ETV Bharat / crime

12ನೇ ಮಹಡಿಯಿಂದ ಬಿದ್ದು 1 ವರ್ಷದ ಬಾಲಕ ಸಾವು.. ಹುಟ್ಟುಹಬ್ಬದಂದೇ ದುರಂತ - 12ನೇ ಮಹಡಿಯಿಂದ ಬಿದ್ದು ಬಾಲಕ ಸಾವು

ಹುಟ್ಟುಹಬ್ಬದಂದೇ 12ನೇ ಮಹಡಿಯಿಂದ ಬಿದ್ದು 1 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಪಶ್ಚಿಮ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಪೋಷಕರು ಹಾಗೂ ಸಂಬಂಧಿಕರು ಹುಟ್ಟುಹಬ್ಬ ಆಚರಣೆಗೆ ಅಲಂಕಾರ ಮಾಡುತ್ತಿದ್ದಾಗಲೇ ಈ ದುರಂತ ಸಂಭವಿಸಿದ್ದು, ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ.

Boy falls to death from 12th floor on first birthday
ಹುಟ್ಟುಹಬ್ಬದಂದೇ 12ನೇ ಮಹಡಿಯಿಂದ ಬಿದ್ದು 1 ವರ್ಷದ ಬಾಲಕ ಸಾವು
author img

By

Published : Aug 24, 2021, 11:55 AM IST

ನೋಯ್ಡಾ(ಉತ್ತರ ಪ್ರದೇಶ): 12ನೇ ಮಹಡಿಯ ಸ್ಟೇರ್‌ಕೇಸ್‌ ನಡುವೆ ಸಿಲುಕಿ 1 ವರ್ಷದ ಮಗು ಹುಟ್ಟುಹಬ್ಬದಂದೇ ಮೃತಪಟ್ಟಿರುವ ಹೃದಯ ವಿದ್ರಾವಯಕ ಘಟನೆ ಪಶ್ಚಿಮ ಗ್ರೇಟರ್‌ ನೋಯ್ಡಾದಲ್ಲಿ ನಡೆದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಬಾಲಕನ ಕುಟುಂಬಸ್ಥರು ಹಾಗೂ ಸಂಬಂಧಿಕರು ಹುಟ್ಟುಹಬ್ಬ ಆಚರಣೆಗಾಗಿ ಅಲಂಕಾರ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಹೇಳಿದ್ದಾರೆ.

12ನೇ ಮಹಡಿಯಲ್ಲಿನ ಆಟದ ಪ್ರದೇಶದಲ್ಲಿ ಮಗು ಆಟವಾಡುತ್ತಿದ್ದಾಗ ಸ್ಟೇರ್‌ಕೇಸ್‌ಗೆ ಅಡ್ಡಲಾಗಿ ನಿರ್ಮಿಸಿದ್ದ ಕಬ್ಬಿಣದ ಕಂಬಿಗಳ ನಡುವಿನ ಸಂದಿಯಲ್ಲಿ ಮುಗುಚಿದ ಮಗು ನೆಲದ ಮಹಡಿಗೆ ಬಂದು ಬಿದ್ದಿದೆ ಎಂದು ಘಟನೆ ಕುರಿತು ಅಧಿಕಾರಿಗಳು ವಿವರಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ : ಕಲ್ಲು ಗಣಿಯಲ್ಲಿ ಆಯತಪ್ಪಿ ಬಿದ್ದು ಬಾಲಕ ಸಾವು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.