ETV Bharat / crime

ಚಿನ್ನ ತುಂಬಿದ ಮಾತ್ರೆಗಳನ್ನು ನುಂಗಿದ್ದ ಪ್ರಯಾಣಿಕ ಅರೆಸ್ಟ್​: 13 ಲಕ್ಷ ರೂ. ಮೌಲ್ಯದ ಬಂಗಾರ ವಶಕ್ಕೆ - 13 ಲಕ್ಷ ರೂ. ಮೌಲ್ಯದ ಬಂಗಾರ ವಶಕ್ಕೆ

ಪೇಸ್ಟ್​ ರೂಪದಲ್ಲಿನ ಚಿನ್ನವನ್ನು ತುಂಬಿದ ಮಾತ್ರೆ​ಗಳನ್ನು ದುಬೈನಿಂದ ಬಂದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

Chennai Air Customs seizes gold worth Rs 13 Lakh
13 ಲಕ್ಷ ರೂ. ಮೌಲ್ಯದ ಬಂಗಾರ ವಶಕ್ಕೆ
author img

By

Published : Mar 18, 2021, 6:56 AM IST

ಚೆನ್ನೈ (ತಮಿಳುನಾಡು): ಪ್ರಯಾಣಿಕನೊಬ್ಬನಿಂದ 13 ಲಕ್ಷ ರೂ. ಮೌಲ್ಯದ 281 ಗ್ರಾಂ ಚಿನ್ನ ಹಾಗೂ 19.85 ಲಕ್ಷದ ಎಲೆಕ್ಟ್ರಾನಿಕ್​​ ವಸ್ತುಗಳನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಮಾರ್ಚ್ 10 ರಂದು ದುಬೈನಿಂದ ಆಗಮಿಸಿದ ಮೊಹಮ್ಮದ್ ರಿಯಾಸ್​ ಪೇಸ್ಟ್​ ರೂಪದಲ್ಲಿನ ಚಿನ್ನವನ್ನು ತುಂಬಿದ ಮಾತ್ರೆ​ಗಳನ್ನು ​​ನುಂಗಿಕೊಂಡು ಬಂದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆತನ ಬ್ಯಾಗ್​ನಲ್ಲಿದ್ದ ನಾಲ್ಕು ಐಫೋನ್, ಆರು ಆ್ಯಪಲ್ ವಾಚ್‌ಗಳು ಹಾಗೂ ಐದು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ನೂರು ಮಂದಿ ಪ್ರಯಾಣಿಕರಿದ್ದ ಬಸ್​ ಪಲ್ಟಿ: 14 ಜನರಿಗೆ ಗಾಯ

ನುಂಗಿದ ಕ್ಯಾಪ್ಸುಲ್‌ಗಳಿಂದ ಚಿನ್ನವನ್ನು ವಶಪಡಿಸಿಕೊಳ್ಳಲು ರಿಯಾಸ್‌ನನ್ನು ಅದೇ ದಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಸುಮಾರು ಒಂದು ವಾರದ ನಂತರ 372 ಗ್ರಾಂ ತೂಕದ 34 ಸಿಲಿಂಡರ್​ ಆಕಾರದ ಮಾತ್ರೆಗಳನ್ನು ಹೊರತೆಗೆಯಲಾಗಿದ್ದು, ಅದರೊಳಗೆ 281 ಗ್ರಾಂ ಬಂಗಾರವಿತ್ತು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.