ETV Bharat / crime

ಹಲ್ಲು ನೋವಿನ ಚಿಕಿತ್ಸೆಗೆ ಬಂದ ಮಹಿಳೆಯ ಮೇಲೆ ವೈದ್ಯನಿಂದ ಅತ್ಯಾಚಾರ - ಬರೇಲಿ ಕ್ರೈಮ್‌ ನ್ಯೂಸ್‌

ಚಿಕಿತ್ಸೆಗೆಂದು ಬಂದಿದ್ದ ಮಹಿಳೆ ಮೇಲೆ ವೈದ್ಯನೇ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

dentist rapes patient after drugging her in up
ಉತ್ತರ ಪ್ರದೇಶ: ಹಲ್ಲು ನೋವಿನ ಚಿಕಿತ್ಸೆಗೆ ಬಂದ ಮಹಿಳೆ ಮೇಲೆ ವೈದ್ಯನಿಂದಲ್ಲೇ ಅತ್ಯಾಚಾರ ಆರೋಪ
author img

By

Published : Nov 8, 2021, 10:53 PM IST

ಬರೇಲಿ(ಉತ್ತರ ಪ್ರದೇಶ): ಹಲ್ಲು ನೋವಿನ ಕಾರಣ ಚಿಕಿತ್ಸೆಗೆ ಬಂದಿದ್ದ ಮಹಿಳೆಯ ಮೇಲೆ ವೈದ್ಯನೇ ಅತ್ಯಾಚಾರ ಮಾಡಿರುವ ಆರೋಪ ಉತ್ತರ ಪ್ರದೇಶದ ಬರೇಲಿಯಲ್ಲಿ ಬೆಳಕಿಗೆ ಬಂದಿದೆ.

ಕಳೆದ ಅಕ್ಟೋಬರ್‌ 16 ರಂದು ಸ್ಥಳೀಯ ದಂತ ಆಸ್ಪತ್ರೆಗೆ ಮಹಿಳೆ ಹೋಗಿದ್ದಾಳೆ. ಈ ವೇಳೆ, ಹಲ್ಲು ತೆಗೆದುಹಾಕಬೇಕೆಂದು ಸಂತ್ರಸ್ತೆಗೆ ಹೇಳಿದ್ದ ದಂತ ವೈದ್ಯ ಮಿತಿಮೀರಿದ ಮತ್ತು ಬರುವ ಔಷಧಿ ನೀಡಿದ್ದಾನೆ. ಹಲ್ಲು ತೆಗೆದ ಕೂಡಲೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಪ್ರಜ್ಞೆ ಬಂದ ಬಳಿಕ ಸಂತ್ರಸ್ತೆಗೆ ಬೆದರಿಕೆ ಹಾಕಿರುವ ಕಾಮುಕ ವೈದ್ಯ, ಯಾರಿಗಾದರೂ ಹೇಳಿದರೆ ಹತ್ಯೆ ಮಾಡುತ್ತೇನೆ, ಕೃತ್ಯದ ವಿಡಿಯೋ ಬಿಡುಗಡೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ತಿಳಿಸಿದ್ದಾರೆ.

ಸಂತ್ರಸ್ತೆ ಪತಿಯಿಂದ ದೂರು

ಕೆಲವು ದಿನಗಳ ನಂತರ ಸಂತ್ರಸ್ತೆಯ ಪತಿಗೆ ಈ ವಿಷಯ ತಿಳಿದಿದ್ದು, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಿನ್ನೆ ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತೆ ಅತ್ಯಾಚಾರಕ್ಕೊಳಗಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.