ ಆಪತ್ತು: ಉಚಿತ ಗಿಫ್ಟ್​ ಪಡೆಯಲು 39.73 ಲಕ್ಷ ರೂ. ಕಳೆದುಕೊಂಡ ಅಜ್ಜ ! - ಫೇಸ್​​ಬುಕ್​ ವಂಚನೆ ಪ್ರಕರಣ

ಕೆಲ ದಿನಗಳ ಬಳಿಕ ನಮ್ಮ ಸ್ನೇಹದ ಸಲುವಾಗಿ ಕ್ಯಾಲಿಪೋರ್ನಿಯಾನಿಂದ ಪೋಸ್ಟ್ ಮೂಲಕ ಗಿಫ್ಟ್ ಕಳುಹಿಸುವುದಾಗಿ ಹೇಳಿದ್ದಾರೆ. ಕಳೆದ ವರ್ಷ ನ.11ರಂದು ದೆಹಲಿ ಏರ್​ಪೋರ್ಟ್ ಕಸ್ಟಮ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ದುಷ್ಕರ್ಮಿಗಳು ನಿಮ್ಮ ಹೆಸರಿನಲ್ಲಿ ಗಿಫ್ಟ್ ಬಂದಿದೆ. ಕ್ಲಿಯರೆನ್ಸ್ ಮಾಡಿಕೊಳ್ಳಲು 35 ಸಾವಿರ ರೂ. ಪಾವತಿಸಬೇಕು. ಇಲ್ಲದಿದ್ದರೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.

elderly-lost-39-dot-73-lakhs-to-get-free-gift
ವೈಟ್ ಫೀಲ್ಡ್ ಸಿಇಎನ್ ಪೊಲೀಸ್ ಠಾಣೆ
author img

By

Published : Feb 22, 2021, 9:44 PM IST

ಬೆಂಗಳೂರು: ಫೇಸ್​ಬುಕ್ ಮುಖಾಂತರ ಪರಿಚಯವಾಗಿ ಸ್ನೇಹದ ಸೋಗಿನಲ್ಲಿ ಗಿಫ್ಟ್ ನೀಡುವುದಾಗಿ ನಂಬಿಸಿದ ಸೈಬರ್ ಖದೀಮರು ಹಂತ ಹಂತವಾಗಿ ವೃದ್ದನೊರ್ವನಿಂದ 39.73 ಲಕ್ಷ ರೂ. ವಂಚಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

70 ವರ್ಷ ವೃದ್ದ ನೀಡಿದ ದೂರಿನ ಮೇರೆಗೆ ವೈಟ್ ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುಎಸ್ಎ ಕ್ಯಾಲಿಪೋರ್ನಿಯಾದಿಂದ ರೇವಾ ಸಿಸ್ಟರ್ ಜೀನಾ ಎಂಬಾತ ಫೇಸ್​ಬುಕ್​ನಲ್ಲಿ ಬಳಕೆ ಮಾಡುತ್ತಿದ್ದ ಪೀಟರ್ (ಹೆಸರು ಬದಲಿಸಲಾಗಿದೆ) ಎಂಬುವರನ್ನು ಪರಿಚಯಿಸಿಕೊಂಡಿದ್ದಾನೆ. ನಂತರ ಮೊಬೈಲ್ ಪಡೆದು ನಂಬರ್ ಪಡೆದು ವಾಟ್ಸಾಪ್ ಮೂಲಕ ಮೇಸೆಜ್ ಮಾಡಿದ್ದಾರೆ.

ಕೆಲ ದಿನಗಳ ಬಳಿಕ ನಮ್ಮ ಸ್ನೇಹದ ಸಲುವಾಗಿ ಕ್ಯಾಲಿಪೋರ್ನಿಯಾದಿಂದ ಪೋಸ್ಟ್ ಮೂಲಕ ಗಿಫ್ಟ್ ಕಳುಹಿಸುವುದಾಗಿ ಹೇಳಿದ್ದಾರೆ. ಕಳೆದ ವರ್ಷ ನ.11ರಂದು ದೆಹಲಿ ಏರ್​ಪೋರ್ಟ್ ಕಸ್ಟಮ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ದುಷ್ಕರ್ಮಿಗಳು ನಿಮ್ಮ ಹೆಸರಿನಲ್ಲಿ ಗಿಫ್ಟ್ ಬಂದಿದೆ. ಕ್ಲಿಯರೆನ್ಸ್ ಮಾಡಿಕೊಳ್ಳಲು 35 ಸಾವಿರ ರೂ. ಪಾವತಿಸಬೇಕು. ಇಲ್ಲದಿದ್ದರೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಕ್ಯಾಲಿಪೋರ್ನಿಯಾದಿಂದ ಸ್ನೇಹಿತ ಉಡುಗೊರೆ ಕಳುಹಿಸಿರಬೇಕು ಎಂದು ಭಾವಿಸಿದ ಪೀಟರ್ ಬ್ಯಾಂಕ್ ಮುಖಾಂತರ 35 ಸಾವಿರ ರೂ. ಪಾವತಿ ಮಾಡಿದ್ದಾರೆ. ಬಳಿಕ ಜಿಎಸ್​ಟಿ ಶುಲ್ಕ, ಏರ್ ಪೊರ್ಟ್ ಕಸ್ಟಮ್ ಶುಲ್ಕ, ಹೀಗೆ ವಿಧ ವಿಧವಾಗಿ ಶುಲ್ಕ ಕಟ್ಟಬೇಕೆಂದು ನಂಬಿಸಿ ಹಂತ ಹಂತವಾಗಿ 39.73 ಲಕ್ಷ ರೂಪಾಯಿ ಪಾವತಿಸಿಕೊಂಡು ಯಾಮಾರಿಸಿದ್ದಾರೆ. 2020 ನವೆಂಬರ್​ನಿಂದ 2021ರ ಜನವರಿ 21ರ ವರೆಗೆ ಮೂರು ತಿಂಗಳ ಅಂತರದಲ್ಲಿ ಸೈಬರ್ ಖದೀಮರು ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಸೈಬರ್ ಕ್ರೈಂ ಪೊಲೀಸರು ಆರೋಪಿ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.