ETV Bharat / crime

ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ತುಟಿ ಕಚ್ಚಿ ತುಂಡರಿಸಿದ ಧೀರೆ.. - ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ

ತನ್ನ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಯುವಕನೊಬ್ಬನ ತುಟಿಗಳನ್ನೇ ಕಚ್ಚಿ ಮಹಿಳೆಯೊಬ್ಬಳು ತನ್ನ ಪ್ರಾಣ ಉಳಿಸಿಕೊಂಡ ಘಟನೆ ಮೀರತ್​ನಲ್ಲಿ ನಡೆದಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಧೈರ್ಯದಿಂದ ಹೋರಾಡಿದ್ದಾಳೆ.

meerut brave woman
ಅತ್ಯಾಚಾರಿಯ ತುಟಿ ಕಚ್ಚಿ ತುಂಡರಿಸಿದ ಧೀರೆ! ಮೀರತ್​ನಲ್ಲಿ ಘಟನೆ
author img

By

Published : Feb 5, 2023, 7:36 PM IST

ಮೀರತ್(ಉತ್ತರ ಪ್ರದೇಶ): ತನ್ನ ಮೇಲೆ ಅತ್ಯಾಚಾರವೆಸಗಲು ಬಂದ ಕಾಮುಕನ ವಿರುದ್ಧ ಮಹಿಳೆಯೊಬ್ಬರು ಧೈರ್ಯದಿಂದ ಹೋರಾಡಿ ಪ್ರಾಣ ಉಳಿಸಿಕೊಂಡ ಘಟನೆ ಮೀರತ್ ಜಿಲ್ಲೆಯಲ್ಲಿ ನಡೆದಿದೆ. ಆತ್ಮರಕ್ಷಣೆಗಾಗಿ ಮಹಿಳೆಯು ಅತ್ಯಾಚಾರಿಯ ತುಟಿಗಳನ್ನು ತನ್ನ ಹಲ್ಲಿನಿಂದ ಕಚ್ಚಿ ತುಂಡರಿಸಿ ಹಾಕಿದ್ದಾಳೆ. ಮಹಿಳೆಯ ರೌದ್ರಾವತಾರದಿಂದ ಆರೋಪಿಯ ತುಟಿಗಳು ಕತ್ತರಿಸಿ ಬಾಯಿಂದ ರಕ್ತ ಸುರಿಯಲಾರಂಭಿಸಿದೆ. ನೋವಿನಿಂದ ಆತ ಚೀರಾಡುವುದನ್ನು ಕೇಳಿ ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ದೌರಾಲಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರು ಶನಿವಾರ ಮಧ್ಯಾಹ್ನ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಯಾರೋ ಹಿಂದಿನಿಂದ ಬಂದು ಅವಳನ್ನು ಹಿಡಿದಿದ್ದಾರೆ. ಆದರೆ ಹಿಂದಿನಿಂದ ಹಿಡಿದವರು ಯಾರು ಎಂದು ಅರ್ಥ ಮಾಡಿಕೊಳ್ಳುವ ಮೊದಲೇ ಆತ ಮಹಿಳೆಯನ್ನು ನೆಲಕ್ಕೆ ಕೆಡವಿ ಆಕೆಯ ಮೇಲೆ ಅತ್ಯಾಚಾರವೆಸಗುವ ಉದ್ದೇಶದಿಂದ ಬಟ್ಟೆ ಹರಿಯಲು ಆರಂಭಿಸಿದ್ದಾನೆ ಎಂದು ಸಂತ್ರಸ್ತ ಮಹಿಳೆ ದಾಖಲಿಸಿದ ಎಫ್​ಐಆರ್​ನಲ್ಲಿ ತಿಳಿಸಲಾಗಿದೆ.

