ಕಾನ್ಪುರ್: ಇಲ್ಲಿಗೆ ಸಮೀಪದ ಕಿದ್ವಾಯಿ ನಗರದ ಹಿಂದೂ ಬಾಲಕನೊಬ್ಬನನ್ನು ಮುಸ್ಲಿಂ ಧರ್ಮಕ್ಕೆ ಪರಿವರ್ತನೆ ಮಾಡಲು ಯತ್ನಿಸಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ವಂಶ ಗುಪ್ತಾ ಹೆಸರಿನ 10ನೇ ತರಗತಿ ಬಾಲಕನನ್ನು ಮುಸ್ಲಿಂ ಧರ್ಮಕ್ಕೆ ಧರ್ಮಾಂತರಣ ಮಾಡಲು ಯತ್ನಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ ನಂತರ ಆ ಬಾಲಕ ಮನೆ ಬಿಟ್ಟು ಹೋಗಿದ್ದಾನೆ ಎಂದು ಹೇಳಲಾಗಿತ್ತು.
ಸದ್ಯ ಬಾಲಕನ ಮೊಬೈಲ್ ಜಿಪಿಎಸ್ ಲೋಕೆಶನ್ ಜೈಪುರದಲ್ಲಿರುವುದು ಪತ್ತೆಯಾಗಿದೆ. ಅಲ್ಲಿನ ರೈಲ್ವೆ ಪೊಲೀಸರು ಬಾಲಕನ್ನು ಹಿಡಿದಿಟ್ಟುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹನುಮಂತ ವಿಹಾರ ಠಾಣೆಯ ಪೊಲೀಸರ ಸಹಾಯದಿಂದ ತಮ್ಮ ಮಗನನ್ನು ಮರಳಿ ಮನೆಗೆ ಕರೆತರಲು ಕುಟುಂಬಸ್ಥರು ಪ್ರಯತ್ನಿಸುತ್ತಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಪ್ರಕರಣದ ವಿವರ ಹೀಗಿದೆ: ಸಂಜಯ್ ಗಾಂಧಿ ನಗರದ ನಿವಾಸಿ ರಾಕೇಶ ಗುಪ್ತಾ ಎಂಬುವರ ಮಗ ವಂಶ ಗುಪ್ತಾ (18) ಎಂಬಾತ ಪ್ರತಿಷ್ಠಿತ ಮದರ್ ತೆರೇಸಾ ಶಾಲೆಯಲ್ಲಿ ಓದುತ್ತಿದ್ದಾನೆ. ಶಾಲೆಯಲ್ಲಿ ಕೆಲ ಮುಸ್ಲಿಂ ಹುಡುಗರೊಂದಿಗೆ ಅವನ ದೋಸ್ತಿ ಬೆಳೆದಿತ್ತು. ಗೆಳೆಯರ ಒತ್ತಾಯದಿಂದ ಆತ ನಿಧಾನವಾಗಿ ಮುಸ್ಲಿಂ ಧರ್ಮದತ್ತ ಒಲವು ಬೆಳೆಸಿಕೊಳ್ಳತೊಡಗಿದ್ದ. ಇದರ ಬಗ್ಗೆ ಮಾಹಿತಿ ತಿಳಿದ ಮನೆಯವರು ಆತನಿಗೆ ಹೀಗೆ ಮಾಡದಂತೆ ಬುದ್ಧಿ ಹೇಳಿದ್ದರು. ಇದಾದ ನಂತರ ಗುರುವಾರ ಸಂಜೆ ಬಾಲಕ ವಂಶ ಮನೆಯಿಂದ ಕಾಣೆಯಾಗಿದ್ದಾನೆ ಎನ್ನಲಾಗಿದೆ.
ತಡರಾತ್ರಿಯಾದರೂ ಮಗ ಮನೆಗೆ ಬಾರದೇ ಇದ್ದಾಗ ಕುಟುಂಬದಲ್ಲಿ ಆತಂಕ ಉಂಟಾಗಿತ್ತು. ಬಳಿಕ ಕುಟುಂಬದವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ವಂಶ್‌ನ ಬ್ಯಾಗ್ ನೋಡಿದಾಗ ಅವನ ನೋಟ್ಬುಕ್ಗಳಲ್ಲಿ ಇಸ್ಲಾಂ ಬಗ್ಗೆ ಮಾಹಿತಿ ಇತ್ತು ಎಂದು ಹೇಳಲಾಗುತ್ತಿದೆ.
ಬಾಲಕನ ಈ ಪ್ರಕರಣವು ಇಸ್ಲಾಮಿಕ್ ಜಿಹಾದ್ನ ಮತ್ತೊಂದು ರೂಪ ಎನ್ನಲಾಗಿದೆ. ಸದ್ಯ ತಮ್ಮ ಮಗನನ್ನು ಮರಳಿ ತರುವತ್ತ ಗಮನಹರಿಸಿರುವ ಬಾಲಕನ ಕುಟುಂಬದವರು ಏನನ್ನೂ ಮಾತನಾಡುವ ಸ್ಥಿತಿಯಲ್ಲಿಲ್ಲ. ಕಳೆದ ಒಂದು ವರ್ಷದಿಂದ ವಂಶ ಮನೆಯಲ್ಲಿ ಇಸ್ಲಾಮ್ಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡುತ್ತಿದ್ದ ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.