ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಡ್ರಗ್ಸ್ ಪ್ರಕರಣದಲ್ಲಿ ಗೋವಿಂದಪುರ ಪೊಲೀಸರಿಂದ ಬಂಧಿತನಾಗಿದ್ದ ಜಾನ್ ನೀಡಿದ ಸುಳಿವಿನ ಮೇರೆಗೆ ಮತ್ತೋರ್ವ ವಿದೇಶಿ ಡ್ರಗ್ಸ್ ಪೆಡ್ಲರ್ನನ್ನು ಬಂಧಿಸಲಾಗಿದೆ.
ಓದಿ: ಪ್ರಾಪರ್ಟಿ ಪರೇಡ್ ನಡೆಸಿದ ರೈಲ್ವೆ ಪೊಲೀಸರು.. ವಶಪಡಿಸಿಕೊಂಡ ಚಿನ್ನಾಭರಣ ಮಾಲೀಕರಿಗೆ ಹಸ್ತಾಂತರ
ಬಂಧಿತ ಆರೋಪಿ ಜೇಮ್ಸ್ ಕೆಲ್ವಿನ್ನಿಂದ 9 ಲಕ್ಷ ರೂ. ಮೌಲ್ಯದ 60 ಗ್ರಾಂ ತೂಕದ ಕೊಕೇನ್, ಕಾರು ಹಾಗೂ ಲಾಂಗ್ ವಶಪಡಿಸಿಕೊಳ್ಳಲಾಗಿದೆ. ಉದ್ಯಮಿಗಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿ ಜೇಮ್ಸ್, ಮನೆಯಿಂದಲೇ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ.
ಅಲ್ಲದೆ ಈತನೊಂದಿಗೆ ಬಂಧನಕ್ಕೊಳಗಾಗಿರುವ ಆರೋಪಿ ಜಾನ್ ಎಂಬುವನೊಂದಿಗೆ ಸೇರಿ ದಂಧೆ ನಡೆಸುತ್ತಿದ್ದ. ಒಂದು ವೇಳೆ ಪೊಲೀಸರು ದಾಳಿ ಮಾಡುವ ಮಾಹಿತಿ ಬಂದರೆ ತನ್ನ ಬಳಿಯಿದ್ದ ಡ್ರಗ್ಸ್ಗಳನ್ನು ಟಾಯ್ಲೆಟ್ನಲ್ಲಿ ಹಾಕಿ ನಾಶಪಡಿಸುತ್ತಿದ್ದನಂತೆ.
ಹೀಗಾಗಿ ಯಾವುದೇ ಅನುಮಾನ ಬರದೆ ಆರೋಪಿ ವರ್ತಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಮನೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.