ಯುವಕನಿಂದ ತನ್ನನ್ನು ರಕ್ಷಿಸಿಕೊಳ್ಳಲು ಶಕ್ತಿಮೀರಿ ಪ್ರಯತ್ನಿಸಿದರೂ ಬಿಡದ ಯುವಕ ಆಕೆಯನ್ನು ಬಲವಂತವಾಗಿ ಚುಂಬಿಸಲು ಪ್ರಾರಂಭಿಸಿದ್ದಾನೆ. ಆಗ ಮಹಿಳೆ ತನ್ನ ರಕ್ಷಣೆಗಾಗಿ ಯುವಕನ ತುಟಿಗಳನ್ನು ಬಲವಾಗಿ ಕಚ್ಚಿದ್ದಾಳೆ. ಆಕೆ ಎಷ್ಟು ಬಲವಾಗಿ ಕಚ್ಚಿದ್ದಳೆಂದರೆ ಯುವಕನ ತುಟಿ ಹರಿದು ಕಿತ್ತು ಬಂದಿದೆ. ಆಗ ಯುವಕನ ಬಾಯಿಯಿಂದ ರಕ್ತ ಹರಿದು ಒದ್ದಾಡಲಾರಂಭಿಸಿದ್ದಾನೆ. ಆಗ ಮಹಿಳೆ ಆತನಿಂದ ದೂರ ಸರಿದಿದ್ದಾಳೆ ಹಾಗೂ ಜೋರಾಗಿ ಕಿರುಚಾಡಿದ್ದಾಳೆ.

ಸದ್ದು ಕೇಳಿ ಸುತ್ತಮುತ್ತಲಿನ ಗದ್ದೆಗಳಲ್ಲಿ ಕೆಲಸ ಮಾಡುತ್ತಿರುವವರು ಜಮಾಯಿಸಿದ್ದಾರೆ. ನಡೆದ ಘಟನೆಯನ್ನು ಮಹಿಳೆ ವಿವರಿಸಿದ್ದಾಳೆ. ನಂತರ ಜನರು ಆರೋಪಿಯನ್ನು ಹಿಡಿದು ಇಟ್ಟಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ವಿಚಾರಣೆ ನಡೆಸಿ ಆರೋಪಿಯ ತುಟಿಯನ್ನು ಪ್ಯಾಕೆಟ್‌ನಲ್ಲಿ ಸೀಲ್ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೆ ಯುವಕನನ್ನೂ ವಶಕ್ಕೆ ಪಡೆದಿದ್ದಾರೆ. ಆರೋಪಿ ಯುವಕನ ವಿರುದ್ಧ ಮಹಿಳೆ ದೂರು ನೀಡಿದ್ದು, ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪೊಲೀಸರು ಗಾಯಗೊಂಡ ಯುವಕನಿಗೆ ಸಿಎಚ್‌ಸಿ ದೌರಾಲಾದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಘಟನೆಯ ಕುರಿತು ಮಾಹಿತಿ ನೀಡಿದ ದೌರಾಲಾ ಪೊಲೀಸ್ ಠಾಣೆ ಪ್ರಭಾರಿ ಸಂಜಯ್ ಕುಮಾರ್ ಶರ್ಮಾ, ವಿವಾಹಿತ ಮಹಿಳೆ ಒಬ್ಬಂಟಿಯಾಗಿರುವುದನ್ನು ಕಂಡು, ಲವಾದ್ ಪಟ್ಟಣದ ನಿವಾಸಿ ಮೋಹಿತ್ ಸೈನಿ ಎಂಬಾತ ಹಳ್ಳಿಯಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಆರೋಪಿಯ ತುಟಿಗಳನ್ನು ತನ್ನ ಹಲ್ಲುಗಳಿಂದ ಕತ್ತರಿಸಿ ಬೇರ್ಪಡಿಸಿದ್ದಾಳೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಹಿಡಿದು ಕಸ್ಟಡಿಗೆ ತೆಗೆದುಕೊಂಡಿದ್ದು, ನೆಲದ ಮೇಲೆ ಬಿದ್ದಿದ್ದ ಆತನ ತುಟಿಯ ತುಂಡನ್ನೂ ಪ್ಯಾಕೆಟ್‌ನಲ್ಲಿ ಸೀಲ್ ಮಾಡಿದ್ದಾರೆ ಎಂದು ಹೇಳಿದರು.

ಮಹಿಳೆಯ ಪತಿಯ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಅತ್ಯಾಚಾರ ಯತ್ನ ಮತ್ತು ಕಿರುಕುಳದ ಪ್ರಕರಣ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ಸಂಜಯ್ ಕುಮಾರ್ ಶರ್ಮಾ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ.. ಹತ್ಯೆ ಆರೋಪಿಗೆ ಕೇವಲ 64 ದಿನಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದ ಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.